ಶಹಾಪುರ ಸಂಚಾರಿ ವ್ಯಾಕ್ಷಿನ ಲಸಿಕೆಗೆ ಚಾಲನೆ ಕೊವಿಡ್ ಮುಕ್ತ ಜಿಲ್ಲೆಗಾಗಿ ಪಣ :ಸಚಿವ ಆರ್.ಶಂಕರ್

ಶಹಾಪುರ:ಮೇ.29:ಕಳೆದ ಒಂದರೆಡು ತಿಂಗಳುಗಳ ಕಾಲ ಕೊರಾನ್ ವೈರಸ್ ನಿಂದ ಜನ ತಲ್ಲಣಗೊಂಡು, ಲಾಕ್ ಡೌನ ಸ್ಥಿತಿ ಉಂಟಾಗಿದ್ದು.À ಪ್ರತಿ ದಿನ 700ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದವು. ಇತ್ತಿಚೆಗೆ ಸಂಪೂರ್ಣ ಕೊವಿಡ್ ಸೊಂಕಿತರ ಇಳಿಕೆ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಸರ್ವರ ಸಹಕಾರ ಶಾಸಕರ ಜಿಲ್ಲಾಡಳಿತ, ಮತ್ತು ತಾಲುಕಾ ಆಡಳಿತ. ಕಾರ್ಯಕರ್ತರ , ಮತ್ತು ಆರೋಗ್ಯ ಹಾಗೂ ಪೋಲಿಸ್ ಅಧಿಕಾರಿಗಳ ಪರಸ್ಪರ ಪರಿಶ್ರಮಗಳ ಫಲವಾಗಿ ಸೊಂಕು ಕಡಿಮೆಗೆ ಕಾರಣವಾಗಿದೆ, ಯಾದಗಿರಿ ಜಿಲ್ಲೆಯನ್ನು ಕೊವಿಡ ಮುಕ್ತ ಜಿಲ್ಲೆಯನ್ನಾಗಿಸುವ ಪಣವಾಗಿದೆ, ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಆರ್,ಶಂಕರವರು ಹೇಳಿದರು, ಅವರು ಶಹಾಪುರ ನಗರದಕ್ಕೆ ಏರಡನೆಯ ಬಾರಿಗೆ ಬೇಟಿ ನೀಡಿ.ಇಲ್ಲಿನ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಸಂಚಾರಿ ವ್ಯಾಕ್ಷಿನ ಬಸ್ ಗೆ ಚಾಲನೆ ನೀಡಿ ಮಾತನಾಡಿದರು. ಎಪಿಎಮ್,ಸಿ, ಅಧ್ಯಕ್ಷರಾದ ಈರಣ್ಣ ಸಾಹು ರವರು ವ್ಯಾಕ್ಷಿನ ಪಡೆದುಕೊಂಡು ಚಾಲನೆಗೆ ಸಾಕ್ಷಿಯಾದರು.ಜೂ, 7ರವರೆಗೆ ಕೊರಾನ್ ವೈರಸ್ ಅತೋಟಿಗೆ ಬರಲ್ಲಿದ್ದು ಮುಂದಿನ ದಿನಮಾನಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ, ಅವುಗಳಿಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಸ್ಥಳಿಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಕಾರ ಮನೋಭಾವನೆಗಳಿಂದ ಪ್ರಗತಿಯ ಹಾದಿಯಲ್ಲಿ ಮುನ್ನಡೆಬೆಕಿದೆ ಎಂದ ಸಚಿವರು ಈಗಾಗಲೆ ಜಿಲ್ಲೆಯ ಹಲವಾರು ಆಸ್ಪತ್ರೆಗಳಲ್ಲಿ ವೈಧ್ಯರ ಕೊರತೆ ಇದ್ದು ನುರಿತ ವೈಧ್ಯರನ್ನು ಭರ್ತಿ ಕಾರ್ಯ ಮುಗಿದೆ. ನೇಮಕಗೊಂಡ ವೈಧ್ಯರು ಆಯಾ ಆಸ್ಪತ್ರೆಗಳ ಕರ್ತವ್ಯಗಳಿಗೆ ಹಾಜರಾಗುತ್ತಾರೆ.ಎಂದು ಸಚಿವ ಆರ್.ಶಂಕರ ತಿಳಿಸಿದರು.

