ಶಾಂತಿಯುತ ಚುನಾವಣೆಗಾಗಿ ಪಥಸಂಚಲನ

ಬಸವನಬಾಗೇವಾಡಿ: ಎ.12:ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಭದ್ರತೆಗಾಗಿ ಆಗಮಿಸಿದ ಶಸಸ್ತ್ರ ಸೀಕ್ಕಿಂ 69 ಬಟಾಲಿಯನ್ ಯೋಧರು ಹಾಗೂ ಪೊಲೀಸ ಸಿಬ್ಬಂದಿಗಳು ಪಟ್ಟಣದಲ್ಲಿ ಮಂಗಳವಾರ ಪಥಸಂಚಲನ ನಡೆಸಿದರು.

ಪಟ್ಟಣದ ಶ್ರೀ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ಶಾಲೆಯ ವಿದ್ಯಾರ್ಥಿಗಳು ರಂಗೋಲಿ ಹಾಕಿ ಪಥಸಂಚಲನಕ್ಕೆ ಸಜ್ಜಾದ ಯೋಧರಿಗೆ ಆರತಿ ಬೆಳಗಿ ಚಾಲನೆ ನಿಡಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಧರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಪಟ್ಟಣಕ್ಕೆ ಸ್ವಾಗತಿಸಿಕೊಂಡರು.

ಪಥಸಂಚಲನವು ಪಟ್ಟಣದ ಬಸವೆಶ್ವರ ವೃತ್ತ, ಗಣಪತಿ ಚೌಕ್ ಮಾರ್ಗವಾಗಿ ಬಸವ ಸ್ಮಾರಕ, ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಅಂಭೇಡ್ಕರ ವೃತ್ತದ ಮಾರ್ಗವಾಗಿ ಪೊಲೀಸ ಠಾಣೆ ತಲುಪಿತು. ಪಥಸಂಚಲನ ವೇಳೆ ಪಟ್ಟಣದ ನಾಗರಿಕರು ದಾರಿಯೊದ್ದಕ್ಕು ರಸ್ತೆಯಲ್ಲಿ ರಂಗೋಲಿ ಬಿಡಿಸಿ ಯೋಧರ ಮೇಲೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿರುವದು ವಿಶೇಷವಾಗಿತ್ತು.

ಈ ಸಂಧರ್ಭದಲ್ಲಿ ತಹಶೀಲ್ದರಾ ದುಂಡಪ್ಪ ಕೋಮಾರ, ಡಿವೈಎಸ್‍ಪಿ ಕರುಣಾಕರ ಶಟ್ಟಿ, ಪೊಲೀಸ್ ಇನಸ್ಪೇಕ್ಟರ್ ಎಂ,ಐ ಮಠಪತಿ, ಶಿಕ್ಷಕ ಮಹೇಶ ಹುಮನಾಬಾದ, ಸೇರಿದಂತೆ ವಿವಿಧ ಪೊಲೀಸ ಸಿಬ್ಬಂದಿಗಳು ಉಪಸ್ಥಿತರಿದ್ದರು.