ಶಾಂತಿಯುತವಾಗಿ ಹೋಳಿ ಹಬ್ಬ ಆಚರಿಸಿ: ಸಿಪಿಐ

ಚಿತ್ತಾಪೂರ:ಮಾ.7: ಪ್ರತಿವರ್ಷದಂತೆ ಈ ವರ್ಷವೂ ಹೋಳಿ ಹಬ್ಬವನ್ನು ಪರಸ್ಪರ ಶಾಂತಿ ಸೌಹಾರ್ದದಿಂದ ಆಚರಿಸಿ. ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಸಿಪಿಐ ಶಿವಾನಂದ್ ಅಂಬಿಗೇರ್ ಹೇಳಿದರು.

ಪಟ್ಟಣದ ಪೆÇೀಲೀಸ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೊಳಿ ಹಬ್ಬದ ಶಾಂತಿಸಭೆ ಕುರಿತು ಮಾತನಾಡಿದ ಅವರು ಚರ್ಮಕ್ಕೆ ಹಾನಿಯಾಗುವಂತಹ ಕೆಮಿಕಲ್ ಯುಕ್ತ ಬಣ್ಣಗಳನ್ನು ಉಪಯೋಗಿಸಬಾರದು. ನೈಸರ್ಗಿಕವಾದ ಬಣ್ಣಗಳನ್ನು ಮಾತ್ರ ಉಪಯೋಗಿಸಬೇಕು. ಸಾರ್ವಜನಿಕರು ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣ ಹಚ್ಚಬಾರದು. ಪಟ್ಟಣದ ಓಣಿಯ ಹಿರಿಯರ ಶಾಂತಿ ಕಾಪಾಡಲು ಮುಂದಾಗಬೇಕು. ಯಾವುದೆ ತರಹದ ಅಹಿತಕರ ಘಟನೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೆÇೀಲೀಸರೊಂದಿಗೆ ಸಹಕರಿಸಬೇಕು ಎಂದರು.

ಕಾಮದಹನ ರಾತ್ರಿ 10:30ಕ್ಕೆ, ಮಾಡಿ ಮುಗಿಸಬೇಕು ಬೆಳಿಗ್ಗೆಯಿಂದ 12:30ರ ವರಿಗೆ ಬಣ್ಣ ಆಡಲು ಅವಕಾಶ ನೀಡಿದ್ದು ಯಾರು ಇದನ್ನು ಮೀರಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿ
ಪಾಲಕರು ತಮ್ಮ ಮಕ್ಕಳ ಮೇಲೆ ನಿಯಂತ್ರಣವಿಡಬೇಕು ಎಂದು ಪೆÇೀಷಕರಲ್ಲಿ ವಿನಂತಿಸಿದರು. ಕಾನೂನಿನ ನಿಯಮಗಳು ಪ್ರತಿಯೊಬ್ಬರು ಪಾಲಿಸಬೇಕು ಹಾಗೂ ಯಾರ ಹಕ್ಕುಗಳಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಗರಾಜ ಬಂಕಲಗಿ ಮಾತನಾಡಿ ಪಟ್ಟಣವು ಶಾಂತಿ ಪ್ರೀಯಾವಾಗಿದ್ದು. ರಾತ್ರಿ ನಡೆಯುವ ಕಾಮದಹನಕ್ಕೆ ಪೆÇೀಲೀಸ ಇಲಾಖೆ ವತಿಯಿಂದನೇ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು. ಹೊಳಿ ಹಬ್ಬ ಆಡಲು ಬೆಳಗ್ಗೆಯಿಂದ ಮಧ್ಯಾಹ್ನದ ವರಿಗೆ ಪ್ರತಿ ವರ್ಷ ಅವಕಾಶ ಇತ್ತು. ಹಾಗೇ ಪಟ್ಟಣದ ರಸ್ತೆಯ ಮೇಲೆ ಕಿರಿ-ಕಿರಿ ಶಬ್ದ ಉಂಟುಮಾಡುವ ಕೆಲ ಬೈಕ್ ವಾಹನಗಳ ಶಬ್ದಗಳ ನಿಯಂತ್ರಣಕ್ಕೆ ಪೆÇೀಲೀಸ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಪಿಎಸ್‍ಐ ನಂದಕುಮಾರ್, ಬಸವರಾಜ ಕೋಟೆ, ಮುಕ್ತಾರ ಪಟೇಲ್, ವೇದಿಕೆಯ ಮೇಲಿದ್ದರು. ಪೆÇೀಲೀಸ ಸಿಬ್ಬಂದಿಗಳಾದ ನಾಗೇಂದ್ರ ತಳವಾರ, ಸಮೀರ್ ಪಟೇಲ್, ಮುಖಂಡರಾದ ವಿನೋದ ಗುತ್ತೇದಾರ್, ಶ್ರೀನಿವಾಸ ಪಾಲಪ್, ಪ್ರಭು ಗಂಗಾಣಿ, ಜಗದೀಶ ಚವ್ಹಾಣ್, ಬಾಬು ಕಾಶಿ, ಕರಣ್ ಕುಮಾರ, ಮಹೇಶ ಕಾಶಿ, ಆನಂದ ಕಲ್ಲಕ, ನಾಜೀರ್ ಅಡಕಿ, ಕೋಟೇಶ್ವರ ರೇಶ್ಮಿ, ಮಲ್ಲಿಕಾರ್ಜುನ ಬೇಣ್ಣೂರಕರ್, ಬಾಲಾಜಿ ಬುರಬುರೆ, ಹೈಮದ್ ಸೇಠ್, ಮಹ್ಮದ್ ಯೋನುಸ್, ಸೇರಿದಂತೆ ಇತರರು ಇದ್ದರು.