ಶಹಾಪುರ ನಗರ ಶಾಶ್ವತ ಕುಡಿಯುವ ನೀರಿನ 58 ಕೋಟಿ ಪೈಪಲೈನ್ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ: ದರ್ಶನಾಪುರ

ಶಹಾಪೂರ:ಜೂ.11:ಶಹಪುರ ನಗರ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಸನ್ನತಿ ಬ್ರೀಡ್ಜ ಕಮ್ ಬ್ಯಾರೆಜ್‍ನಿಂದ ನಗರಕ್ಕೆ ಸಗಟು ನೀರು ಸರಬರಾಜು ಮಾಡುವ ಪೈಪಲೈನ ಕಾಮಗಾರಿಗೆ 58 ಕೋಟಿ ರೂ ಅನುಮೋಧನೆ ನೀಡಿದ್ದು. ಟೆಂಡರ್ ಪ್ರಕ್ರೀಯೆ ಹಂತದಲ್ಲಿದೆ. 40 ವರ್ಷ ನೀರಿನ ಬರವಿಲ್ಲದಂತಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಮೊದಲ ಆದ್ಯತೆ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರವರು ಹೇಳಿದರು.

ನಗರದ ಬಾಪುಗೌಡನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೆ ಸಮ್ಮೀಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 130 ಕೋಟಿ ರೂ ಗಳ ಅಂದಾಜು ಪತ್ರಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ರಾಜುಗೌಡರ ಹೆಚ್ಚಿನ ಕಾಳಜಿಯಿಂದ ಇಂದು ಸಂಪುಟದಲ್ಲಿ ಶಹಾಪುರ ನಗರಕ್ಕೆ ಭೀಮಾ ನದಿಯಿಂದ ಕುಡಿಯುವ ನೀರಿನ ಪೈಪಲೈನ ಕಾಮಗಾರಿಗೆ 58 ಕೊಟಿ ರೂ,ಗಳನ್ನು ಹಣಕಾಸು ಇಲಾಖೆಯಿಂದ ಬಿಡುಗಡೆಗೊಳಿಸಿದ್ದಾರೆ. ಈಗಾಗಲೆ 16 ಕೊಟಿ ರೂ ವೆಚ್ಚದಲ್ಲಿ ಪಿಲ್ಟರ್ ಬೆಡ್ ಕಾಲೋನಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ಹೋಸ ಪೈಪಲೈನ ಕಾಮಗಾರಿ ಮುಂದುವರೆದಿದೆ. ಭೀಮಾ ನದಿಯಿಂದ ಬರುವ ಈ ಕಾಮಗಾರಿಯನ್ನು 14 ತಿಂಗಳಲ್ಲಿ ಮುಗಿಯುವ ಸಾಧ್ಯತೆಯಲ್ಲಿದೆ.

ಜೊತೆಗೆ ಜಲಜೀವನ ಮಷೀನ ಅರ್ಬನ್ ಅಭಿವೃದ್ದಿಯಲ್ಲಿ 165 ಕೋಟಿ ರೂ ಗಳ ಅಂದಾಜು ಪತ್ರಿಕೆ ಸಲ್ಲಿಸಲಾಗಿದೆ. ಈ ಅನುಧಾನ ಮಂಜೂರಿಗೊಂಡಲ್ಲಿ ಮುಂದಿನ 40 ವರ್ಷಗಳಿಗೂ ಅಧಿಕ ಕಾಲ ನಗರದಲ್ಲಿ ಕುಡಿಯುವ ನೀರಿನ ಪೈಪಲೈನಗಳಿಗೆ ಯಾವುದೆ ಸಮಸ್ಯಯುಂಟಾಗುವದಿಲ್ಲ. ಕಳೆದ 2019ರಲ್ಲಿ ನಗರದ ಒಳಚರಂಡಿ ನಿರ್ಮಾಣಕ್ಕಾಗಿ 172 ಕೊಟಿ ರೂ,ಗಳ ಅಂದಾಜು ಪತ್ರಿಕೆಗೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಅನುಧಾನ ಮಂಜೂರಿಯಾದಲ್ಲಿ ನಗರದಲ್ಲಿ ಸುಜ್ಜಿತ ಚರಂಡಿಗಳ ವ್ಯವಸ್ಥೆಗೊಳ್ಳುತ್ತದೆ ಎಂದು ದರ್ಶನಾಪುರವರು ತಿಳಿಸಿದರು.

ಮತಕ್ಷೇತ್ರದ 6 ಹೊಬಳಿಗಳಿಗೆ ವಿಧ್ಯುತ್ ಉಪಕೆಂದ್ರಗಳು ಸ್ಥಾಪನೆ.

