ಶಾಂತಿಯುತ ಮತದಾನ

ಲಕ್ಷ್ಮೇಶ್ವರ,ಅ29: ತಾಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದ ತೆರುವಾದ ಸ್ಥಾನಕ್ಕೆ ಶುಕ್ರವಾರ ಮರು ಚುನಾವಣೆ ಜರುಗಿತು.
ಮತದಾನದ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳು ಆದ ಚುನಾವಣಾ ಅಧಿಕಾರಿ ಪರಶುರಾಮ್ ಸತ್ತಿಗೇರಿಯವರು ಮತದಾನ ಕೇಂದ್ರಕ್ಕೆ ಭೇಟಿ ನೀಡಿದರು.
ಪ್ರತಿಶತ 80ರಷ್ಟು ಮತದಾನವಾಗಿದ್ದು ಮತದಾನ ಶಾಂತಿಯುತವಾಗಿ ಜರುಗಿತು.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಮಂಜುನಾಥ್ ಕೊಕ್ಕರಗುಂದಿ, ಸಹಾಯಕ ಚುನಾವಣಾಧಿಕಾರಿ ಈಶ್ವರ್ ಮೆಡ್ಲೇರಿ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ ಇದ್ದರು.