ಶಾಂತಿನಿಕೇತನ ಶಾಲೆಯಲ್ಲಿ ಹುತಾತ್ಮರ ದಿನ ಆಚರಣೆ

ವಿಜಯಪುರ, ಜ.31:ಶಾಂತಿನಿಕೇತನ ಅಂತರಾಷ್ಟ್ರೀಯ ಸಿಬಿಎಸ್‍ಇ ಶಾಲೆಯಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.

ಇದರ ಅಂಗವಾಗಿ ಗಾಂಧಿಜಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವಿಸಿದರು.

ಶಾಂತಿನಿಕೇತನ ಅಂತರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ರಿಜೇಶ್ ಪಿ.ಎನ್. ಅವರು ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಪಥದಲ್ಲಿ ಹೋರಾಡಿದ ಬಾಪು 1948 ಜನವರಿ 30 ರಂದು ನಾಥುರಾಮ್ ಗೋಡ್ಸೆ ಗುಂಡೇಟಿನಿಂದ ನಿಧನರಾಗಿದ್ದರು. ಸತ್ಯ ಅಹಿಂಸೆಯಲ್ಲಿ ಅಪಾರ ನಂಬಿಕೆ ಹೊಂದಿದ್ದ ಚಿಂತನೆಗಳನ್ನು ಜಗತ್ತಿನಾದ್ಯಾಂತ ಪ್ರಶಂಸೆಗೊಳಗಾಗಿವೆ. ಈ ದಿನವನ್ನು ಶಹೀದ್ ದಿವಸ ( ಹುತಾತ್ಮರ ದಿನ ) ಮತ್ತು ಸತ್ಯ ಮತ್ತು ಅಹಿಂಸೆಯ ದಿನವನ್ನಾಗಿಯೂ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.

ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.