ಶಹಾಪುರ ಪಿಡಿಓಗಳ ಅಮಾನತಗಾಗಿ ಡಿ.ಎಸ್.ಎಸ್ ಪ್ರತಿಭಟನೆ

ಶಹಾಪುರ:ನ.12:

ತಾಲೂಕಿನ ವಿವಿದ ಗ್ರಾಮ ಪಂಚಾಯತಗಳ ಅಭಿವೃದ್ದಿ ಅಧಿಕಾರಿಗಳು ಭ್ರಷ್ಠಾಚಾರದಲ್ಲಿ ತೊಡಗಿದ್ದು ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸದೆ ತಮಗಿಷ್ಟಬಂದಂತೆ ವರ್ತಿಸುತ್ತಿದ್ದು ಅಧಿಕಾರಿಗಳನ್ನುಕೂಡಲೆ ಅಮಾನತು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷರಾದ ಶರಣು ದೋರನಹಳ್ಳಿ ಆಕ್ರೊಶ ವ್ಯಕ್ತಪಡಿಸಿದರು.

ನಗರದ ತಾಲೂಕು ಪಂಚಾಯತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಸಿಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ತಾಲೂಕಿನ ದೊರನಹಳ್ಳಿ, ಕೋಂಕಲ್, ಹೈಯಾಳ್, ಹುರಸಗುಂಡಗಿ, ರಸ್ತಾಪುರ, ಮದ್ರಿಕಿ, ಟಿ ವಡಗೇರಾ, ಚಾಮನಾಳ, ಬೀರನೂರ, ಹೋತಪೇಠ, ಐಕೂರ ಗ್ರಾಮ ಪಂಚಾಯತಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ ಅನುದಾನವನ್ನು ಕಾನೂನಿನ ವ್ಯಾಪ್ತಿಯಲ್ಲಿ ಖರ್ಚು ಮಾಡದೆ, ತಮಗಿಷ್ಟಬಂದಂತೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿ ಸಾರ್ವಜನಿಕರ ಹಣ ದುರ್ಬಳಕೆ ಮಾಡುತ್ತಿದ್ದಾರೆ. ಜೊತೆಗೆ 14 ಮತ್ತು 15ನೇ ಹಣಕಾಸಿನಲ್ಲಿ ಶೇ70% ರಷ್ಟು ಅನುದಾನ ಯಾವುದೆ ಕಾಮಗಾರಿಗಳಿಗೆ ವಿನಿಯೋಗಿಸದೆ ಬೋಗಸ್ ಬಿಲ್ ಮಾಡಿದ್ದಾರೆ. ಅದರೊಂದಿಗೆ ಸಾಮಾಜಿಕ ಅಡಿಟ್ ಮಾಡಿಸಿಲ್ಲ, ಸ್ಥಳಿಯ ಮೂಲದ ಕ್ರೂಡಿಕರಣಗೋಂಡ ಅನುದಾನ ವಿವರಕ್ಕೆ ಲೆಕ್ಕವೇ ಇಲ್ಲ, ಪರಿಶಿಷ್ಟ ಜಾತಿ ಮತ್ತು ಪಂಗಡ ಕ್ಷೇಮಾಭಿವೃದ್ದಿಗೆ ಬರುವ 24% ರಷ್ಟು ಅನುದಾನ ಬಳಕೆ ಮಾಡಿಲ್ಲ ಹೀಗೆ ಹಲವಾರು ಸಮಸ್ಯೆಗಳಿಂದ ಈ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳ ವಿರುದ್ದ ಪ್ರತಿಭಟಿಸಿ ಅಮಾನತು ಮಾಡಬೇಕೇಂದು ಅಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಈರಣ್ಣ ಕಸನ್, ವಿಶ್ವ ನಾಟೇಕರ, ರಾಜು ಸಲಾದಪುರ, ಚಂದ್ರಶೇಖರ ಹುರಸಗುಂಡಗಿ, ಸಂತೋಷ ಗೋಗಿ, ವಿರೇಶ್ ಕೋಂಕಲ್, ಸಾಬಣ್ಣ ಕಿರಿ ಹೈಯಾಳ್, ಶಿವು ಪೊತೆ, ರಾಜು ಚಂದಾಪುರ, ಮಾನಪ್ಪ ಜೇಗ್ರಿ, ಮಲ್ಲು ಆರಬೊಳ್, ಶೇಖರ ಬಡಿಗೇರ, ಮಲ್ಲಿಕಾರ್ಜುನ ಶಹಾಪುರ, ಮಂಜು ಹಾಲಬಾವಿ, ಸಿದ್ದು ಮುಂಡಾಸ್, ಶರಣು ಐಕೂರ, ಬಸ್ಸು ಕ್ಯಾತನಾಳ, ಸಾಬಖಿú ಹಂಚನಾಳ, ಭಿಮಣ್ಣ ಕ್ಯಾತನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.