ಶಹಾಬಾದ; ರೈಲು ನಿಲುಗಡೆಗೆ ಆಗ್ರಹ

ಶಹಾಬಾದ:ಎ.2: ನಗರದ ರೈಲು ನಿಲ್ದಾಣದಲ್ಲಿ ಲಾಕ್‍ಡೌನ್‍ಗಿಂದ ಮುಂಚೆ ನಿಲ್ಲುತ್ತಿದ್ದ ನಾಲ್ಕು ಎಕ್ಸಪ್ರೇಸ್ ರೈಲುಗಳನ್ನು ನಿಲ್ಲಿಸಲು ಆಗ್ರಹಿಸಿ ರೈಲ್ವೆ ಪ್ರಬಂಧಕ ಕಲ್ಯಾಣಿ ರಾಜಶೇಖರ ಅವರಿಗೆ ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿ ನಿಯೋಗವು ಸಲ್ಲಿಸಿದ ಮನವಿಯಲ್ಲಿ ಕಳೆದ ಫೆ. 9 ರಂದು ರೈಲು ತಡೆ ನಡೆಸಲು ನಿರ್ಧರಿಸಲಾಗಿತ್ತು. ಸಂಸದ ಡಾ.ಉಮೇಶ ಜಾಧವ ಅವರ ಅವ್ಹಾನದ ಮೇರೆಗೆ ದೆಹಲಿ ರೈಲ್ವೆ ಭವನದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ, ಒಂದು ತಿಂಗಳಾದರು ಯಾವುದೆ ಕ್ರಮ ರೈಲ್ವೆ ಇಲಾಖೆ ಕೈಗೊಳ್ಳದೆ ಇರುವದರಿಂದ ಎ. 10 ಶನಿವಾರ ಅನಿರ್ಧಿಷ್ಠಾವಧಿ ರೈಲು ತಡೆ ನಡೆಸುವದಾಗಿ ಎಚ್ಚರಿಕೆ ನೀಡಿ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ಮ.ಉಬೇದುಲ್ಲಾ, ಉಪಾಧ್ಯಕ್ಷರಾದ ಅರುಣಕುಮಾರ ಪಟ್ಟಣಖರ್, ಹಾಶಮ್ ಖಾನ್, ಲೋಹಿತ ಕಟ್ಟಿ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ರಮೇಶ ಭಟ್ಟ, ಕಾರ್ಯದರ್ಶಿ ರವಿ ರಾಠೋಡ, ಶರಣು ಪಗಲಾಪುರ, ವಾಸುದೇವ ಚವ್ಹಾಣ, ಉನ್ನತ ಸಲಹಾ ಸಮಿತಿ ಸದಸ್ಯರಾದ ಡಾ.ಎಂ.ಎ.ರಶೀದ, ಗಿರೀಶ ಕಂಬಾನೂರ, ಕುಮಾರ ಚವ್ಹಾಣ, ಶೇಖ ಬಾಬು ಉಸ್ಮಾನ್, ಕಿರಣ ಚವ್ಹಾಣ, ಸುಭಾಷ ಜಾಪೂರ, ಅಜೀಮ್ ಸೇಠ, ನಗರದ ಗಣ್ಯರಾದ ಅನೀಲ ಬೊರಗಾಂವಕರ್, ನಾಗೇಂದ್ರ ನಾಟೀಕಾರ, ಗೈಸುರಾಜ ಸಾಹೇಬ್, ನರಸಿಂಹಲು ರಾಯಚೂರಕರ, ಅನೀಲ ಹೀಬಾರೆ, ಸಿದ್ರಾಮ ಕುಸಾಳೆ, ಮಹ್ಮದ ಮಸ್ತಾನ್, ಹದನೂರ, ಬಸವರಾಜ ಬಿರಾದಾರ. ಅನ್ವರಪಾಶಾ ಸೇರಿದಂತೆ ನಗರದ ಗಣ್ಯರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.