ಶಾಂತಿಯುತವಾಗಿ ಆರಂಭವಾದ ಪಿಯು ಪರೀಕ್ಷೆಗಳು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮಾ8: ನೂತನ ವಿಜಯನಗರ ಜಿಲ್ಲೆಯಲ್ಲಿಯೂ ಪಿಯು ಪರೀಕ್ಷೆಗಳು ಶಾಂತಿಯುತವಾಗಿ ಆರಂಭವಾಗಿದೆ.
ನೂತನ ವಿಜಯನಗರ ಜಿಲ್ಲೆಯಾದನಂತರ ಪ್ರಥಮವಾಗಿ 18ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‍ನ ನಡುವೆ 15,479 ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಪರೀಕ್ಷೆಯನ್ನು ಬರೆಯಲಿದ್ದಾರೆ. ಮೊದಲ ದಿನವಾಗಿರುವುದರಿಂದ ವಿದ್ಯಾರ್ಥಿಗಳು ಬೇಗ ಬಂದು ತಮ್ಮ ಕೊಠಡಿಯನ್ನು ಹುಡುಕುವುದು, ತಮ್ಮ ಬೆಂಜುಗಳನ್ನು ಹುಡುಕಲು ಮುಂದಾಗಿರುವುದು ಕಂಡುಬಂತು. ತರಗತಿಗಳ ಮುಂದೆಯೂ ಉಪನ್ಯಾಸಕರು ವಿದ್ಯಾರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ ಕೊಠಡಿಗಳಿಗೆ ಹೋಗುವ ದಾರಿಯನ್ನು ತೋರುತ್ತಿದ್ದರು.
ಹೊಸಪೇಟೆಯಲ್ಲಿ 5,  ಹರಪನಹಳ್ಳಿಯಲ್ಲಿ 5, ಹೂವಿನಹಡಗಲಿ2, ಕೂಡ್ಲಗಿ 2 ಕೊಟ್ಟೂರು 2 ಹಗರಿಬೊಮ್ಮನಹಳ್ಳಿ 2 ಹೀಗೆ ಒಟ್ಟು ನೂತನ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 18
 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪಿಯು ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಮುಂಚಾಗ್ರತೆ ವಹಿಸಿಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ. ಪ್ರಶ್ಮೆ ಪತ್ರಿಕೆ ತಲುಪಿಸಲು, ಕೊಠಡಿಗಳಿಗೆ ಮೇಲ್ವಿಚಾರಕರು, ಉಸ್ತೂವಾರಿಗಳ ನೇಮಕವೂ ಆಗಿದ್ದು ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ. ಇಂದು ಶಾಂತಿಯುತವಾಗಿ ಪರೀಕ್ಷೆಗಳು ಆರಂಭವಾಗಿವೆ.

One attachment • Scanned by Gmail