ಬಸವನಬಾಗೇವಾಡಿ: ಜೂ.24:ಶಾಂತಿಯುತ ಬಕ್ರೀದ್ ಹಬ್ಬ ಆಚರಣೆಗೆ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ತಹಶೀಲ್ದಾರ ದುಂಡಪ್ಪ ಕೋಮಾರ ಹೇಳಿದರು.
ಪಟ್ಟಣದ ಪೊಲೀಸ ಠಾಣೆಯಲ್ಲಿ ಪೊಲೀಸ ಇಲಾಖೆ ಹಮ್ಮಿಕೊಂಡ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಶಾಂತಿಯುತ ಹಬ್ಬ ಆಚರಣೆಗೆ ಮುಂದಾಗಬೇಕು ಶಾಂತಿ ಕೆದಡುವ ಕೆಲಸಕ್ಕೆ ಮುಂದಾದರೇ ಅಂತಹವರ ವಿರುದ್ದ ನಿರ್ದಾಕ್ಷ್ಯಣ್ಯವಾಗಿ ಕ್ರಮ ಕೈಗೊಳ್ಳಲಾಗುವದು ಎಂದರು ಹೆಳಿದರು.
ಖವೈಎಸ್‍ಪಿ ಕರುಣಾಕರ ಶೆಟ್ಟಿ ಮಾತನಾಡಿ ಪಟ್ಟಣದಲ್ಲಿ ಇಲ್ಲಯ ತನಕ ಎಲ್ಲ ಸಮುದಾಯದವರು ಸೇರಿಕೊಂಡು ಜಾತಿ ಭೇದ ಮಾಡದೇ ಹಬ್ಬವನ್ನ ಆಚರಣೆ ಮಾಡಿಕೊಮಡು ಬಂದಿರುತ್ತಿರಿ ಅದೇ ರೀತಿ ಬಕ್ರೀದ್ ಹಬ್ಬವನ್ನು ಕೂಡ ಆಚರಿಸಿ ಅದಕ್ಕೆ ಬೆಕಾಗುವ ಪೊಲೀಸಸ ಬದ್ರತೆಯನ್ನು ನೀಡಲು ಇಲಾಖೆ ನಿಮ್ಮೊಂದಿಗೆ ಇದೆ ಯಾವುದೇ ಗಲಬೆಗಳು ಉಂಟಾದರೇ ಸಾರ್ವಜನಿಕರು 112ಗೆ ಕರೆ ಮಾಡಬಹುದಾಗಗಿದೆ ಎಂದರು.
ಕಾಂಗ್ರೆಸ್ ಮುಖಂಡ ಪರಶುರಾಮ ಅಡಗಿಮನಿ ಮಾತನಾಡಿ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ಜನ್ಮ ಸ್ಥಳ ಬಸವಬಾಗೇವಾಡಿಯಲ್ಲಿ ಇಲ್ಲಿಯವರೆಗೂ ಯಾವುದೇ ಕೋಮುಗಲಭೆಗಳು ನಮ್ಮ ಭಾಗದಲ್ಲಿ ಸಂಭವಿಸಿಲ್ಲ ಅಲ್ಲದೇ ಎಲ್ಲ ಸಮಾಜದವರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನ ಆಚಿಸುತ್ತ ಬಂದಿದ್ದು ಮುಂದೆಯು ಅದೇ ರೀತಿಯಾಗಿ ಹಬ್ಬ ಆಚರಿಸುವುದಾಗಿ ಹೇಳಿದರು.
ಪುರಸಬ ಸದಸ್ಯ ಅಶೋಕ ಹಾರಿವಾಳ ಮಾತನಾಡಿ ಬಕ್ರೀದ್ ಹಬ್ಬ ತ್ಯಾಗ ಬಲಿದಾನ ಪ್ರತೀಕವಾಗಿದೆ ಈ ಪವಿತ್ರ ಹಬ್ಬವನ್ನ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಯಾವುದೇ ಜಾತಿ ಭೇದ ವಿಲ್ಲದೆ ಎಲ್ಲರು ಒಟ್ಟಾಗಿ ಹಬ್ಬವನ್ನ ಆಚರಿಸುತ್ತೆವೆ ಪೊಲೀಸ ಇಲಾಖೆಗೆ ನಮ್ಮ ಸಹಕಾರ ಇದ್ದೆ ಇರುತ್ತದೆ ಎಂದರು.
ಈ ಸಂಧರ್ಭದಲ್ಲಿ ಪಶುಸಂಗೋಪನಾ ಅಧಿಕಾರಿ ಪಿ,ಎಸ್ ಪಾಟೀಲ, ಸಿಪಿಐ ಎಸ್,ಎಸ್ ನ್ಯಾಮಣ್ಣವರ, ಪುರಸಭೆ ಅಧಿಕಾರಿ ಸಿದ್ದಾರ್ಥ ಕಳ್ಳಿಮನಿ, ಮುಖಂಡರಾದ ಶೇಖರ ಗೊಳಸಂಗಿ, ಕಲ್ಲು ಸೊನ್ನದ, ಪರಶುರಾಮ ಜಮಖಂಡಿ, ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ, ರಮಜಾನ್ ಬೆಬ್ಬಾಳ, ಕಾಶಿನಾಥ ರಾಠೋಡ, ಜಟ್ಟಿಂಗರಾಯ ಮಾಲಗಾರ ಸೇರಿದಂತೆ ಮುಂತಾದವರು ಇದ್ದರು.