ಸಂಜೆವಾಣಿ ವಾರ್ತೆ
ಕೂಡ್ಲಿಗಿ, ಜು.23. ಜು 23 :- ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತರೀತಿಯಿಂದ ಆಚರಿಸುವಂತೆ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ತಿಳಿಸಿದರು.
ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮೊಹರಂ ಹಬ್ಬವನ್ನು ಎಲ್ಲಾ ಸಮುದಾಯದ ಜನತೆ ಸೇರಿ ಆಚರಿಸುತ್ತಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಸಹೋದರತ್ವ ಮನೋಭಾವನೆಯಲ್ಲಿ ಆಚರಿಸಬೇಕು ಎಂದು ತಿಳಿಸಿದರು.
ಗುಡೇಕೋಟೆ ಪಿಎಸ್ಐ ಮಾಲೀಕ್ ಸಾಬ್ ಕಲಾರಿ, ಗ್ರಾಮದ ಜನತೆ ಸಭೆಯಲ್ಲಿ ಭಾಗವಹಿಸಿದ್ದರು.