ಶಹಾಪುರ ತಾಲೂಕ ಮಹಿಳಾ ಬ್ಲಾಕ್ ಅಧ್ಯಕ್ಷರಾಗಿ ರೇಣುಕಾ ಚಟ್ರಕಿ ಆಯ್ಕೆ ಆದೇಶ ಪತ್ರ ನೀಡಿದ ದರ್ಶನಾಪುರ

ಶಹಾಪುರ :ನ.8: ಶಹಾಪುರ ತಾಲೂಕಿನ ಮಹಿಳಾ ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಚಟ್ರಕಿ ಅವರನ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಜುಳ ಗೂಳಿ ಅವರು ಹೇಳಿದರು ರೇಣುಕ ಚಟ್ರಕಿ ಅವರು ಶಹಾಪುರ ತಾಲೂಕುನಾದಂತ ಚಿರಪರಿಚಿತರಾಗಿದ್ದು ಪ್ರತಿ ಹಳ್ಳಿಗೆ ಹೋಗಿ ಮಹಿಳೆಯರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ಹೆಚ್ಚಿನ ಕೆಲಸವನ್ನು ಮಾಡುತ್ತಿದ್ದಾರೆ ಅದಕ್ಕೆ ಅವರನ್ನು ಇನ್ನೂ ಹೆಚ್ಚು ಹೆಚ್ಚು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ಮುಟ್ಟುಸುವ ಕೆಲಸವನ್ನು ರೇಣುಕಾ ಚಟ್ರಕಿ ಅವರು ಮಾಡುತ್ತಾರೆ ಎಂದು ಗುರುತಿಸಿ ಅವರಿಗೆ ಶಹಾಪುರ ತಾಲೂಕ ಮಹಿಳಾ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ. ಇದೇ ಸಂದರ್ಭದಲ್ಲಿ ಶಹಾಪುರ ತಾಲೂಕ ಶಾಸಕರಾದ ಶರಣಬಸಪ್ಪಗೌಡ ದರ್ಶನಪುರವರ ಕಾರ್ಯಾಲಯಕ್ಕೆ ಹೋಗಿ ಶಾಸಕರಿಂದ ಆದೇಶ ಪತ್ರವನ್ನು ನೀಡಲಾಯಿತು ಶಾಸಕರು ನೂತನ ಮಹಿಳಾ ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲೂಕ
ಅಧ್ಯಕ್ಷರಿಗೆ ಸನ್ಮಾನಿಸಿ ಆದೇಶ ಪತ್ರವನ್ನು ನೀಡಿದರು ಮುಂದುವರಿದ ಮಾತನಾಡಿ ಮುಂಬರುವ ಚುನಾವಣೆಗಳ ನಿಮಿತವಾಗಿ ಹೆಚ್ಚು ಹೆಚ್ಚು ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ತಿಳಿಪಡಿಸುತ್ತ ಜನರನ್ನು ಜಾಗೃತರನ್ನಾಗಿ ಮಾಡಬೇಕು ಮಹಿಳೆಯರನ್ನು ಕೂಡ ಕಾಂಗ್ರೆಸ್ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು .