
ಸಿರವಾರ,ಮೇ.೧೦- ೨೦೨೨-೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದೂ ಪಟ್ಟಣದ ಶಾಂತಿನಿಕೇತನ ಆಂಗ್ಲ ಮಾದ್ಯಮ ಶಾಲೆಗೆ ೯೭% ಫಲಿತಾಂಶ ಬಂದಿದೆ. ಶಾಲೆಯಿಂದ ಒಟ್ಟು ೬೯ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಿದರೂ, ಅದರಲಿ ೬೭ ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ೧೫ ಅತ್ಯುನ್ನತ, ೪೬ ವಿದ್ಯಾರ್ಥಿಗಳು ಪ್ರಥಮ, ೬ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅದರಲಿ ರಾಕೇಶ ರಾಠೊಡ್ (೯೪.೮೮%) ಪ್ರಥಮ, ರಣಜೀತ ಸಿಂಹ(೯೨.೯೩) ದ್ವಿತೀಯ, ಮಹಿಬೂಬಿ (೯೨%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯರಾದ ಅನುರಾಧ ತಿಳಿಸಿದ್ದಾರೆ.