ಶಹಾಪುರ ರಿಂಗ್‍ರೋಡ್ ಬದಿಯಲ್ಲಿ ಸಸಿ ನೆಡುವಿಕೆ

ಬೀದರ:ಸೆ.16: ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಮತ್ತು ವನ ಮಹೋತ್ಸವದ ನಿಮಿತ್ತ ಶಹಾಪುರ ರಿಂಗ್‍ರೋಡ್ ಬದಿಯಲ್ಲಿ ಸಸಿ ನೆಡುವP Áರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಾಡ್ಲೂರ ಸತ್ಯನಾರಾಯಾಣಾಚಾರ್ಯ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನ್ಯಾಯಾಧೀಶರು, ಬೀದರ ಪರಿಸರವು ಅತ್ಯಂತ ಸುಮಧುರವಾಗಿದೆ. ಇದು ಮುಂದುವರೆಯಲು ಮತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಸಿಗುವ ನಿಟ್ಟಿನಲ್ಲಿ ಸಸಿ ನೆಟ್ಟು ಬೆಳೆಸುವ ಕಾರ್ಯವು ನಿತ್ಯ ನಿರಂತರ ನಡೆಯಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾತನಾಡಿ, ಇದು ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ಪರಿಸರ ಎನ್ನುವ ಭಾವನೆಯು ನಮ್ಮಲ್ಲಿ ಬಂದಲ್ಲಿ ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳು ಸಾಧ್ಯವಾಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ಷೆ ಗರೀಮಾ ಪನವಾರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ., ವಲಯ ಅರಣ್ಯಅಧಿಕಾರಿ ಪ್ರವೀಣಕುಮಾರ ಮೋರೆ, ಸಾಮಾಜಿಕ ವಲಯ ಅರಣ್ಯಅಧಿಕಾರಿ ಶಿವಕುಮಾರ ರಾಡೋಡ ಹಾಗೂ ಇತರರು ಇದ್ದರು.