ಶಾಂತಿ, ನೆಮ್ಮದಿಗೆ ಭಕ್ತಿ ಮಾರ್ಗ ಬಹುಮುಖ್ಯ

ರಾಣೇಬೆನ್ನೂರು ಜೂ 8: ಮನುಷ್ಯನಿಗೆ ಸಮಾಜದಲ್ಲಿ ಜೀವಿಸಲು ಅತ್ಯಾಧುನಿಕ ಸೌಲಭ್ಯಗಳು ದೊರಕುತ್ತಿರುವುದರಿಂದ ದೇವನೆಡೆಗೆ ಸಾಗುವ ಭಕ್ತಿಯ ಮಾರ್ಗವನ್ನು ಬಿಟ್ಟು ಲೌಕಿಕತೆ, ಆಧುನಿಕತೆ, ಮತ್ತು ವಿದೇಶಿ ಸಂಸ್ಕೃತಿಯ ಕಡೆ ಸಾಗುತ್ತಿದ್ದಾನೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸಲು ಭಕ್ತಿಯ ಮಾರ್ಗ ಬಹು ಮುಖ್ಯ ವೆಂದು ಸಾಗರ ವೀರಾಪುರ ಹಿರೇಮಠದ ಡಾ: ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ಅವರು ಬಿಎಜೆಎಸ್‍ಎಸ್ ಕಾಲೇಜು ಗಾಯಿತ್ರಿ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಕೋಟಿ ಗಾಯತ್ರಿ ಯಜ್ಞ ದ 17 ವಾರ್ಷಿಕೋತ್ಸವ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಗಾಯತ್ರಿ ಮಂತ್ರಕ್ಕೆ ಅಪಾರವಾದ ಶಕ್ತಿ ಇದೆ ಹಾಗೆಯೇ ಭಕ್ತಿಯ ರಾಗಗಳಿಗೆ ಭಾವವಿದೆ ಇದನ್ನು ಭಕ್ತರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಲಿಸಿದರೆ, ಮನೋವೈಕಲ್ಯ ನಿವಾರಣೆಯಾಗುತ್ತದೆ ಇಲ್ಲಿ ನಡೆಯುತ್ತಿರುವ ಜಪ ಯಜ್ಞದ ಮಹತ್ವವನ್ನು ಅರಿತು ಸ್ಪಂದಿಸಬೇಕೆ ಹೊರತು, ಗಲಾಟೆ ಮಾಡುವುದು, ಅನ್ಯ ಚಟುವಟಿಕೆಗೆ ಆದ್ಯತೆ ನೀಡದೇ, ಸರ್ವರು ಗಾಯಿತ್ರಿ ಮಂತ್ರ ರುದ್ರ ಪಠಣ ಮಾಡುವುದನ್ನು ಭಕ್ತಿಯಿಂದ ಶ್ರವಣಿಸಿದರೆ ಮಾತ್ರ ವೈಕಲ್ಯತೆಯನ್ನು ಕಳೆದುಕೊಂಡು, ಭಕ್ತಿಯ ಮಾರ್ಗದಲ್ಲಿ ಸಾಗಲು ಸಾಧ್ಯವಾಗುವುದು ಎಂದರು.
ದಿವ್ಯ ನೇತ್ರತ್ವದಲ್ಲಿದ್ದ ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜಿ ಮಹಾರಾಜ್ ಅವರು ಆಧುನಿಕ ಜೀವನ ಶೈಲಿ ಇಂದು ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಕಲುಷಿತಗೊಳ್ಳುತ್ತಲ್ಲಿದೆ.ಪ್ರಬುದ್ಧತೆಯ ಕೊರತೆಯಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತಲಿದೆ ಎಂದ ಸ್ವಾಮೀಜಿ, ಭಾರತದ, ಧರ್ಮ ಸಂಸ್ಕೃತಿ ವಿಶ್ವದ ಎಲ್ಲಾ ರಾಷ್ಟ್ರಗಳು ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಲಿವೆ. ಇಂತಹ ಸಂದರ್ಭದಲ್ಲಿ ಸನಾತನ ಧರ್ಮದ ಅನುಯಾಯಿಗಳಾದ ಭಾರತೀಯರು, ಶಾಂತಿ ನೆಮ್ಮದಿಯಿಂದ ಬದುಕನ್ನು ಸಾಗಿಸಲು ಮುಂದಾಗಬೇಕು ಎಂದರು.
