ಶಾಂತಮ್ಮ ರಾಜ್ಯಮಟ್ಟದ ಅತ್ಯುತ್ತಮ ಕಾರ್ಯಕರ್ತೆ

ರಾಯಚೂರು,ಮಾ.೦೭- ನಗರದ ಶಾಂತಮ್ಮ ಅತ್ಯುತ್ತಮ ಮಹಿಳಾ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಯಚೂರು ಶಿಶು ಅಭಿವೃದ್ಧಿ ಯೋಜನೆ ನಗರದ ಹೊಸ ಆಶ್ರಯ ಕಾಲೋನಿ ಅಂಗನವಾಡಿ ಕೇಂದ್ರದ ೩ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ರಾಜ್ಯಮಟ್ಟದ ಅತ್ಯುತ್ತಮ ಕಾರ್ಯಕರ್ತೆಯಾಗಿ ಆಯ್ಕೆಯಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಚೇತನ ಕುಮಾರ್ ತಿಳಿಸಿದರು.
ಶಾಂತಮ್ಮ ಅಂಗನವಾಡಿ ಕೇಂದ್ರದಲ್ಲಿ ಇಲಾಖೆಯ ವತಿಯಿಂದ ನಡೆಸಲಾದ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆಂದು ರಾಯಚೂರು ಶಿಶುಯೋಜನಾ ಅಧಿಕಾರಿ ಗೋಕೂರು ಹುಸೇನ್ ಮಾತಾನಾಡಿದರು.
ಮೇಲುಉಸ್ತುವಾರಿ ವಹಿಸಿದ ಮಡ್ಡಿಪೇಟೆ ಮೇಲ್ವಿಚಾರಕಿ ಭಾರತಿ ಸಹಯೋಗ ಹೊಂದಿರುವ ಶಾಂತಮ್ಮಗೆ ಪ್ರಶಸ್ತಿ ಲಬಿಸಿರುವುದು ಇಲಾಖೆಗೆ ಗೌರವ ಸಂದಿದೆ ಎಂದರು.
ದಿನಾಂಕ ೮ ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡಿಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ, ಸಚಿವರು ಹಾಲಪ್ಪ ಆಚಾರಿ, ಶಶಿಕಲಾ ಜೋಲ್ಲೆ ಅವರಿಂದ ಪ್ರಶಸ್ತಿ ಸ್ವೀಕರಿಸಿಲಾಗುತ್ತದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.