ಶಹಾಪುರ- ಧಾರವಾಡ ನೂತನ ಬಸ್ ಪ್ರಾರಂಭ

ಶಹಾಪುರ : ಅ.2:ಶಹಾಪುರ ದಿಂದ ಹುಬ್ಬಳ್ಳಿ /ದಾರವಾಡ ವಾಯಾ: ಗೋಗಿ-ಕೆಂಭಾವಿ- ಹುಣಸಗಿ- ತಾಳಿಕೋಟಿ – ಮುದ್ದೇಬಿಹಾಳ-ಬಾಗಲಕೋಟ -ನರಗುಂದ ಮಾರ್ಗವಾಗಿ ನೂತನ ಬಸ್ ಪ್ರಾರಂಭಿಸಾಲಾಗುತ್ತಿದ್ದು. ಶಹಾಪುರ ದಿಂದ ರಾತ್ರಿ 20:00 ಬಿಟ್ಟು ಧಾರವಾಡ ಬೆಳಿಗ್ಗೆ 6 ಗಂಟೆ ಗೆ ತಲುಪುತ್ತದೆ,ಅದರಂತೆ ದಾರವಾಡ ದಿಂದ ಸಾಯಂಕಾಲ 18:45 ಕ್ಕೆ ಮರಳಿ ಬಿಟ್ಟು ಅದೇ ಮಾರ್ಗವಾಗಿ ಶಹಪೂರಕ್ಕೆ ಬೆಳಗ್ಗೆ 5:00 ಗಂಟೆಗೆ ತಲುಪುವುದು ಎಂದು ವಿಭಾಗಿಯ ನಿಯಂತ್ರನಾಧಿಕಾರಿಗಳು ಯಾದಗಿರಿ ಹಾಗೂ ವಿಭಾಗಿಯ ಸಂಚಾರಾಧಿಕಾರಿಗಳು ಯಾದಗಿರಿ ಹಾಗೂ ವಿಭಾಗಿಯ ತಾಂತ್ರಿಕ ಶಿಲ್ಪಿಗಳ ಆದೇಶದಂತೆ ಘಟಕ ವ್ಯೆವಸ್ಥಾಪಕರು ಶಹಾಪುರ ರವರು ತಿಳಿಸಿರುತ್ತಾರೆ,ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಈ ಸಂದರ್ಭದಲ್ಲಿ ಘಟಕ ವ್ಯೆವಸ್ಥಾಪಕರಾದ ಅಕ್ಬರ್ ಭಾಷಾ ಹೊಟಗಿ,ಚಾರ್ಜ್ ಮ್ಯಾನ್ ಮಲ್ಲಿಕಾರ್ಜುನ್,ಜೂನಿಯರ್ ಅಸಿಸ್ಟೆಂಟ್ ಪರಮಣ್ಣ,ನಿರ್ವಾಹಕ ಸಂಜೀವ ಬಿರಾದರ,ಚಾಲಕ ಶಾಂತಯ್ಯ,ಎಟಿಎಸ್ ಪಾಂಡುರಂಗ ಕುಲಕರ್ಣಿ,ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸಿತರಿದ್ದರು.