ಶಾಂತಕುಮಾರ ಮುದಾಳೆಗೆ ಗೌರವ ಡಾಕ್ಟರೇಟ್

ಬೀದರ್: ಜ.11:ನಿರ್ಮಾಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಇಲ್ಲಿಯ ಹಿರಿಯ ಮುಖಂಡ ಶಾಂತಕುಮಾರ ಮುದಾಳೆ ಅವರಿಗೆ ಜರ್ಮನಿಯ ಇಂಟರ್‍ನ್ಯಾಷನಲ್ ಪೀಸ್ ಯುನಿವರ್ಸಿಟಿಯ ಗೌರವ ಡಾಕ್ಟರೇಟ್ ದೊರೆತಿದೆ.

ಪಾಂಡಿಚೇರಿಯ ಹೆರಿಟೇಜ್ ಟೌನ್‍ನ ಹೊಟೇಲ್ ಅತಿಥಿಯಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿರುವ ಶಾಂತಕುಮಾರ ಮುದಾಳೆ ಅವರು ನೀರಾವರಿ ತಜ್ಞರೆಂದೇ ಗುರುತಿಸಿಕೊಂಡಿದ್ದಾರೆ. ನಾಲ್ಕು ದಶಕಗಳ ಅವಧಿಯಲ್ಲಿ ನೀರಾವರಿಗೆ ಸಂಬಂಧಿಸಿದ ಹಲವು ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಕೈಗೊಂಡಿದ್ದಾರೆ. ರಸ್ತೆ, ಕಟ್ಟಡ ನಿರ್ಮಾಣ ಹಾಗೂ ಇತರ ಕ್ಷೇತ್ರಗಳಿಗೂ ಕೊಡುಗೆ ನೀಡಿದ್ದಾರೆ. ಹತ್ತು ಹಲವು ಸಂಘ ಸಂಸ್ಥೆಗಳೊಂದಿಗೆ ಬಾಂಧವ್ಯ ಹೊಂದಿದ್ದಾರೆ. ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮುದಾಳೆ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.