
ನರೇಗಲ್ಲ,ಮಾ.6: ಪ್ರತಿವರ್ಷದಂತೆ ಈ ವರ್ಷವೂ ಹೋಳಿ ಹಬ್ಬವನ್ನು ಪರಸ್ಪರ ಶಾಂತಿ ಸೌಹಾರ್ದದಿಂದ ಆಚರಿಸಿ. ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಎಎಸ್‍ಐ ಶೇಖರ ಹೊಸಳ್ಳಿ ಹೇಳಿದರು.
ಸ್ಥಳಿಯ ಪೆÇಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಚರ್ಮಕ್ಕೆ ಹಾನಿಯಾಗುವಂತಹ ಕೆಮಿಕಲ್‍ಯುಕ್ತ ಬಣ್ಣಗಳನ್ನು ಉಪಯೋಗಿಸಬಾರದು. ನೈಸರ್ಗಿಕವಾದ ಬಣ್ಣಗಳನ್ನು ಮಾತ್ರ ಉಪಯೋಗಿಸಬೇಕು. ಸಾರ್ವಜನಿಕರು ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣ ಹಚ್ಚಬಾರದು. ಪಟ್ಟಣದ ಓಣಿಯ ಹಿರಿಯರ ಶಾಂತಿ ಕಾಪಾಡಲು ಮುಂದಾಗಬೇಕು. ಯಾವುದೆ ತರಹದ ಅಹಿತಕರ ಘಟನೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೆÇಲೀಸರೊಂದಿಗೆ ಸಹಕರಿಸಬೇಕು ಎಂದರು.
ಶಾಂತಿ ಸಭೆಯಲ್ಲಿ ಎಂ.ಎಸ್ ಧಡೇಸೂರಮಠ ಮಾತನಾಡಿದರು. ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಎ.ಎ. ನವಲಗುಂದ, ಹನಮಂತ ದ್ವಾಸಲ, ಕುಮಾಸ್ವಾಮಿ ಕೋರಧಾನ್ಯಮಠ, ಅಲ್ಲಾಭಕ್ಷಿ ನದಾಫ, ಶೇಖಪ್ಪ ಕೆಂಗಾರ, ಕೃಷ್ಣಪ್ಪ ಜುಟ್ಲ, ಬಸವರಾಜ ಕುರಿ, ಕಿರಣಕುಮಾರ ಹಿರೇಮಠ, ಮಂಜುನಾಥ ಪೂಜಾರ, ಎಚ್.ಎಸ್ ಬಂಡಿವಡ್ಡರ, ಎಂ.ಜಿ ದೊಡ್ಡಮೇಟಿ, ಎಂ.ಎ ವಾಲಿ, ಎಂ.ಎಸ್ ಸಂಕಣ್ಣವರ, ಎಂ.ಎಫ್ ರೆವಡಿಗಾರ, ಜಾಕೀರಬುಡ್ಡಾ ಗದಗ ಸೇರಿದಂತೆ ಇತರರು ಇದ್ದರು. ಪೆದೆ ಮಾರ್ಥಾಂಡ ಉಪ್ಪಾರ ನಿರ್ವಹಿಸಿದರು.