ಶಹಾಪುರÀ ಪಟ್ಟಣದಲ್ಲಿ ಸ್ವಚ್ಛತಾ ಲೀಗ್

ಶಹಾಪುರ,ಸೆ.19-ಮಣ್ಣೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಎಂದರೆ ಪ್ರತಿಯೊಬ್ಬರು ಹೇಳುವುದು ಗುಣ್ಣ ಮಟ್ಟದ ಚಿಕಿತ್ಸೆ ಜೊತೆಗೆ ಸದಾ ಸಮಾಜಿಕ ಚಟುವಟಿಕೆಗಳು ಮಾಡುವುದರಲ್ಲಿ ಸದಾ ಮುಂದು ಎಂದು ಅದರಂತೆ ಸ್ವಚ್ಛ ಅಮೃತ ಮಹೋತ್ಸವ ನಿಮಿತ್ಯ ಶಹಾಪುರÀ ನಗರಸಭೆ ಹಾಗೂ ಮನ್ನೂರ ಆಸ್ಪತ್ರೆ ಸಹಯೋಗದೊಂದಿಗೆ ಶಹಾಪುರ ಪಟ್ಟಣದಲ್ಲಿ ಸ್ವಚ್ಛತಾ ಲೀಗ ಕಾರ್ಯಕ್ರಮ ನಡೆಯಿತು.
ಶಹಪುರÀ ನಗರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಮನ್ನೂರ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಮನ್ನೂರ ಅವರ ನೃತತ್ವದ ವೈದ್ಯರ ತಂಡ ಸೇರಿದಂತೆ ಶಹಾಪುರ ಪಟ್ಟಣದ ನಿವಾಸಿಗಳು ಪಾಲ್ಗೊಂಡು ಪಟ್ಟಣದಲ್ಲಿ ಜಾಗೃತಿ ರ್ಯಾಲಿ ನಡೆಸಿ, ನಂತರ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು. ಇದರ ಜೊತೆಗೆ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನುರಿತ ವೈದ್ಯರ ತಂಡವು ನಗರಸಭೆಯ ಸಿಬ್ಬಂದಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿದರು.
ಈ ವೇಳೆ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಮನ್ನೂರ ಮಾತನಾಡಿದರು.
ಈ ಸಂದರ್ಭದಲ್ಲಿ ಶಹಾಪುರÀ ನಗರಸಭೆಯ ಆಯುಕ್ತರಾದ ರಮೇಶ ಬಡಿಗೇರ, ಎ.ಇಇ ಹರೀಶ, ಹಾಗೂ ನಗರಸಭೆಯ ಸಿಬ್ಬಂದಿಗಳು ಮತ್ತು ಮನ್ನೂರ ಆಸ್ಪತ್ರೆ ಯ ವೈದ್ಯರ ತಂಡ , ಬಿಜೆಪಿ ಮುಖಂಡ ಗುರು ಕಾಮಾ, ಮುಸ್ತಫಾ ದರ್ಬಾರ ಸೇರಿದಂತೆ ನಗರಸಭೆ ಸದಸ್ಯರು ,ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಹಾಪುರ ಪಟ್ಟಣದ ನಿವಾಸಿಗಳು ಉಪಸ್ಥಿತರಿದ್ದರು,