ಶಹಾಬಾದ್ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸಲು ರೈಲ್ವೆ ಸಚಿವರ ತಾತ್ವಿಕ ಒಪ್ಪಿಗೆ

ಶಹಾಬಾದ:ಆ.5:ನಗರದಲ್ಲಿ ಕೋವಿಡ್ ಗಿಂತ ಮುಂಚೆ ನಿಲ್ಲುತ್ತಿದ್ದ ಎಲ್ಲಾ ಎಕ್ಸಪ್ರೇಸ್ ರೈಲುಗಳನ್ನು ನಿಲ್ದಾಣದಲ್ಲಿ ನಿಲ್ಲಿಸಬೇಕೆಂದು ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ಹೋರಾಟ ಸಮಿತಿಯ ಸತತ ಹೋರಾಟದ ಫಲ, ಸಂಸದ ಡಾ.ಉಮೇಶ ಜಾಧವ ಅವರ ಪ್ರಯತ್ನದಿಂದ ಕೇಂದ್ರ ರೈಲ್ವೆ ಸಚಿವರಾದ ಆಶ್ವಿನಿ ವೈಷ್ಣವ ಅವರು ಕೆಲ ರೈಲುಗಳನ್ನು ನಿಲ್ಲಿಸಲು ತಾತ್ವಿಕ ಒಪ್ಪಗೆ ನೀಡಿದ್ದಾರೆ.
ಗುರುವಾರ ರಾತ್ರಿ ನವದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಸಂಸದ ಡಾ.ಉಮೇಶ ಜಾಧವ, ಕ.ಕ.ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶಶಿಕಾಂತ ಪಾಟೀಲ, ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಕ.ಕ.ವಾಣಿಜ್ಯ ಮಂಡಳಿ ಸದಸ್ಯರಾದ ಸಂಪತ್ ಕುಮಾರ ಪಾಟೀಲ ಅವರ ನಿಯೋಗವು ಸಚಿವರನ್ನು ಭೇಟ್ಟಿಯಾಗಿ ಹಲವಾರು, ಮನವಿ, ಹೋರಾಟ, ಸಭೆಗಳು ನಡೆದರು ಕೋವಿಡ್‍ಗಿಂತ ಮುಂಚೆ ನಿಲ್ಲುತ್ತಿದ್ದ ಎಕ್ಸಪ್ರೇಸ್ ರೈಲುಗಳು ನಿಲ್ಲದೆ ಇರುವದರನ್ನು ಮನವರಿಕೆ ಮಾಡಲಾಯಿತು. ಶಹಾಬಾದ್ ನಾಗರಿಕರ ಸಮಸ್ಯೆ ಆಲಿಸಿದ ಸಚಿವರು, ಕೆಲ ರೈಲುಗಳನ್ನು ನಿಲ್ಲಿಸಲು ಸ್ಥಳದಲ್ಲಿಯೇ ತಾತ್ವಿಕ ಒಪ್ಪಿಗೆ ನೀಡಿ, ರೈಲ್ವೆ ಅಧಿಕಾರಿಗಳನ್ನು ಕರೆಸಿ, ಶಹಾಬಾದ್ ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಲು ಶೀಘ್ರ ಕ್ರಮ ಕೈಗೊಳ್ಳಲು ಆದೇಶಿಸಿದರು.
ಸಂಸದರ ಕಾರ್ಯಕ್ಕೆ ಶ್ಲಾಘನೆ.
ಸಂಸದ ಡಾ.ಉಮೇಶ ಜಾಧವ ಅವರು ಶಹಾಬಾದ ಹೋರಾಟ ಸಮಿತಿಯ ಹೋರಾಟಕ್ಕೆ ಸ್ಪಂದಿಸಿ ಮೂರು ರೈಲುಗಳ ನಿಲುಗಡೆಗೆ ಕ್ರಮ ಕೈಗೊಂಡಿದ್ದರು. ಈಗ ಇನ್ನೊಂದಿಷ್ಟು ರೈಲುಗಳನ್ನು ನಿಲ್ಲಿಸುತ್ತಿರುವ ಕಾರ್ಯವನ್ನು ಶಹಾಬಾದ ಅಭಿವೃದ್ದ ಹೋರಾಟ ಸಮಿತಿ ಶ್ಲಾಘಿಸಿದೆ.