ಗ್ರಾಮಿಣ ಪ್ರದೇಶದ ಜನರಿಗೆ ಮತ್ತು ರೈತರಿಗೆ ನೀರಂತರ ವಿಧ್ಯುತ್ ಸಂಪರ್ಕ ನೀಡುವ ಉದ್ದೇಶದಿಂದÀ ಶಹಾಪುರ ಮತಕ್ಷೇತ್ರದ ಶಿರವಾಳ. ಭೀಮರಾಯನಗುಡಿ, ಸಗರ, ನಗರನೂರ, ಯಕ್ತಾಪುರ, ಹೋಸಕೇರಾಗಳಲ್ಲಿ 110 ಕೆವಿ ವಿಧ್ಯುತ್ ಉಪಕೆಂದ್ರ ಸ್ಥಾಪನೆಗೆ ಸರ್ಕಾರ ಮಂಜೂರಿ ನೀಡಿದ್ದು. ಸದ್ಯದಲ್ಲೆ ಕಾಮಗಾರಿ ಪ್ರಾರಂಭಗೊಳ್ಳಲಿದೆ, ಪ್ರತಿ ಉಪಕೇಂದ್ರಕ್ಕೆ 10 ಕೋಟಿರೂ ವೆಚ್ಚವಾಗಲಿದೆ. ಸದ್ಯ ನಗನೂರಿನ ಉಪಕೇಂದ್ರದ ಕಾಮಗಾರಿ ಪ್ರಾರಂಭಗೊಂಡಿದೆ. ಎಂದು ಅವರು ನುಡಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಗೋಗಿ. ಮಾಹಾದೇವಪ್ಪ ಸಾಲಿಮನಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ರಾಜಕುಮಾರ ಮತ್ತು ಶಂಕರಗೌಡ, ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಶಾಸಕರ ಆಪ್ತ ಸಹಾಯಕ ಶಿವಶರಣ ಇಟಗಿ ಸೇರಿದಂತೆ ಇತರರು ಹಾಜರಿದ್ದರು.


ಕೊವಿಡ್ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎರಡನೇ ಅಲೆಯ ಕುರಿತು ಮುನ್ಸೂಚನೆ ಇದ್ದರು ಕೇರ್ ಮಾಡದ ಕಾರಣ ಮೊದಲು 10 ಸಾವಿರ ಬರುತ್ತದ್ದ ಸೋಮತಿತರ ಸಂಖ್ಯೆ 50 ಗಡಿದಾಟುತ್ತಿತ್ತು. ಜೊತೆಗೆ ಶಹಾಪುರ, ಸುರಪುರ ಆಸ್ಪತ್ರೆಗಳಲ್ಲಿ ಆಕ್ಷಿಜನ್ ಮತ್ತು ಕೋರತೆ ನೀಗಿಸಲಾಗದ ಕಾರಣ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಡಳಿತ ಯಂತ್ರದ ನಿರ್ಲಕ್ಷದಿಂದ ಬಡವರಿಗೆ ಸಿಗಬೇಕಾದ ರೆಮ್‍ಡಿಸಿವಿಯರ್ ಇಂಜಕ್ಷನ್ ಬ್ಲಾಕ್‍ನಲ್ಲಿ ಮಾರಾಟ ಮಾಡುವಂತಾಗಿತ್ತು. ಈ ಇಂಜಕ್ಷನ್‍ಗಳು ಖಾಸಗಿ ಪಾಲಗಾಲು ಸರ್ಕಾರದ ವೈಫಲ್ಯತೆ ಮೂಲ ಕಾರಣ. ರಾಜ್ಯ ಸರ್ಕಾರ ಮಲತಾಯಿ ದೋರಣೆ ತೋರುತ್ತಿದ್ದು. ಕ್ಷೇತ್ರದಲ್ಲಿ ಹಲವಾರು ಅನುಧಾನಗಳು ವಾಪಸ್ ಪಡೆಯಲಾಗಿದೆ, ಇನ್ನೂ ಹಲವಾರು ಕಾಮಗಾರಿಗಳ ಬಾಕಿ ಹಣ ಬಿಡುಗಡೆಗೊಂಡಿಲ್ಲ. ಪ್ರವಾಹಕ್ಕೆ ಕೊಚ್ಚಿಹೊದವರ ಆಶ್ರೆಯಕ್ಕಾಗಿ ನೀಡಿದ ಅನುಧಾನ ಇನ್ನೂ ಬಡವರ ಕೈ ಸೇರಿಲ್ಲ. ಯಡಿಯುರಪ್ಪನವರ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ.

         ಶರಣಬಸಪ್ಪಗೌಡ ದರ್ಶನಾಪುರ ಶಾಸಕರು ಶಹಾಪುರ