ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮತದಾನ ದಿನ ಆಚರಣೆ

ಸಂಜೆವಾಣಿ ವಾರ್ತೆ,
ವಿಜಯಪುರ, ಜ.25:ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಮತದಾನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಮತದಾನ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ನಂತರ ಪ್ರಾಚಾರ್ಯ ಶ್ರೀಧರ ಕುರಬೇಟ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಬೇಕಾದರೆ ಎಲ್ಲರೂ ಮತದಾನವನ್ನು ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು. ಇಂದಿನ ಚುನಾವಣೆಗಳಲ್ಲಿ ಹಲವಾರು ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ತಮ್ಮ ನೆರೆ ಹೊರೆ, ಪಾಲಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಪ್ರವೀಣ ಗೆಣ್ಣೂರ, ಎ.ಎಚ್.ಸಗರ, ಅಶ್ವಿನ ವಗದರಗಿ, ಬಸವರಾಜ ರಬಿನಾಳ, ಶಶಿಧರ ಲೋನಾರಮಠ, ಜ್ಯೋತಿ ಅಣೆಪ್ಪನವರ್, ಜುಬೇರ ಶೇಖ, ಅನೀಲ ಬಾಗೇವಾಡಿ, ಸೀಮಾ ಸದಲಗಾ, ವಿದ್ಯಾ, ತಬಸ್ಸುಮ, ಸವಿತಾ ಪಾಟೀಲ, ಸುರೇಖಾ ಪಾಟೀಲ, ದೀಪಾ, ಶ್ರೀದೇವಿ ಮತ್ತಿತರು ಉಪಸ್ಥಿತರಿದ್ದರು.