ಶಾಂತಿ ನಿಕೇತನ ಶಾಲೆ ನೂತನ ಕಟ್ಟಡ ಉದ್ಘಾಟನೆ

ಗುರುಮಠಕಲ್ ನ 17: ತಾಲೂಕು ಸಮೀಪದಲ್ಲಿರುವ ಚಪೆಟ್ಲಾ ಗ್ರಾಮದಲ್ಲಿ ಮಹೇಶ್ವರಿ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ,ಶಾಂತಿ ನಿಕೇತನ ಪ್ರಾಥಮಿಕ ಶಾಲೆ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದ ಉದ್ಘಾಟನೆಯು ಗುರುಮಠಕಲ್ ಖಾಸಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರ ಸಾನಿಧ್ಯ ದಲ್ಲಿ ಜರುಗಿತು.
ಕಾರ್ಯಕ್ರಮ ದಲ್ಲಿ ವಿಶೇಷ ಉಪನ್ಯಾಸ ಕರಾಗಿ ಆಗಮಿಸಿದ ವಿದ್ಯಾ ಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಸಹಕಾರ್ಯದರ್ಶಿ ಪಿ.ಭೀಮರೆಡ್ಡಿಯವರು ಮಾತನಾಡುತ್ತ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತು ಸಮಾಜದಲ್ಲಿ ಉತ್ತಮ ಪ್ರಜೆ ಗಳಾಗಿ ಸಮುದಾಯದ ಏಳಿಗೆಗೆ ಕಾರಣವಾಗಲಿ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ ರೆಡ್ಡಿ ಯಾದಗಿರಿ ಶಾರದಾ ಆಯುರ್ವೇದ ವೈದ್ಯ ಕೀಯ ಕಾಲೇಜು . ಸಂಸ್ಥಾಪಕರಾದ ನಾಗರತ್ನ ಕುಪ್ಪಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆ ಯ ಮುಖ್ಯ ಗುರು ಸುಜಾತ ಪ್ರಾಸ್ತಾವಿಕ ನುಡಿಗಳಲ್ಲಿ ಸಂಸ್ಥೆ ಯು 2013 ರ ಜೂನ್ 03 ರಂದು ಉದ್ಘಾಟನೆ ಗೊಂಡು ಕೇವಲ 15 ಜನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಈಗ 2021ರಲ್ಲಿ 250 ವಿದ್ಯಾರ್ಥಿ ಗಳು ಪ್ರವೆಶ ಪಡೆದಿರುವುದು ನಮ್ಮ ಶಾಲೆಯ ಸಿಬ್ಬಂದಿ ವರ್ಗ ದವರು ಪ್ರಾಮಾಣಿಕ ಪ್ರಯತ್ನ ಎಂದು ಸಂಸ್ಥೆ ಗೆ ದೇಣಿಗೆ ರೂಪದಲ್ಲಿ ನೀಡಿರುವ ಎಲ್ಲರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರಘುಪತಿ ರೆಡ್ಡಿ ಪೆÇೀ.ಪಾ ವಹಿಸಿ ಕೊಂಡಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಸಿದ್ದಲಿಂಗಮ್ಮ. ನವಾಜರೆಡ್ಡಿ ಪೆÇೀ.ಪಾಟೀಲ್. ಅನಂತಪ್ಪ ಬೋಯಿನ್.ನೀಲಕಂಠರಾಯ ಯಲ್ಹೇರಿ. ಸಾಯಿ ಕುಮಾರ್ ರುಸ್ತಂಪೂರ. ಕೃಷ್ಣ ಚಪೆಟ್ಲ. ನಾರಾಯಣ ರೆಡ್ಡಿ ಪೆÇಲೀಸ್ ಪಾಟಿಲ್. ಶಿವರಾಜ ಸಾಕಾ. ಚಂದ್ರಕಾಂತ .ಗಣ್ಯರು.ಗ್ರಾಮದ ಮುಖಂಡರು ಪಾಲಕ ಪೆÇೀಷಕರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.