ಶಹಾಪುರ ವಿಕೆಂಡ್ ಕಪ್ರ್ಯೂ ಅಧಿಕಾರಿಗಳ ಕಣ್ಗಾವಲು: ನಿಯಮ ಉಲ್ಲಂಘನೆಗೆ ದಂಡೋಪಾಯ ಅಸ್ತ್ರ!!

(ಸಂಜೆವಾಣಿ ವಾರ್ತೆ)
ಶಹಾಪುರ:ಎ.25:ಕೊರೊನಾ ಹರಡುವದನ್ನು ತಡೆಗಟ್ಟಲು ತಾಲೂಕು ಆಡಳಿತ ಶಹಾಪುರ ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಬೆಳಿಗ್ಗೆಯಿಂದಲೆ ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಲಾಯಿತು. ವಿಕೆಂಡ್ ಕಪ್ರ್ಯೂ ಜಾರಿಯಿಂದ ಅನವಾಶ್ಯಕವಾಗಿ ಹೊರಬರುವ ಬೈಕ ಸವಾರರು ಮತ್ತು ಇತರೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು. ನೀಯಮ ಉಲ್ಲಂಘಿಸಿದಲ್ಲಿ ದಮಡೋಪಾಯದ ಅಸ್ತ್ರ ಬಳಿಸಕೊಂಡು ಬಿಸಿ ಮುಟ್ಟಿಸಿದರು.
ತಹಸಿಲ್ದಾರ ಜಗನಾಥರಡ್ಡಿ ಗ್ರಾಮೀಣ ಸಿ.ಪಿ.ಐ ಶ್ರೀನಿವಾಸ್ ಅಲ್ಲಾಪುರೆ, ಪಿ.ಐ. ಚೆನ್ನಯ್ಯ ಹೀರೆಮಠ, ನಗರಸಭೆ ಪೌರಾಯುಕ್ತರಾದ ರಮೇಶ ಪಟ್ಟೆದಾರ, ಪಿ.ಎಸ್.ಐ ಚಂದ್ರಕಾಂತ ಮಾಕಲೆ, ಶಾಮ ಸುಂದರನಾಯಕರವರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರದಕ್ಷಣೆ ಹಾಕುತ್ತಾ ವ್ಯಾಪಾರಸ್ತರಿಗೆ ಎಚ್ಚರಿಕೆ ನೀಡಿದರು. ಕೊರಾನ್ ಅಲೆ ತಿವೃ ಆತಂಕದ ದುಸ್ಥಿತಿ ಉಂಟಾಗಿದ್ದು ಜನರ ಆರೋಗ್ಯಕರ ಬೇಳವಣಿಗೆ ದೃಷ್ಟಿಯಿಂದ ಹೊರಗಡೆ ಬಾರದು ಎಂದು ತಿಳಿಸಿದ ಅವರು, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರಾಜ್ಯ ಹೆದ್ದಾರಿಯಲ್ಲಿನ ವಾಹನಗಳ ಮತ್ತು ಸವಾರರಿಗೆ ತರಾಟೆಗೆ ತೆಗೆದುಕೊಂಡರು. ಮೇ 4ರವರೆಗೆ ವಿಧಿಸಲಾದ ಕಪ್ರ್ಯೂ ಮಾರ್ಗಸೂಚಿಯಂತೆ ತಾಲೂಕು ಆಡಳಿತ ನಗರಸಭೆ ಪೋಲಿಸ್ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ ಮಾರುಕಟ್ಟೆಗಳ ಮತ್ತು ಅಂಗಡಿಮುಗ್ಗಟ್ಟುಗಳ ಮೇಲೆ ನಿಗಾವಹಿಸಿ, ಮಾರ್ಗಸೂಚಿ ಉಲ್ಲಂಘನೆ ಮಾಡಿದ ಅಂಗಡಿಗಳ ಮೇಲೆ ದಂಡ ವಿಧಿಸಿ ಜಾಗ್ರತಿ ನೀಡಿದರು. ದೋರ£ಹÀಳ್ಳಿ, ಸಗರ, ಗೋಗಿ, ಹತ್ತಿಗೂಡೂರ. ಭೀಮರಾಯನಗುಡಿ, ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ವಿಕೆಂಡ್ ಕಪ್ರ್ಯೂ ಜಾರಿಯಿಂದ ಅಂಗಡಿಗಳಿಗೆ ಬೀಗ ಹಾಕಲಾಗಿತ್ತು. ಗೋಗಿ ಪಿ.ಎಸ್.ಐ ಒಡೆಯರ್, ಭೀಮರಾಯನಗುಡಿ ಪಿ.ಎಸ್.ಐ ಸುಶೀಲ್‍ಕುಮಾರವರು ಆಯಾ ಗ್ರಾಮಗಳಲ್ಲಿ ಸೂಕ್ತ ಪೋಲಿಸ್ ವ್ಯವಸ್ಥೆಗೊಳಿಸಿ. ಕೊವಿಡ್ ನಿಯಂತ್ರಣದ ನೀತಿಗಳನ್ನು ಪಾಲನೆ ಮಾಡುವಂತೆ ಗ್ರಾಮೀಣ ಜನತೆಗೂ ಕಪ್ರ್ಯೂ ಜಾರಿಯ ಬಿಸಿ ತಟ್ಟಿಸಿದರು.
5 ಭಾಗಗಳಲ್ಲಿ ತರಕಾರಿ ಮಾರಾಟ ಅನುಮತಿ