ಮತ್ತೋರ್ವ ಶ್ರೀಗಳಾದ ಯಕ್ಷಿ ಶ್ರೀ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಮಾದೇವ ಸ್ವಾಮೀಜಿ ಅಂಬಿಗ ಅವರು, ಭಾರತೀಯರು ಧರ್ಮದ ಅನುಯಾಯಿಗಳು, ನಂಬಿಕೆ ಪ್ರೀತಿ ವಿಶ್ವಾಸ ಭಾರತೀಯರ ಸಹಜ ಗುಣಧರ್ಮ, ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯಿಂದ ಬದುಕು ಸಾಗಿಸುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಎಂದರು.ಬಿಜೆಎಸ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಯು, ಧರ್ಮ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಪ್ರಾಸ್ತಾನಿಕವಾಗಿ ಮಾತನಾಡಿದ, ಕಾಲೇಜು ಆಡಳಿತಾಧಿಕಾರಿ ಡಾ: ಆರ್.ಎಂ. ಕುಬೇರಪ್ಪ ಅವರು, ಅಂದು ತಡಸದ ಗಾಯಿತ್ರಿ ತಪೆÇೀಭೂಮಿಯ ವಲ್ಲಭ ಚೈತನ್ಯ ಮಹಾರಾಜರು ಆರಂಭಿಸಿದ ಗಾಯತ್ರಿ ಸಮೂಹದ ಪರಿಸರದಲ್ಲಿ ನಿರಂತರ, ಹೋಮ ಹವನ, ಜಪ ಯಜ್ಞ ನಿರಂತರವಾಗಿ ನಡೆದುಕೊಂಡು ಬಂದಿದೆ. ಧಾರ್ಮಿಕ ಹಿಂದು ಸಂಸ್ಕೃತಿ, ಸನಾತನ ಧರ್ಮ ಪರಂಪರೆ ಶಿಕ್ಷಣ ಮತ್ತು ಸಂಸ್ಕೃತಿ ಅಳವಡಿಸಿಕೊಂಡು ವಿದ್ಯಾರ್ಥಿಗಳ ಸಂಸ್ಕಾರವನ್ನು ಮತ್ತು ಅವರ ಉಜ್ಜಲ ಭವಿಷ್ಯವನ್ನು ಕೊಡುತ್ತಾ ಬಂದಿದ್ದೇವೆ ಎಂದರು. ರಾಜ್ಯ ರಾಷ್ಟ್ರದಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧಿ ಹೊಂದಿರುವ, ವೀರಾಪುರದ ಮರುಳಸಿದ್ದ, ಪಂಡಿತಾರಾಧ್ಯ ಶಿವಾಚಾರ್ಯರು ಹಾಕಿ ಕೊಟ್ಟಿರುವ ಮಾರ್ಗದರ್ಶನದಂತೆ ನಿತ್ಯ ನಿರಂತರವಾಗಿ ನಡೆಸುತ್ತಾ ಸಾಗಿದ್ದೇವೆ ಈ ಶಿಕ್ಷಣ ಪರಿಸರ ಪುಣ್ಯ ಭೂಮಿಯಾಗಿ, ಶಿಕ್ಷಣ ಮತ್ತು ಧರ್ಮ ಸಂಗಮವಾಗಿ ಸಾಗಿದೆ ಇದೆಲ್ಲವೂ ಪೂರ್ವಜನ್ಮದ ಪುಣ್ಯದ ಫಲವೆಂದು ಭಾವಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.