ಶಾಂತಿಯುತ ಹೋಳಿ: ಗುಪ್ತಾ ಕರೆ

ಹುಬ್ಬಳ್ಳಿ, ಮಾ6: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೋಳಿ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸುವಂತೆ ಹು-ಧಾ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಕರೆ ನೀಡಿದರು.
ಹು-ಧಾ ನಗರ ಪೆÇಲೀಸ್ ಕಮೀಷನರೇಟ್ ಘಟಕದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಇಂದು ನಗರದ ಕಾರವಾರ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ನಡೆದ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
ಹೋಳಿ ಹಬ್ಬ ಆಚರಣೆ ಮಾಡಲು ರೀತಿ ನೀತಿಗಳಿವೆ ಅದರ ಅನ್ವಯವಾಗಿ ಆಚರಣೆ ಮಾಡಬೇಕು. ಹೀಗಾಗಿ ಬೆಂಗಳೂರು ನಂತರ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ನಗರಕ್ಕೆ ಕೆಟ್ಟ ಹೆಸರು ಬರಬಾರದು.
ಯಾವುದೇ ಒಂದು ಸಣ್ಣ ಘಟನೆ ನಡೆದರೂ ಕೂಡ ಕೆಟ್ಟ ಹೆಸರು ಬರುತ್ತದೆ.
ಎಲ್ಲಾ ಹಬ್ಬಗಳು ಉತ್ತಮ ಸಂದೇಶಗಳನ್ನು ಕೊಡುತ್ತವೆ. ಹೀಗಾಗಿ ಎಲ್ಲಾ ಹಬ್ಬಗಳನ್ನು ಎಲ್ಲರೂ ಆಚರಿಸೋಣ ಎಂದು ಅವರು ಹೇಳಿದರು.
ಸಭೆಯಲ್ಲಿ ರಾಯನಾಳ ಮಠದ ಶ್ರೀಗಳು, ಮುಸ್ಲಿಂ ಧರ್ಮಗುರುಗಳಾದ ತಾಜುದ್ದೀನ್ ಖಾದ್ರಿ, ಸಿಖ್ ಧರ್ಮ ಗುರುಗಳಾದ ಗ್ಯಾನಿ ಜನಸಿಂಗ್, ಕ್ರೈಸ್ತ ಧರ್ಮ ಗುರುಗಳಾದ ಅಲ್ವಿನ್ ಹಾಗೂ ಎಲ್ಲಾ ಧರ್ಮದ ಮುಖಂಡರು, ಡಿಸಿಪಿ ಗೋಪಾಲ್ ಬ್ಯಾಕೋಡ ಸೇರಿದಂತೆ ಪೆÇಲೀಸ್ ಅಧಿಕಾರಿಗಳು, ಮುಖಂಡರಾದ ಮಹೇಶ ಟೆಂಗಿನಕಾಯಿ, ಮಾಜಿ ಮೇಯರ್ ಡಿ.ಕೆ.ಚವ್ಹಾನ್, ನಿರಂಜನ ಹಿರೇಮಠ, ಅಲ್ತಾಫ್ ಕಿತ್ತೂರು, ಮಹೇಂದ್ರ ಸಿಂಘಿ, ಭಾಸ್ಕರ್ ಜಿತೂರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.