ಶಾಂತಲಿಂಗ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ

ಕಲಬುರಗಿ,ನ.15-ತಾಲ್ಲೂಕಿನ ಅವರಾದ (ಬಿ) ಗ್ರಾಮದ ಚರಂತಿಮಠದಲ್ಲಿ ಲಿಂಗೈಕ್ಯ ಗುರುಶಾಂತಲಿಂಗ ಶಿವಾಚಾರ್ಯರ 29ನೇ ಪುಣ್ಯಸ್ಮರಣೋತ್ಸವ ಹಾಗೂ ಮರುಳಸಿದ್ಧೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ ಪಂಚಮ ವಾರ್ಷಿಕೋತ್ಸವದ ನಿಮಿತ್ಯ ಐದು ದಿನಗಳ ಪಯರ್ಂತರ ಭಾರತೀಯ ದಾರ್ಶನಿಕ ಸಂತರ ” ಜೀವನ ಮತ್ತು ಸಂದೇಶ ಪ್ರವಚನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮರುಳಸಿದ್ಧ ಶಿವಾಚಾರ್ಯರು, “ಮಾನವನು ಸಂಘ ಜೀವಿಯಾಗಿದ್ದು, ಸದಾಕಾಲವೂ ಸಜ್ಜನರ ಸಂಗದೊಳು ಇರಬೇಕೆಂದು” ಹೇಳಿದರು.
ಪ್ರವಚನಕಾರರಾದ ಸುಂಟನೂರ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಮಾತನಾಡಿ, “ಭವ್ಯ ಭಾರತ ದೇಶವು ಶರಣ, ಸಂತ, ಮಹಾತ್ಮರನ್ನು ಜಗತ್ತಿಗೆ ನೀಡಿದೆ. ಶರಣ, ಸತ್ಪುರುಷರ ಚರಿತ್ರೆಯನ್ನು ಕೇಳುವುದರಿಂದ ಮನುಷ್ಯನು ನೆಮ್ಮದಿಯಿಂದಿರಬಹುದು” ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಸದ್ಭಕ್ತರು, ತಾಯಂದಿರು ಉಪಸ್ಥಿತರಿದ್ದರು. ಪರಶುರಾಮ್ ಚಟ್ನಳ್ಳಿ, ಸಂತೋಷ ಕೋಡ್ಲಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಿಕ್ಷಕÀ ಚಂದ್ರಕಾಂತ್ ಶೀಲವಂತ್ ಕಾರ್ಯಕ್ರಮ ನಿರೂಪಿಸಿದರು.