ಶಹಾಪುರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಅಧ್ಯಕ್ಷರಾಗಿ ಶಹನಾಜಬೇಗಂ, ಉಪಾಧ್ಯಕ್ಷರಾಗಿ ಭೀಮಬಾಯಿ ಆಯ್ಕೆ

ಶಹಾಪುರ:ನ.1:ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ, ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿಗೆ, ನ್ಯಾಯಾಲಯ ಹಸಿರು ನಿಸಾನೆ ತೊರಿರುವ ಹಿನ್ನಲೆಯಲ್ಲಿ, ಸರ್ಕಾರ ನಿಗಿದಿತ ಮೀಸಲಾತಿ ಅನ್ವಯ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ನೆಡೆಯಿತು. ಶಹಾಪುರ ನಗರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಎಸ್,ಟಿ, ಗೆ ಮೀಸಲಾಗಿತ್ತು.ಕಾಂಗ್ರೆಸ್, 16 ಸದಸ್ಯರು, ಬಿಜೆಪಿ 12 ಸದಸ್ಯರ, ಮತ್ತು ಎಸ್,ಡಿ,ಪಿಐ, 2 ಜನ ಸದಸ್ಯರು, ಮತ್ತು ಪಕ್ಷೇತರ ಒಬ್ಬರು ಸೇರಿ ಒಟ್ಟು 31 ಜನರ ಸಂಖ್ಯಾ ಬಲ ಹೊಂದಿದೆ. ಈ ಶಹಾಪುರ ನಗರಸಭೆಗೆ ಶನಿವಾರ ನೂತನ ಅಧ್ಯಕ್ಷರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆಯಿತು. ಯಾದಗಿರಿ ಸಾಹಾಯಕ ಆಯುಕ್ತರಾದ. ಶಂಕರಗೌಡ ಸೊಮನಾಳರವರು ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದರು. ನಗರದ ವಾರ್ಡ ನಂ.23 ರ ಸದಸ್ಯರಾದ, ಶ್ರೀಮತಿ ಶಹನಾಜಬೇಗಂ, ಮಹಮ್ಮದ ಮುಸ್ತಾಫ ದರ್ಬಾನ, ಅಧ್ಯಕ್ಷ ಸ್ಥಾನಕ್ಕೆ ಓರ್ವರೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್,ಟಿ, ಸದಸ್ಯರು ಓರ್ವ ಮಹಿಳೆ ಇರುವ ಹಿನ್ನಲೆಯಲ್ಲಿ,ಭೀಮಾಬಾಯಿ ಗಂ ದೇವಿಂದ್ರಪ್ಪನವರು ನಾಮಪತ್ರ ಸಲ್ಲಿಸಿದ್ದರು, ಇರ್ವರ ನಾಮಪತ್ರಗಳು ಕ್ರಮ ಬದ್ದವಾಗಿದ್ದರಿಂದ, ಪ್ರತಿಸ್ಪರ್ಧಿಗಳಿಲ್ಲದ ಕಾರಣ ಅಧ್ಯಕ್ಷರಾಗಿ, ಶಹನಾಜಬೇಗಂ, ಮತ್ತು ಉಪಾಧ್ಯಕ್ಷರಾಗಿ, ಭೀಮಾಬಾಯಿಯವರು ಅವಿರೋಧ ಆಯ್ಕೆಯಾದರು. 16 ಸಂಖ್ಯಾ ಬಲ ಹೊಂದಿದ ಕಾಂಗ್ರೆಸ್, ಗೆ 2 ಜನ ಎಸ್,ಡಿ,ಪಿ,ಐ, ಒಬ್ಬರು ಪಕ್ಷೇತರರು, ಸದಸ್ಯರು ಮತ್ತು ಶಾಸಕರು, ಬೆಂಬಲ ವ್ಯಕ್ತಪಡಿಸಿದ್ದರಿಂದ, ಒಟ್ಟು ಬೆಂಬಲಿತರ ಸಂಖ್ಯೆ 20 ಕ್ಕೇರಿತ್ತು. ಅಧಿಕ ಸಂಖ್ಯಾಬಲ ಹೊಂದಿದ, ಕಾಂಗ್ರೆಸ್, ನಗರಸಭೆ ಆಡಳಿತ ತನ್ನ ತೆಕ್ಕೆಗೆ ಸೆಳೆಯುದರಲ್ಲಿ ಸಫಲವಾಯಿತು. ಕೊನೆಯಲ್ಲಿ ಸಾಹಾಯಕ ಆಯುಕ್ತರು, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಘೋಷಣೆಯನ್ನು ಸಾದರಪಡಿಸಿದರು. ಈ ಸಭೆಯಲ್ಲಿ ಶಾಸಕರಾದ, ಶರಣಬಸ್ಸಪ್ಪಗೌಡ ದರ್ಶನಾಪುರ, ಸಾಹಾಯಕ ಚುನಾವಣೆ ಅಧಿಕಾರಿಗಳು, ತಹಿಸಿಲ್ದಾರರಾದ, ಜಗನಾಥರಡ್ಡಿ, ಪ್ರಭಾರ ನಗರಸಭೆ ಆಯುಕ್ತರಾದ, ಪ್ರಕಾಶ, ಮತ್ತು ನಗರಸಭೆ ಯೊಜನಾಧಿಕಾರಿ, ದೇವಿಂದ್ರ ಹೆಗಡೆ, ಶಹಾಪುರ ನಗರ ಠಾಣಾ ಪಿ,ಎಸ್,ಐ, ಚಂದ್ರಕಾಂತ ಮ್ಯಾಕಲೆ, ನಗರಸಭೆ ಸರ್ವ ಸದಸ್ಯರು, ಸಿಬ್ಬಂದಿಯವರು, ಹಾಜರಿದ್ದರು.

ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆಗೆ ಹರ್ಷ.

ಬಹುದಿನಗಳ ನೀರಿಕ್ಷೆಯಂತೆ ಶಹಾಪುರ ನಗರಸಭೆಗೆ ಅಧ್ಯಕ್ಷರಾಗಿ, ಶಹನಾಜಬೇಗಂ, ಮತ್ತು ಉಪಾಧ್ಯಕ್ಷರಾಗಿ ಭೀಮಬಾಯಿ, ಯವರನ್ನು ಅವರೋಧ ಆಯ್ಕೆಯಾಗಿರುವದಕ್ಕೆ, ಗಣ್ಯರಾದ ಸಣ್ಣ ನಿಂಗಣ್ಣ ನಾಯ್ಕೊಡಿ, ರಾಯಪ್ಪ ಸಾಲಿಮನಿ, ಯಲ್ಲಪ್ಪ ಮಾಸ್ತರ, ನಜೀರ ಪಟೇಲ್, ಸೈಯದ್, ಇಸಾಕ ಹುಸೇನಿ ಕಾಲಿದ, ಸಲಿಮಸಾಬ್ ದರ್ಬಾನ, ಬಸೀರ ಪಟೆಲ್ ಗೋಗಿ, ತಲತಚಾಂದ್, ನಯಿಮ್ ಅಫಘಾನ್, ಮಾಹಾದೇವಯ್ಯಸ್ವಾಮೀ. ಕರೀಮದರ್ಬಾನ, ಶಾಂತಪ್ಪ ಕಟ್ಟಿಮನಿ, ರವಿಂಚಂದ್ರ ಎದರಮನಿ, ಭೀಮರಾಯ ಕದರಾಪುರ, ಭೀಮರಾಯ ಮುಂಡಾಸ್, ಇಪ್ತೆಕಾರ ಕುರೇಶಿ, ಬಬಲೂ ಶಿಕಾಲಗರ್, ಶಕೀಲ ನಿಂಗದಗುಡಿ, ಎಸ್,ಎನ್, ನುಮಾನ್ ಆಜಮಲಿ, ಶಪೀಯುದ್ದಿನ ಸರ್ಮಸ್ತ, ಅಫ್ರಜ್ ದರ್ಬಾನ, ಗೌಸ್ ಪಟೇಲ್, ಸೇರಿದಂತೆ ನೂರಾರು ಜನ ಗಣ್ಯರು ಕಾರ್ಯಕರ್ತರು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಸಂಕಲ್ಪ ಪ್ರತಿಜ್ಞಾ ಸ್ವೀಕಾರ

ಸರ್ದಾರ ವಲ್ಲಬಾಯಿ ಪಟೇಲರವರ ಜನ್ಮ ದಿನಾಚರಣೆ ಅಂಗವಾಗಿ ಏಕತಾ ಸಂಕಲ್ಪ ಪ್ರತಿಜ್ಞೆವಧಿ ಸ್ವೀಕಾರ, ಮತ್ತು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂದೀಜೀಯವರ ಹುತಾತ್ಮ ದಿನಾಚರಣೆ ಅಂಗವಾಗಿ ಹಿಂಸಾಚಾರ ವಿರೋಧಿ ಶಾಂತಿ ಪ್ರತಿಜ್ಞಾವಿಧಿಯನ್ನು ಸರ್ವ ಚುನಾಯಿತ ಸದಸ್ಯರಿಗೆ ಸಾಹಾಯಕ ಆಯಕ್ತರಾದ ಶಂಕರಗೌಡ ಸೊಮನಾಳರವರು ಬೋದಿಸಿದರು, ಈ ಸಂಧರ್ಭದಲ್ಲಿ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ, ತಹಿಸಲ್ದಾರ ಜಗನಾಥರಡ್ಡಿ, ಪ್ರಬಾರಿ ಪೌರಾಯುಕ್ತರಾದ ಪ್ರಕಾಶ, ಯೋಜನಾಧಿಕಾರಿ ದೆಂವಿಂದ್ರ ಹೆಗಡೆ ಸೇರಿದಂತೆ ಸರ್ವ ಸದಸ್ಯರು ಬೋದನೆ ಸ್ವೀಕಾರಿಸಿದರು.