ಶಹಾಪುರ ನಗರದ ಜನತೆಯ ಕನಸು ನನಸು : ದರ್ಶನಾಪುರ

ಶಹಾಪುರ :ಸೆ.8: 70 ಕೋಟಿ ವೆಚ್ಚದ ಕಾಮಗಾರಿ ಬೇಟಿ, ಪರಿಶೀಲನೆ. ಡಿಸೆಂಬರ್‍ನಲ್ಲಿ ನಗರಕ್ಕೆ ನೀರು ಪೂರೈಕೆ
ಶಹಾಪುರ
ಭೀಮಾ ಬ್ರಿಡ್ಜ್ ಕಂ ಬ್ಯಾರೆಜ್‍ನಿಂದ ಪೈಪ್‍ಲೈನ್ ಮೂಲಕ ನಗರಕ್ಕೆ ಇನ್ನೆರಡು ತಿಂಗಳಲ್ಲಿ ನೀರು ಬರಲಿದೆ. ಕಾಮಗಾರಿಯು ವೇಗದಿಂದ ಸಾಗಿದ್ದು ಶಹಾಪುರ ನಗರ ಜನತೆಯ ಬಹುದಿನದ ಕನಸು ನನಸಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಹುರಸಗುಂಡಗಿ ಹತ್ತಿರದ ಭೀಮಾ ಬ್ರಿಡ್ಜ್ ಕಂ ಬ್ಯಾರೆಜ್‍ಗೆ ಬೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ನೀರಿನ ಸಂಗ್ರಹ ಮಟ್ಟ ಕಡಿಮೆ ಇರುವ ಕಾರಣ ಬೇಸಿಗೆಯಲ್ಲಿ ನಗರಕ್ಕೆ ನೀರು ಪೂರೈಕೆ ಬಿಸಿ ತುಪ್ಪವಾಗಿತ್ತು. ಜನತೆಯ ಆಶಯವನ್ನರಿತು 70 ಕೋಟಿ ವೆಚ್ಚದಲ್ಲಿ ಭೀಮಾ ಬ್ಯಾರೆಜ್‍ನಿಂದ ಇಂಗಳಗಿ, ಮಡ್ನಾಳ ಗ್ರಾಮ ಸೇರಿ ಶಹಾಪುರ ನಗರಕ್ಕೆ ಶುದ್ದನೀರು ಸಿಗಲಿದೆ. 22.7 ಕೀ.ಮೀ ಪೈಪ್‍ಲೈನ್ ಕಾಮಗಾರಿ ಇದ್ದು ಈಗಾಗಲೆ 19 ಕೀ.ಮೀ ಪೂರ್ಣಗೊಂಡು 2.7 ಕಿ.ಮೀ ಚಾಲನೆಯಲ್ಲಿದೆ. ಜಾಕ್ವೆಲ್ ಮತ್ತು ಪುಟ್ವೆಲ್ ಕಾಮಗಾರಿಯು ಸದ್ಯದಲ್ಲಿ ಪೂರ್ಣಗೊಂಡರೆ ನಗರಕ್ಕೆ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದರು.
6 ಕೋಟಿ ವೆಚ್ಚದಲ್ಲಿ ನೀರಿನ ಶುದ್ದಿಕರಣ ಘಟಕ ಪ್ರಾರಂಭಗೊಂಡಿದ್ದು ಭೀಮಾ ನದಿಯಿಂದ ಬಂದ ಹಿನ್ನಿರನ್ನು ಶುದ್ದಿಕರಿಸಿ ನಗರದ ಜನತೆಗೆ ಪೂರೈಸಲಾಗುವುದು. ಈ ಕಾಮಗಾರಿಯು ಪೂರ್ಣಗೊಂಡರೆ 2035 ರವೆಗೆ ಶಹಾಪುರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುವುದಿಲ್ಲ ಎಂದು ನುಡಿದರು.
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಚಂದ್ರಶೇಖರ ಆರಬೋಳ, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ ಸುರಪೂರಕರ್, ಸುರೆಂದ್ರ ಪಾಟೀಲ್ ಮಡ್ನಾಳ, ಬಸವರಾಜ ಹೇರುಂಡಿ, ಹಣಮಂತ್ರಾಯಗೌಡ ರಾಕಮಗೇರಿ, ಬಸವರಾಜ ಚನ್ನುರ, ರವಿ ಎದುರುಮನೆ, ಅರವಿಂದ್ ಉಪ್ಪಿನ್ ಶಾಂತು ಪಾಟೀಲ್ ಸೇರಿದಂತೆ ಇತರರು ಇದ್ದರು.

ರಾಜ್ಯಾದ್ಯಂತ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬಿಜೆಪಿ ನಾಯಕರು ಮಾತ್ರ ಸಾಧನ ಸಮಾವೇಶದಲ್ಲಿ ನಿರತರಾಗಿದ್ದಾರೆ. ಇತ್ತ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ರೈತರು ಸಂಕಷ್ಡಕ್ಕೆ ಸಿಲುಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ರೈತರ ಕಷ್ಟ ಕೇಳಲು ಯಾವ ಮಂತ್ರಿಯು ಬರುತ್ತಿಲ್ಲ ಸಂಕಷ್ಟ ಆಲಿಸುತ್ತಿಲ್ಲ.
ಶರಣಬಸಪ್ಪಗೌಡ ದರ್ಶನಾಪುರ. ಶಾಸಕರು ಶಹಾಪುರ