ಶಾಂತಿಯುತವಾಗಿ ತ್ಯಾಗ ಬಲಿದಾನದ ಬಕ್ರೀದ ಆಚರಣೆ

ವಾಡಿ: ಜೂ.30: ಪ್ರವಾದಿ ಹಜರತ ಇಬ್ರಾಹಿಂ (ಅ.ಲೈ) ಮತ್ತು ಅವರ ಮಗ ಪ್ರವಾದಿ ಇಸ್ಮಾಯಿಲರ ತ್ಯಾಗ ಬಲಿದಾನದ ಸಂಕೇತವಾಗಿ ದೇಶದೆಲ್ಲಡೆ ಆಚರಿಸಲಾಗುವ ಬಕ್ರೀದ ಹಬ್ಬವನ್ನು ವಾಡಿ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವ ಶಾಂತಿಯುತವಾಗಿ ಸಂಭ್ರಮ ಸಡಗರದಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ಫಜರ್ ನಮಾಜ ಮುಗಿಸಿಕೊಂಡು ನಂತರ ಜನರು ಗ್ರಾಮದ ಜಾಮಿಯಾ ಮಸಜೀದ ಮುಖಾಂತರ ಸಾಮೂಹಿಕವಾಗಿ ಮೆರವಣಿಗೆ ಹೊರಟು ಈದ್ಗಾದತ್ತ ತೆರಳಿದರು. ಈದ್ಗಾದಲ್ಲಿ ಬಕ್ರೀದ ಆಚರಣೆಯ ಉದ್ದೇಶ ಖ್ರುಬಾನಿ ಮಾಡುವ ನಿಯಮಗಳನ್ನು ಮೌಲ್ವಿಗಳು ತಿಳಿಸಿದರು. ಈದ ನಮಾಜ ನಂತರ ದೂವಾದ ರೂಪದಲ್ಲಿ ದೇಶದ ಒಳಿತಿಗಾಗಿ ಮುಸ್ಲಿಂ ಭಾಂದವರು ಪ್ರಾರ್ಥನೆ ಸಲ್ಲಿಸಿದರು.

ನಂತರ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಯಲ್ಲಿ ವಿಶೇಷ ಷೀರ್ ಖುರಮಾ ಸೇವಿಸಿ ಹಬ್ಬವನ್ನು ಸಂಭ್ರಮ ಸಡಗರ ಆಚರಿಸಿದರು.

ರಾವೂರ ಗ್ರಾಮದಲ್ಲಿ ಸಮಾಜದ ಹಿರಿಯ ಮುಖಂಡ ಅಬ್ದುಲ ಅಜೀಜ ಸೇಠ ಹಾಗೂ ಮಹೆಬೂಬ ಸುಭಾನಿ ದರ್ಗಾದ ಸಜ್ಜಾದ ನಶೀನ ಸೈಯ್ಯದ ಮುಸ್ತಫಾ ಖಾದ್ರಿ ನೇತೃತ್ವದಲ್ಲಿ ಸಾಮೂಹಿಕ ಮೆರವಣಿಗೆ ಮೂಲಕ ಶಹಬಾದ ರಸ್ತೆಯಲ್ಲಿರುವ ಈದ್ಗಾ ತಲುಪಿದರು. ಈ ಸಂದರ್ಭದಲ್ಲಿ ಮಶಾಕ ಸೇಠ, ಮಹಿಬೂಬ ಧರಿ, ಯುನುಷ ಪ್ಯಾರೇ, ಜಾಫರ ಕರ್ನೂಲ, ಮಶಾಕಸಾಬ ಸರಡಗಿ, ಮೌಲಾ ಡ್ರೈವರ, ನ್ಯಾಯವಾದಿ ಮಲಿಕಪಾಶಾ ಮೌಜನ್, ಮಹಿಬೂಬ ಸರಡಗಿ, ಬಾಬಾ ಮುದೇಲ್, ಅಮೀರ ಮುಸಾವಾಲೇ, ಹಾಜಿ ಮಾಸುಲ್ದಾರ, ಮುಕ್ರಮ ಪೀರಾವಾಲೆ ಸೇರಿದಂತೆ ಸಾವಿರಾರು ಜನರು ಇದ್ದರು. ವಾಡಿ ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ ಏರ್ಪಡಿಸಲಾಗಿತ್ತು.