ಶಹಾಪುರ ನಗರಸಭೆ ಬಜೆಟ್ ಸಭೆ 1.63 ಕೋಟಿ ರೂ ವಾರ್ಷಿಕ ಉಳಿತಾಯಕ್ಕೆ ಮಂಡನೆ

ಶಹಾಪುರ:ಮಾ.31:ಸ್ಥಳಿಯ ನಗರಸಭೆ 2021-22 ನೇಯ ಸಾಲಿನ ವಾರ್ಷಿಕ ಮುಂಗಡ ಪತ್ರ ಮಂಡನಾ ಸಭೆ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸಹನಾಜ ಬೇಗಂ ದರ್ಭಾನರವರ ಅಧ್ಯಕ್ಷತೆಯಲ್ಲಿ ಜರುಗಿತು. ಪೌರಾಯುಕ್ತ ರಮೇಶ ಪಟ್ಟೆದಾರವರು ಬಜೆಟ್ ಮಂಡನೆ ಮಾಡಿದರು.

ನಂತರ ಮಾತನಾಡಿದ ಅವರು, ವಾರ್ಷಿಕ ಆದಾಯ ಮೂಲಗಳಂತೆ ಆಸ್ತಿ ತೆರಿಗೆ 2.20ಕೋಟಿ, ನೀರನ ತೆರಿಗೆ 43 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ 25 ಲಕ್ಷ, ಖಾತಾ ವರ್ಗಾವಣೆ ಶುಲ್ಕು 30 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕುಗಳು 15 ಲಕ್ಷ, ವ್ಯಾಪಾರ ಪರವಾನಿಗೆ 4.50 ಲಕ್ಷ, ಹೊಸ ಮಳಿಗೆಗೆಳ ಡಿಪಾಜಿಟ್ ಹಣ 1 ಕೋಟಿ ರೂಗಳು ಆದಾಯ ಬರಲಿವೆ.

ನೀರಿನ ಸರಬರಾಜು ವ್ಯವಸ್ಥೆಗಾಗಿ 45 ಲಕ್ಷ, ಬಿದಿದೀಪ ನಿರ್ವಹಣೆಗೆ 35 ಲಕ್ಷ, ರಸ್ತೆ ನಿರ್ಮಾಣಕ್ಕಾಗಿ 3.50 ಕೋಟಿ, ಚರಂಡಿ ನಿರ್ಮಾಣಕ್ಕಾಗಿ 2ಕೋಟಿ, ಉಧ್ಯಾನವನ ನಿರ್ಮಾಣಕ್ಕಾಗಿ 20 ಲಕ್ಷ, ಒಳಚರಂಡಿ ನಿರ್ಮಾಣಕ್ಕಾಗಿ 1 ಕೋಟಿ ರೂಗಳು ವಾರ್ಷಿಕ ವೆಚ್ಚದ ಮೂಲಗಳು ಆಗಲಿವೆ. ವೆಚ್ಚದೊಂದಿಗೆ ಒಟ್ಟು 1 ಕೊಟಿ, 63 ಲಕ್ಷ ರೂಗಳ ವಾರ್ಷಿಕ ಉಳಿತಾಯ ಆಗಲಿದೆ ಎಂದು ಬಜೆಟ್ ಮಂಡಿಸಿದರು.

ಆರಂಬಿಕ ನಗದು ಶುಲ್ಕಗಳು 5.27 ಕೋಟಿ ರೂಗಳಿದ್ದು ನಗರದ ಪ್ರತಿಯೊಂದು ವಾರ್ಡಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು. ಸೂಕ್ತ ಚರಂಡಿಗಳನ್ನು ನಿರ್ಮಾಣ ಮಾಡಿ ಕೊಳಚೆ ನೀರು ಸಂಗ್ರಹವಾಗದಂತೆ ಘನತ್ಯಾಜ ವಸ್ತುಗಳನ್ನು ವಿಲೆವಾರಿಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಹೆಚ್ಚಿನ ಕಾಳಜಿಯಿಗಳಿಂದ ಅನುಧಾನ ಮೀಸಲಿರಿಸಲಾಗಿದೆ. ಇನ್ನೂ ನಗರದ ಅನೇಕ ಬಡಾವಣೆಗಳಲ್ಲಿ ರಸ್ತೆಗಳಿಲ್ಲ ಪ್ರತಿ ಗಲ್ಲಿಗಳಲ್ಲಿ ಸಿಸಿ ರಸ್ತೆಗಳನ್ನು ಮಾಡುವದರ ಮುಖಾಂತರ ನಗರ ಅಭಿವೃದ್ದಿಗೆ ಈ ಬಜೆಟ್ ಅರ್ಥಿಕವಾಗಿ ಸದೃಡಗೊಳಿಸಲಾಗಿದೆ. ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದು. ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆಧ್ಯತೆ ನೀಡಿ ಮುಂಬರುವ ದಿನಗಳಲ್ಲಿ ನಗರದ ಜನತೆಗೆ ಕುಡಿಯುವ ನೀರು ನಿರ್ವಹಣೆಗಾಗಿ ಹೆಚ್ಚು ಅನುಧಾನ ಕಲ್ಪಿಸಿಕೊಡಲಾಗಿದೆ ಎಂದು ಪೌರಾಯುಕ್ತರಾದ ರಮೇಶ ಪಟ್ಟೇದಾರ ತಿಳಿಸಿದರು.

ಬಜೆಟ್ ಮಂಡನೆ ಸಭೆಯಲ್ಲಿ ನಗರಸಭೆ ಅಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ಹಲವಾರು ಜನ ಸದಸ್ಯರು ಹಾಜರಿದ್ದರು. ನಗರಸಭೆ ಎಇಇ ಶರಣು ಪೂಜಾರಿಯವರು ನಗರಸಭೆ ವಾರ್ಷಿಕ ಬಜೆಟ್ ಮಂಡನೆ ವಿಸ್ತಾರತೆಗಳ ಕುರಿತು ವಿವರ ನೀಡಿದರು. ನಗರಸÀಭೆ ಇಂಜಿಯರ್‍ಗಳು ವಿವಿಧ ಸೆಕ್ಷನ್ ಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.