ಶಹಾಪುರ ಲಾಕ್ ಡೌನ್ ಯಶಸ್ವಿ ಕಾರ್ಯಚರಣೆ 230 ವಾಹನಗಳಿಗೆ 1.50 ಲಕ್ಷ ಅಧಿಕ ದಂಡ:ಪಿ.ಐ. ಹೀರೆಮಠ

ಶಹಾಪುರ:ಜೂ.1:ನಗರ ಸೇರಿದಂತೆ ಗ್ರಾಮೀಣ ಪ್ರದೆಶಗಳಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿನುಸಾರವಾಗಿ, ಯಶಸ್ವಿ ಕಾರ್ಯಚರಣೆ ಕಾನೂನು ಸುವ್ಯವಸ್ಥೆಗಳೊಂದಿಗೆ ಅನಾವಶ್ಯಕವಾಗಿ ರಸ್ತೆಗಿಳಿದು ಓಡಾಡುವ ದ್ವೀಚಕ್ರ ಸವಾರರಿಗೆ, ಮತ್ತು ದಾಖಲಾತಿಗಳಿಲ್ಲದೆ ವಾಹನಗಳನ್ನು ಚಾಲನೆ ಮಾಡುವರರಿಗೆ ,ಅಲ್ಲದೆ ಲಾಕ್ ಡೌನ್ ನೀತಿ ನೀಯಮಗಳಲ್ಲಿ ಉಲ್ಲಂಘಿಸಿಕೊಂಡು ಮಾಸ್ಕ ಧರಿಸದೆ ಇರುವವರಿಗೆ,ಯಾದಗಿರಿ ಜಿಲ್ಲಾ ಎಸ್ಪಿ, ಸಿಬಿ ವೇಧಮೂರ್ತಿಯರ ಮತ್ತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಸೂಕ್ತ ಮಾರ್ಗದರ್ಶನದಂತೆ ದಂಡ ವಿಧಿಸಿ ಇಂದಿನವರೆಗೆ ಒಟ್ಟು 230 ಅಧಿಕ ವಾಹನಗಳನ್ನು ವಶಪಡಿಸಿಕೊಂಡು, 1 ಲಕ್ಷ,ದ 50 ಸಾವಿರ ರೂ,ಗಳನ್ನು ದಂಡ ವಸೂಲಾಲಿ ಮಾಡಲಾಗಿದೆ,ಎಂದು ನಗರ ಪಿ,ಐ ಚೆನ್ನಯ್ಯ ಹೀರೆಮಠರವರು ತಿಳಿಸಿದರು. ಅವರು ಈ ಕುರಿತು ಮಾಹಿತಿ ನೀಡಿ. ಮಾಸ್ಕ ದರಿಸದೆ ಬೇಕಾಬಿಟ್ಟಿಯಾಗಿ ಓಡಾಡುವರಿಗೆ 180 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು, ಅವರಿಂದ ಅಂದಾಜು 18 ಸಾವಿರಕ್ಕೂ ಅಧಿಕ ದಂಡ ವಸುಲಿ ಮಾಡಲಾಗಿದೆ. ಎಂದ ಅವರು ನಗರದಲ್ಲಿ ಪ್ರಗತಿಪರ ಹಿತಚಿಂತಕರು, ನಗರದ ಹಿತೈಸಿಗಳು ಸರ್ವ ನಾಗಿರಕರು ಲಾಕ್ ಡೌನ್ ಜಾರಿಯಲ್ಲಿ ಪ್ರಮುಖದಾರಿಗಳಾಗಿದ್ದು, ಸಹಕಾರ ನೀಡಿದ್ದಾರೆ. ಇಂದು ನಗರದಲ್ಲಿ ಸಂಪೂರ್ಣ ಬಂದ್ ಮಾಡುವದರ ಮುಖಾಂತರ ಲಾಕ್ ನೀತಿ ನೀಯಮಗಳ ಪಾಲನೆಯಲ್ಲಿ ಶಹಾಪುರ ನಗರ ಮಾಹಾಜನತೆ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಹಿರೆಮಠರವರು, ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಪೋಲಿಸ್ ವ್ಯವಸ್ಥೆ ಮಾಡಿದ್ದು ಕದ್ದು ಮುಚ್ಚಿಕೊಂಡು ಅಂಗಡಿ ವ್ಯಾಪಾರ ವೈವಾಟು ಮಾಡುವವರ ಮೇಲೆ ತೀರಾ ನಿಗಾವಹಿಸಲಾಗಿದೆ. ಅಲ್ಲದೆ ಪೋಲಿಸರು ವಾಹನಗಳಲ್ಲಿ ಲಾಕ್ ಡೌನ್ ಕುರಿತು ಜಾಗ್ರತಿ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಳ್ಳಿಯಲ್ಲೂ ಸಹ ಲಾಕ್ ಡೌನ್ ಸ್ಪಂಧನೆ ದೊರೆಯುತ್ತಿದ್ದು. ಕೊರಾನ್ ಹೊಡೆದೊಡಿಸುವಲ್ಲಿ ಸರ್ವರು ಮುಂದಾಗುತ್ತಿದ್ದಾರೆ. ಬಿಟ್ ಪೋಲಿಸರು ತಮ್ಮ ಗ್ರಾಮಗಳಲ್ಲಿ ಕರ್ತವ್ಯದ ಮೇಲೆ ಹಳ್ಳಿ ಜನರ ಮನವಲಿಕೆಗೆ ಶ್ರಮಿಸುತ್ತಿದ್ದಾರೆ ಎಂದು ಪಿ,ಐ ಹೀರೆಮಠರವರು ವಿವರಿಸಿದರು.ಲಾಕ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಠಾಣಾ ಪಿ,ಎಸ್,ಐಗಳಾದ ಚಂದ್ರಕಾಂತ ಮಾಕಲೆ, ಶ್ಯಾಮಸುಂದರ್ ನಾಯಕ.,ಅಲ್ಲದೆ ಎ,ಎಸ್,ಐ, ಪೋಲಿಸ್ ಸಿಬ್ಬಂದಿಯವರು ಪರಸ್ಪರ ಸಹಕಾರ ಮನೋಭಾವನೆಗಳು ಕಾರಣವಾಗಿವೆ.ಎಂದು ಅವರು ತಿಳಿಸಿದರು.