ಪ್ರಮಾಣಿಕ ಅಧಿಕಾರಿಗಳಿಗೆ ಹೊಣೆ

ಕರ್ತವ್ಯದಲ್ಲಿ ತಪ್ಪು ಮಾಡಿಕೊಂಡವರನ್ನು ದೂರ ಇಟ್ಟುಕೊಂಡು ಕೊವಿಡ್ ಸಂದಿಗ್ತೆಯಲ್ಲಿ ಗೊಂದಲುಗಳು ಉಂಟು ಮಾಡುವದಕ್ಕಿಂತ ಸೇವೆ ಅವಶ್ಯಕವಾಗಿದ್ದು, ಅಂತವರನ್ನು ಬಿಟ್ಟು ಪ್ರಮಾಣಿಕ ಕರ್ತವ್ಯ ನಿಷ್ಠೆ ಅಧಿಕಾರಿಗಳಿಗೆ ಪ್ರಭಾರದ ಹೊಣೆ ಹಾಕಲಾಗಿದೆ. ಒಂಭತ್ತು ಪ್ರಭಾರಗಳ ಕುರಿತು ಸಭೆಯಲ್ಲಿ ಚರ್ಚಿಸುವದಾಗಿ ಸಚಿವರು ತಿಳಿಸಿದರು. ದೊರನಳ್ಳಿಯಲ್ಲಿ ನಿರ್ಮಿಸಬೇಕಾದ ಕೊವಿಡ್ ಆಸ್ಪತ್ರೆಯನ್ನು ಸೊಂಕಿತರ ಸಂಖ್ಯೆ ಇಳಿಕೆಯಿಂದ ಸ್ಥಗಿತಗೊಳಸಲಾಗಿದೆ, ಜಿಲ್ಲೆಯಲ್ಲಿ ಮತ್ತು ತಾಲುಕಾ ಆಸ್ಪತ್ರೆಗಳಲ್ಲಿ ಯಾವುದೆ ಆಕ್ಷಿಜಿನ್ ಮತ್ತು ವೆಂಟಲೇಟರ್ ಕೊರತೆ ಇರುವದಿಲ್ಲ.ಬೇಡ್ ಸಹ ಅನೂಕೂಲವಾಗಿವೆ.ಎಂದು ಅವರು ವಿವರ ನೀಡಿದರು.ತಾಲುಕಿನಲ್ಲಿ ಸರ್ಕಾರಿ ಶಾಲೆಯಲ್ಲಿ ಅಂಗವಿಕಲರಿಗಾಗಿ ವ್ಯಾಕ್ಷಿನ,ಗೆ ಲಸಿಕೆಗೆ ಸಚಿವರು ಉಧ್ಘಾಟಿಸಿದರು. ಈ ಸಂಧರ್ಭದಲ್ಲಿ ರಾಯಚೂರ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ.ಮಾಜಿ ಮಂತ್ರಿ ಹಾಲಿ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ.ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ. ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ,ಶರಣಬೂಪಾಲರಡ್ಡಿ, ನಾಯ್ಕಲ್, ಜಿಲ್ಲಾಧಿಕಾರಿಗಳಾದ ಡಾ, ಆರ್,ರಾಗಪ್ರೀಯಾ.ಎಸ್ಪಿ, ಸಿಬಿ ವೇದಮೂರ್ತಿ ,ಜಿ,ಪಂ, ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀಮತಿ ಶಿಲ್ಪಾಶರ್ಮಾ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ,ಇಂದುಮತಿ.ಸಾಹಾಯಕ ಆಯುಕ್ತರಾದ ಶಂಕರಗೌಡ ಸೊಮಾನಾಳ. ಡಿವೈಎಸ್ಪಿ, ವೆಂಕಟೇಶ ಹುಗಿಬಂಡಿ,ತಹಿಸಲ್ದಾರ ಜಗನಾಥರಡ್ಡಿ, ಸಿಪಿಐ ಶ್ರೀನಿವಾಸ ಅಲ್ಲಾಪುರೆ.ಪಿ,ಐ ಚೆನ್ನಯ್ಯ ಹೀರೆಮಠ. ತಾ,ಪಂ, ಕಾನಿ ಅಧಿಕಾರಿ ಜಗನಾಥಮೂರ್ತಿ, ನಗರಸಭೆ ಪೌರಾಯುಕ್ತರಾದ ರಮೆಶ ಪಟ್ಟೆದಾರ, ತಾಲುಕಾ ಆರೋಗ್ಯ ಅಧಿಕಾರಿ ಡಾ,ರಮೇಶ ಗುತ್ತೆದಾರ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


ರಾಜರಾಜಕಾರಣದಲ್ಲಿ ಯಾವುದೆ ಗೊಂದಲಗಳಿಲ್ಲ, ದೇಹಲಿಗೆ ಹೋಗುವದು ಸಹಜದ ಸಂಗತಿಯಾಗಿದೆ, ಅದನ್ನೇ ಉವಾಪೋವಾಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮುಖ್ಯಮಂತ್ರಿ ಬಿಎಸ್,ವೈಯವರು ಸಮರ್ಥ ರಾಜಕಾರಣಿಯಾಗಿದ್ದಾರೆ. ಕಳೆದ ಕೊರಾನ್ ದುಸ್ಥಿತಿಯಲ್ಲಿ ರಾಜ್ಯದ ಜನತೆಗಾಗಿ ಅವಿರತ ಶ್ರಮ ಪಡುತ್ತಿದ್ದಾರೆ. ಅಲ್ಲದೆ 2 ಅಲೆ ಸಮಯದಲ್ಲೂ ಹಗಲೀರಳು ಚಿಂತನೆ ಮಾಡಿಕೊಂಡು ರಾಜ್ಯ ಜನಪರ ಹಿತ ಕಾಪಾಡುವದು ಮುಖ್ಯಮಂತ್ರಿಗಳ ಅತ್ಯಂತ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಅಸಾಧ್ಯದ ಮಾತು.

ಆರ್, ಶಂಕರ ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು