ಶಾಂತಕವಿಗಳ ಸ್ಮರಣೆ ಕಾರ್ಯಕ್ರಮ

ಧಾರವಾಡ, ಮಾ17 : ಸಕ್ಕರಿ ಬಾಳಾಚಾರ್ಯರು (ಶಾಂತಕವಿಗಳು) ಅಧುನಿಕಕನ್ನಡದಆದ್ಯನಾಟಕಕಾರರು ಹಾಗೂ ಕೀರ್ತನಕಾರರಾಗಿದ್ದರು. ಕನ್ನಡ ಭಾಷೆಯ ಬಗ್ಗೆ ಅವರಲ್ಲಿಅಪಾರಅಭಿಮಾನವಿತ್ತುಎಂದು ಹಿರಿಯರಂಗಕರ್ಮಿಡಾ.ಪ್ರಕಾಶಗರುಡಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕನ್ನಡ ನಾಟಕರಂಗದ ಪಿತಾಮಹ ‘ಶಾಂತಕವಿಗಳ ಸ್ಮರಣೆ’ (ದಿವಂಗತ ಬಾಳಾಚಾರ್ಯ ಸಕ್ಕರಿ) ಕಾರ್ಯಕ್ರಮದಲ್ಲಿಅತಿಥಿಉಪನ್ಯಾಸಕರಾಗಿ ಮಾತನಾಡಿ, ಸಕ್ಕರಿ ಬಾಳಾಚಾರ್ಯ ಮರಾಠಿಮಯವಾದ ಆ ಕಾಲದಲ್ಲಿಕನ್ನಡದ ಅಲೆಗೆ ಒಂದು ನೆಲೆ ಒದಗಿಸಿದರು.ಕನ್ನಡ ಭಾಷೆ, ಅವರ ಬಾಳಿನ ದಿವ್ಯ ಮಂತ್ರವಾಗಿತ್ತು.ಅವರು ರಚಿಸಿದ ‘ರಕ್ಷಿಸುಕರ್ನಾಟಕದೇವಿ’ ಎಂಬ ಹಾಡು ಮುಂಬೈ ಕರ್ನಾಟಕದಲ್ಲಿಎರಡು ದಶಕಗಳ ಕಾಲ ನಾಡಗೀತೆಯಾಗಿತ್ತು.ಒಟ್ಟುಕನ್ನಡದಲ್ಲಿ 35 ನಾಟಕಗಳನ್ನು ರಚಿಸಿದ್ದು ಈ ಎಲ್ಲಾ ನಾಟಕಗಳಲ್ಲಿ ವೀರರಸ, ಶೃಂಗಾರರಸದೊಂದಿಗೆ ಹಾಸ್ಯರಸವನ್ನು ಹಾಸ್ಯಮಯವಾಗಿ ರಚಿಸಿದ್ದಾರೆ. ‘ಸೀತಾರಣ್ಯ ಪ್ರವೇಶ’ ನಾಟಕ ಕೇವಲ 9 ದೃಶ್ಯಗಳ ಅಧ್ಭುತವಾದ ನಾಟಕವಾಗಿತ್ತು.148 ವರ್ಷಗಳ ಹಿಂದೆಯೇಉಷಾಹರಣ ಎಂಬ ನಾಟಕ ರಚಿಸಿ ಆದ್ಯ ನಾಟಕಕಾರರೆಂಬ ಕೀರ್ತಿಗೆ ಪಾತ್ರರಾದರು.
ಸಕ್ಕರಿ ಬಾಳಾಚಾರ್ಯರು ತಮ್ಮಎಲ್ಲಾ ನಾಟಕಗಳಲ್ಲಿ ಕರ್ನಾಟಕದ ಬಗ್ಗೆ ಜಾಗೃತಿ ಹಾಗೂ ಅಭಿಮಾನ ಮೂಡಿಸಿದ್ದರು.ಕನ್ನಡ ಭಾಷಾಭಿಮಾನಿಗಳಾದ ಅವರು ಭಾಷೆಕೊಂದರೆ ಸಂಸ್ಕøತಿಕೊಂದಂತೆ ಎಂಬ ಉತ್ಕಟ ಭಾವನೆ ವ್ಯಕ್ತಪಡಿಸಿದ್ದರು.ಇಂದು ನಾವು ಕನ್ನಡ ಪಡೆದುಕೊಂಡಿದ್ದು, ಅದನ್ನು ಕಳೆದುಕೊಳ್ಳಬಾರದೆಂದು ಹೇಳಿದರು.ರೈತರ ಪರ ಹಾಡುಗಳನ್ನು ಬರೆದಅವರುತಮ್ಮಕೊನೆಯ ದಿನಗಳಲ್ಲಿ ರೈತರಾಗಿ ಬದುಕು ಸಾಗಿಸಿದ್ದರು. ಜನಸಾಮಾನ್ಯರಿಗೆ ನಾಟಕಗಳ ಮೂಲಕವೇ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸಿದ ಮಹಾನುಭಾವರು.
ಕನ್ನಡದಲ್ಲೇ ಬರೆಯಬೇಕು, ಓದಬೇಕು ಹಾಗೂ ಹಾಡಬೇಕೆಂಬುವದುಅವರಅಂತರಂಗದ ಹಂಬಲವಾಗಿತ್ತು.ಕನ್ನಡದ ಅಸ್ಮಿತೆ ಕಾಪಾಡಿದ ಸಕ್ಕರಿ ಬಾಳಾಚಾರ್ಯ ಕನ್ನಡರಂಗಭೂಮಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ.ಆದರೆಅಂತಹ ಪ್ರಾತಃಸ್ಮರಣೀಯರನ್ನು ಕಡೆಗಣಿಸಿದ್ದು ನಮ್ಮದುರ್ದೈವವೇ ಸರಿಎಂದು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಕ್ಕರಿ ಬಾಳಾಚಾರ್ಯ (ಶಾಂತಕವಿಗಳು) ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿದರು.ಗುರು ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಕೃಷ್ಣಮೂರ್ತಿ ಬಿಳಿಗೆರೆ, ಜಿ.ಎಂ. ಹೆಗಡೆ, ನಿಂಗಣ್ಣಕುಂಟಿ, ಪ್ರೊ. ಹರ್ಷ ಡಂಬಳ, ಶ್ರೀಧರ ಗಸ್ತಿ, ಎಂ.ಎಸ್. ನರೇಗಲ್. ಬಾಬುರಾವ ಸಕ್ರಿ, ಹನಮೇಶ ಸಕ್ರಿ, ಮಲ್ಲಿಕಾರ್ಜುನ ಪೆಂಟೇದ ಮುಂತಾದವರಿದ್ದರು. ಕೊನೆಯಲ್ಲಿರಾಘವಕಮ್ಮಾರ ಶಾಂತಕವಿಗಳ ಗೀತಗಾಯನ ಪ್ರಸ್ತುತಪಡಿಸಿದರು. ವಿಜಯ ಸುತಾರತಬಲಾ ಸಾಥ್ ನೀಡಿದರು.