ಶಹಾಪುರ ಕೊವಿಡ್ ಲಸಿಕೆ ಡ್ರೈರನ್ ಗೆ ಚಾಲನೆ

ಶಹಾಪುರ:ಜ.9:ಕೊರಾನ್ ವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಕೆ.ೂವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಸಜ್ಜಾಗಲು ಸರ್ಕಾರ ಸೂಚಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಧೆಶನದಂತೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ಕೆಂದ್ರಗಳ ನಿರ್ಮಾಣ ಕಾರ್ಯ ಮುಂದುವರೆದಿದೆ ಕೊವಿಡ್ ಲಸಿಕೆ ಡ್ರೈರನ್ ಪೂರ್ವ ಸಿದ್ದತಾ ಚಿಕಿತ್ಸಾ ಕಾರ್ಯ ಯೊಜನೆಗಳು ರೂಪಗೊಂಡಿವೆ. ಅದರಂತೆ ಯಾದಗಿರಿ ಜಿಲ್ಲಾಡಳಿತ ಆದೆಶದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಕ್ತ ಮಾರ್ಗಸೂಚಿಗಳ ಮೇರೆಗೆ ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಪೂರ್ವ ತಯ್ಯಾರಿಗಾಗಿ ಲಸಿಕೆ ಕೆಂದ್ರಗಳ ಮೂಲಸೌಲಭ್ಯಗಳ ಸಜ್ಜುಗೊಳಿಸಲಾಗಿದೆ. ಕೊವಿಡ್ ಲಸಿಕೆ ಡ್ರೈ ರನ್ ಗೆ ತಾಲೂಕು ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ. ಮಲ್ಲಪ್ಪ ಕಣಜಿಗಿಕರ್ ರವರು ಚಾಲನೆ ನೀಡಿದರು.

ಈ ಕುರಿತು ಮಾಹಿತಿ ನೀಡಿದ ಅವರು ಪ್ರಥಮ ಹಂತದಲ್ಲಿ ಆಸ್ಪತ್ರೆಯ ಸೇವಾ ನಿರತರಿಗೆ, ನಗರಸಭೆ ಸಿಬ್ಬಂದಿಯವರಿಗೆ, ಪೋಲಿಸ್ ಅಧಿಕಾರಿಗಳಿಗೆ, ಏರಡನೇ ಹಂತದಲ್ಲಿ ಮತ್ತು ಸರ್ಕಾರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಾಗೂ ಗ್ರಹರಕ್ಷಕರಿಗೆ, ಇತರೆ ಅಧಿಕಾರಿ ವರ್ಗದವರಿಗೆ ಹಾಗೂ ಮೂರನೆಯ ಹಂತದಲ್ಲಿ, ವಯೋ ವೃದ್ದರಿಗೆ, ಸೇರಿದಂತೆ ಸಾರ್ವತ್ರಿಕಗೊಳಿಸಲಾಗುತ್ತದೆ ಎಂದು ತಿಳಿಸಿದ ಅವರು ಈ ಪೂರ್ವ ತಯ್ಯಾರಿಯಲ್ಲಿ ಕೇವಲ 40 ಜನ ಸಿಬ್ಬಂದಿಯವರಿಗೆ ಸೀಮಿತಗೊಳಿಸಿದ್ದಾರೆ. ತದನಂತರದಲ್ಲಿ ವ್ಯಾಕ್ಷಿನ ಲಸಿಕೆ ನೀಡುವಾಗ ಈ ಮೂರು ಹಂತದ ಕಾರ್ಯ ಯೊಜನೆ ರೂಪಿಸಲಾಗುತ್ತಿದೆ ಎಂದು ಡಾ. ಕಣಜಿಗಿಕರ್ ತಿಳಿಸಿದರು.

