ಶಾಂತಿಯುತ ಮತದಾನ

ಔರಾದ :ಡಿ.28: ತಾಲ್ಲುಕಿನಲ್ಲಿ 2 ನೇ ಹಂತದ ಮತದಾನ 21 ಗ್ರಾಮ ಪಂಚಾಯ್ತಿ 147 ಮತದಾನ ಕೇಂದ್ರಗಳಲ್ಲಿ ಯಾವುದೇ ಗೊಂದಲ ಸೃಷ್ಟಿಸದೆ ಸುವ್ಯವಸ್ಥೆಯಿಂದ ಮತಗಟ್ಟೆಗೆ ಹೋಗಿ ಮತ . ಚಲಾಯಿಸಿದ ಮತದಾರರು. ನಾಗಮಾರಪಳ್ಳಿ ಗ್ರಾಮದಲ್ಲಿ 101 ವಯಸ್ಸಿನ ಶತಾಯುಷಿ ಅಜ್ಜಿ ಚಂದ್ರಮ್ಮ ನಾಗಯ್ಯ ಸ್ವಾಮಿ ಅವರನ್ನು ತಂದು ಮತ ಚಲಾಯಿಸಲಾಯಿತು. ಕೊಳ್ಳೂರ ಗ್ರಾಮದಲ್ಲಿ ಮೊಮ್ಮಗ ಅಜ್ಜಿಯನ್ನು ಎತ್ತಿ ತಂದು ಮತ ಚಲಾಯಿಸಿದ್ದು. ತಾಲೂಕಿನ ಬೋರ್ಗಿ ಗ್ರಾಮದಲ್ಲಿ ಯುವಕರು ಶಾಂತಿಯುತವಾಗಿ ಮತದಾನ ಮಾಡಿದರು. ಸುಂಧಾಳ, ಖಾಶೆಂಪೂರ, ಯನಗುಂದಾ ಗ್ರಾಮದಲ್ಲಿ ಮಾಸ್ಕ್ ಸ್ಯಾನಿಟೈಸರ್ ಉಪಯೋಗದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ಮ ನಿಯಮಗಳನ್ನು ಅನುಸರಿಸುವ ಮೂಲಕ ಮತದಾರರು ಮತಚಲಾಯಿಸಿದರು.