ಕಿರಾಣಿ ಅಂಗಡಿಗಳ ಮಾಲಿಕರ ಮತ್ತು ತರಕಾರಿ ವ್ಯಾಪಾರಸ್ಥರ ಸಭೆಯಲ್ಲಿ ತಾಲೂಕು ಆಡಳಿತ ಕೈಗೊಂಡ ನಿರ್ಣಾಯಕಗಳ ಪ್ರಕಾರ ನಗರದ ಐದು ಕಡೆಗಳಲ್ಲಿ ತರಕಾರಿ ಮಾರಾಟಕ್ಕೆ ಅನುಮತಿಸಲಾಗಿದೆ. ಹಳಿಸಗರ ತಹಸಿಲ್ದಾರ ಹಳೆ ಕಚೇರಿ ಎದರುಗಡೆ ಹೊಸ್ ಬಸ್ ನಿಲ್ದಾಣ, ದಿಗಿಬೇಸ್, ಕೆಇಬಿ, ಮೊಚಿಗಡ್ಡಾ ದರ್ಬಾನ್ ಬೆಸ್, ಸ್ಥಳಗಳಲ್ಲಿ ತರಕಾರಿ ವೈವಾಟುಗಳಿಗಾಗಿ ಸಮ್ಮತಿಸಲಾಗಿದೆ ಎಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ. ಚಾವiನಾಳ, ಭೀಮರಾಯಗುಡಿ, ಗೋಗಿ, ದೊರ£ಹÀಳ್ಳಿ, ಸಗರ, ಸಂತೆ ಕೇಂದ್ರಗಳಾಗಿದ್ದು ಗ್ರಾ.ಪಂ. ಆಡಳಿತ ಮತ್ತು ಸ್ಥಳಿಯ ಪೋಲಿಸ್ ಇಲಾಖೆ ನಿರ್ಧಾರದಂತೆ ಜನ ಸಾಮಾನ್ಯರಿಗೆ ತರಕಾರಿ ಕೈಗೊಡುವ ಕಾರ್ಯ ಮಾಡಬೇಕಿದೆ. ಎಂದು ಜನತೆ ಆಶಾ ಭಾವನೆಗಳನ್ನು ಮೂಡಿಸಿದರು.

ಸರ್ಕಾರದ ಕೊವಿಡ್ ನೀಯಮಗಳನ್ನು ಪಾಲನೆ ಮಾಡುವದು ನಮ್ಮ ಕರ್ತವ್ಯಗಳಾಗಿದ್ದು. ಕೀರಾಣಿ ವ್ಯಾಪಾರ ವೈವಾಟು ನಡೆಯುವದು 7 ಗಂಟೆಯಿಂದ ಜನರು ಅಂಗಡಿಗಳಿಗೆ ಬರುತ್ತಾರೆ. ಈಗಿರುವ 6 ರಿಂದ 9 ಗಂಟೆಯವರೆಗಿನ ಸಮಯವನ್ನು 11 ಗಂಟೆಯವರೆಗೆ ವಿಸ್ತರಣೆ ಮಾಡಿದಲ್ಲಿ ಜನ ಸಾಮಾನ್ಯರಿಗೆ ಅನೂಕೂಲವಾಗುತ್ತದೆ.

             ಗುಂಡಪ್ಪ ತುಂಬಗಿ
  ನಗರ ಕಿರಾಣಿ ಮಾರ್ಚಂಟ್ ಮಾಲಿಕರ ಸಂಘದ ಅಧ್ಯಕ್ಷರು ಶಹಾಪುರ