ಜಗಳೂರು.ಮಾ.೩೧; ಮಾದರಿ ನೀತಿ ಸಂಹಿತೆ ಅನುಸಾರ ಶಾಂತಿಯುತ ಪಾರದರ್ಶಕ ಚುನಾವಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣೆ ಅಧಿಕಾರಿ ಎಸ್.ರವಿ ತಿಳಿಸಿದರು.ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಕುರಿತು ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ ಹೊರಡಿಸಿದ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಸಿದ್ದತೆ ಕುರಿತು ನಡೆದ ರಾಜಕೀಯ ಸರ್ವಪಕ್ಷಗಳ,ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲಿಕರ ಸಭೆಯಲ್ಲಿ ಅವರು ಮಾತನಾಡಿದರು.ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣೆ ವೇಳಾಪಟ್ಟಿ ಯಂತೆ ನಾಮಪತ್ರ ಸಲ್ಲಿಕೆಗೆ ಏ.13 ಗುರುವಾರ ದಿಂದ ಆರಂಭವಾಗಿ ಏ.20 ಗುರುವಾರ ಕೊನೆಯದಿನವಾಗಿರುತ್ತದೆ.ಏ.21 ಶುಕ್ರವಾರ ಪರಿಶೀಲನೆಗೆ ಹಾಗೂ ಏ.24 ರ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ವಾಗಿರುತ್ತದೆ.ಮೇ:10 ಬುಧವಾರ ಮತದಾನ ಮೇ:13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿ ದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಪೂರ್ವದ ಹತ್ತು ದಿನದ ಮುಂಚಿತವಾಗಿ ಏ.10 ರೊಳಗಾಗಿ ನಮೂನೆ -6 ಸಲ್ಲಿಸಿದ್ದಲ್ಲಿ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.