ಶಾಂತಿ ಪಾಲನಾ ಸಭೆ

ಮುನವಳ್ಳಿ,ಏ10: ಪಟ್ಟಣದ ಪೊಲೀಸ್ ಹೊರ ಠಾಣೆಯಲ್ಲಿ ರಂಜಾನ ಶಾಂತಿ ಪಾಲನಾ ಸಭೆ ಜರುಗಿತು.
ರಾಮದುರ್ಗ ಡಿ.ಎಸ್.ಪಿ ಎಂ. ಪಾಂಡುರಂಗಯ್ಯ ಮಾತನಾಡಿ ಹಬ್ಬಗಳ ಆಚರಣೆ ಜೊತೆಗೆ ಶಾಂತತೆಯನ್ನು ಕಾಯ್ದುಕೊಳ್ಳಬೇಕು, ಪೊಲೀಸ್‍ಸ್ನೇಹಿ ವಾತಾವರಣ ಇರುವುದರಿಂದ ನಿಮ್ಮ ಯಾವುದೆ ತೊಂದರೆಗಳಿಗೆ ಪೊಲೀಸರನ್ನು ಸಂಪರ್ಕಿಸಿರಿ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಅಂಬರೀಷ ಯಲಿಗಾರ ಮಾತನಾಡಿ ಹಬ್ಬಹರಿದಿನಗಳನ್ನು ಶಾಂತ ರೀತಿಯಿಂದ ಶೃಧ್ಧಾಭಕ್ತಿಯಿಂದ ಆಚರಿಸಬೇಕು ಪಟ್ಟಣದಲ್ಲಿ ಎಲ್ಲ ಜಾತಿ ಜನಾಂಗದವರು ಕೂಡಿ ಬಾಳುತ್ತಿದ್ದಾರೆ ಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ ಯುವಕರು ಹೆಚ್ಚಿನ ಸಹಕಾರ ನೀಡಬೆಕು ಎಂದರು.
ಪಂಚನಗೌಡ ದ್ಯಾಮನಗೌಡರ, ಡಾ. ಬಶೀರ ಅಹ್ಮದ ಬೈರಕದಾರ ಇಸ್ಮಾಯಿಲ್ ವಟ್ನಾಳ ಮಾತನಾಡಿದರು.
ಸವದತ್ತಿ ಸಿ.ಪಿ.ಐ ಸುರೇಶ ಬೆಂಡೆಗುಂಬಳ ಮಾತನಾಡಿದರು ಪಿ.ಎಸ್.ಐ ಆನಂದ ಕರಿಕಟ್ಟಿ ಎ.ಎಸ್.ಐ ಎನ್.ವಿ.ಧಾರವಾಡ ಹವಾಲ್ದಾರ್ ವೈ.ಎಸ್.ಅಜ್ಜನ್ನವರ, ಗೋಪಾಲ ಪಾಟೊಳಿ, ಗಿರೀಶ ಕಾಂಬಳೆ, ಎಂ.ಎಂ.ತಲ್ಲೂರ, ವಿಠ್ಠಲ ಹಳಬರ, ಮಾದೇವ ಮಣ್ಣಿಕೇರಿ, ಪ್ರಕಾಶ ಕಾಮಣ್ಣವರ, ನಾಗಪ್ಪ ಕಾಮಣ್ಣವರ, ಮಿರಾಸಾಬ ವಟ್ನಾಳ, ಹುಸೇನ ಪಠಾಣ, ಸರದಾರ ಕೊಳಚಿ, ಗುರುರಾಜ ಚಂದರಗಿ, ರಫೀಕ ಬೇಪಾರಿ, ಈಶ್ವರ ಕರಿಕಟ್ಟಿ, ಅರುಣಗೌಡ ಪಾಟೀಲ, ಇತರರು ಉಪಸ್ಥಿತರಿದ್ದರು.