ಶಹಾಪೂರ ವಿವಿಧ ಸರಕಾರಿ ಕಛೇರಿ ಸಿಬ್ಬಂದಿಯ ಚಲನ-ವಲನ ರಿಜಿಸ್ಟಾರ, ನಗದು ವಹಿ ಪುಸ್ತಕ ಪರೀಶಿಲಿಸಿ :ಪಿ.ಐ ಅರುಣಕುಮಾರ ಭೇಟಿ

ಯಾದಗಿರಿ : ಜು 29 : ಗೌರವಾನ್ವಿತ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರ ಆದೇಶದ ಅನ್ವಯ ಇಂದು ಜುಲೈ 28ರ ಗುರುವಾರ ರಂದು ಯಾದಗಿರಿ ಜಿಲ್ಲೆಯ “ಶಹಾಪೂರದ ತಾಲ್ಲೂಕ ಸರಕಾರಿ ಆಸ್ಪತ್ರೆಗೆ” ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಶ್ರೀ ಎ. ಆರ್. ಕರ್ನೂಲ್ ಅವರು ಮಾರ್ಗದರ್ಶನದಲ್ಲಿ, ಯಾದಗಿರಿ ಕರ್ನಾಟಕ ಲೋಕಾಯುಕ್ತ ಪಿ.ಐ-2 ಶ್ರೀ ಅರುಣಕುಮಾರ ಅವರು ಆಕಸ್ಮಿಕ ಭೇಟಿ ನೀಡಿ ಆಸ್ಪತ್ರೆಯನ್ನು ಪರೀಶಿಲನೆ ಮಾಡಿದರು.

 ಭೇಟಿ ಸಮಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರ ಚಲನ-ವಲನ ರಿಜಿಸ್ಟಾರ ಮತ್ತು ನಗದು ವಹಿ ಪುಸ್ತಕ ಪರೀಶಿಲಿಸಿ ನೋಡಲಾಗಿ ನಿರ್ವಹಣೆ ಮಾಡದೇ ಇರುವುದು ಕಂಡು ಬಂದಿದ್ದು ಕೂಡಲೇ ಸರಕಾರದ ಸುತ್ತೋಲೆ ಆದೇಶದಂತೆ ನಿರ್ವಹಿಸುವಂತೆ ವೈದ್ಯಾಧೀಕಾರಿಗಳಾದ ಡಾ. ಪದ್ಮನಂದ ಗಾಯಕವಾಡ ಅವರಿಗೆ ಸೂಚಿಸಿದರು.
 ನಂತರ ಆಸ್ಪತ್ರೆಯ ವಾರ್ಡಗಳಿಗೆ ಭೇಟಿ ನೀಡಿ ಸ್ವಚ್ಚತೆಯನ್ನು ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಹಾಗೂ ಸಿಬ್ಬಂದಿಗಳು ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸುವಂತೆ ಮತ್ತು ಆಸ್ಪತ್ರೆಯ ಆವರಣ, ಶೌಚಾಲಯ ಶುಚಿತ್ವ ಕಾಪಾಡಲು ಸೂಚಿಸಿದರು.
 ಸಾರ್ವಜನಿಕರು ಆಸ್ಪತ್ರೆಗೆ ಚಿಕ್ಸಿತೆಗಾಗಿ ದಾಖಲಾದ ಸಮಯದಲ್ಲಿ ಕೂಡಲೇ ಚಿಕ್ಸಿತೆ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಕೋವಿಡ್-19 ಸಂಬಂಧಪಟ್ಟಂತೆ, ಮುಂಜಾಗ್ರತ ಕ್ರಮ ವಹಿಸುವಂತೆ ಸೂಚಿಸಿದ್ದರು.

ನಂತರ ಕೃಷಿ ಇಲಾಖೆ ಶಹಪೂರ ಕಛೇರಿಗೆ ಭೇಟಿನೀಡಿ ಸಿಬ್ಬಂದಿಯವರ ಚಲನ-ವಲನ ರಿಜಿಸ್ಟಾರ ಮತ್ತು ನಗದು ವಹಿ ಪುಸ್ತಕ ಪರೀಶಿಲಿಸಿ ನೋಡಲಾಗಿತ್ತು ನಿರ್ವಹಣೆ ಮಾಡದೇ ಇರುವುದು ಕಂಡು ಬಂದಿದ್ದು ಕೂಡಲೇ ಸರಕಾರದ ಸುತ್ತೋಲೆ ಆದೇಶದಂತೆ ನಿರ್ವಹಿಸುವಂತೆ ಶಹಾಪೂರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲ ಕುಮಾರ ಅವರಿಗೆ ಸೂಚಿಸಿದ್ದಾರೆ ಮತ್ತು ಗ್ರೂಪ್ “ಡಿ” ಸಿಬ್ಬಂದಿಯವರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ರೈತರಿಗೆ ರಸಗೊಬ್ಬರ ನಿಗದಿತ ಸಮಯದಲ್ಲಿ ವಿತರಣೆ ಮಾಡಬೇಕೆಂದು ಸೂಚಿಸಲಾಯಿತು ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಪಿ.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.