ವ್ಯಾಕ್ಷಿನ ಪಡೆಯುವರಿಗಾಗಿ ನೊಂಧಣಿ ಕಾಂiÀರ್iಕ್ಕೆ ಪ್ರತೇಕ ಕೊಣೆ ವ್ಯವಸ್ಥೆ ಮಾಡಲಾಗಿದೆ ಆನ್‍ಲೈನ್ ನೊಂದಣಿ ಮುಗಿಸಿದ ಮೇಲೆ ಅವರಿಗೆ ಕೊಣೆ ನಂ.2ರಲ್ಲಿ ಲಸಿಕೆ ನೀಡಲಾಗುತ್ತದೆ. ಆನಂತರದಲ್ಲಿ ಕೊವಿಡ್ ಲಸಿಕೆ ಪಡೆದ ವ್ಯಕ್ತಿಯ ಆರೋಗ್ಯದಡೆಗೆ ಗಮನದಲ್ಲಿಟ್ಟುಕೊಂಡು ಅವರಿಗೆ ಅಂದಾಜು 2 ಗಂಟೆಗಳ ಕಾಲ ಕೊಣೆ ನ0.3ರಲ್ಲಿ ವಿಶ್ರಾಂತಿ ಪಡೆಯಲು ಸುವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಅವರ ಆರೋಗ್ಯದ ಪರೀಕ್ಷೆಗೆ ಆರೋಗ್ಯ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ ಎಂದು ಡಾ. ಕಣಜಿಗಿಕರ್ ಮಾಹಿತಿ ನೀಡಿದರು.

ಕೊವಿಡ್ ಲಸಿಕೆಗಾಗಿ ಬರುವ ಸಾಮಾನ್ಯ ಜನರಿಗೆ ಪ್ರವೇಶ ದ್ವಾರ ಮತ್ತು ನಿರ್ಗಮಿತ ದ್ವಾರವೆಂದು ಗುರುತಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಕೊವಿಡ್ ಲಸಿಕೆ ಕಾರ್ಯ ನೆಡೆಯುವ ಮುಂಚೆ ಮುಂಜಾಗ್ರತಾ ಮತ್ತು ಪೂರ್ವ ತಯ್ಯಾರಿಕೆಯಲ್ಲಿ ಈ ಸಕಲ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಾ. ಮಲ್ಲಪ್ಪನವರು ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಡಾ.ಪಧಮಾನಂದ ಘಾಯಕವಾಡ್, ಡಾ. ಸುರೇಖಾ ಪಾಟಿಲ, ಡಾ. ಶರನಗೌಡ ಪಾಟೀಲ, ಡಾ.ಶೈಲಾಜ, ಡಾ.ಚಂದ್ರಾಹಾಸ್, ಡಾ. ಜಗದೀಶ ಉಪ್ಪಿನ, ಡಾ. ಗಂಗಾಧರ ಚಟ್ರಕಿ, ಡಾ. ರಾಘವೆಂದ್ರ, ಡಾ.ಸರೋಜಾ ಪಾಟಿಲ, ಸೇರಿದಂತೆ ಹಲವಾರು ಜನ ವ್ಯಧ್ಯರು ಈ ಡ್ರೈನ ರನ್ ಕಾರ್ಯ ಯೊಜನೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.


ಆಸ್ಪತ್ರೆಯ ಅನಾರೋಗ್ಯದಿಂದ ಬಳಲುವ ತಿವೃ ತೊಂದರೆಯಲ್ಲಿರುವ ರೋಗಿಗಳಿಗೆ ಮೇಲ್ಮಡಿಯಲ್ಲಿ ಪ್ರತೇಕ ಐಸಿಯೂ ಕೊಣೆ ನಿರ್ಮಾಣ ಮಾಡಲಾಗಿದೆ. ಒಂಭತ್ತು ಬೆಡ್‍ಗಳ ಈ ಕೊಣೆಯಲ್ಲಿ ಸಕಲ ವ್ಯವಸ್ಥೆಗೊಳಿಸಲಾಗಿದೆ. ತುರ್ತು ಚಿಕಿತ್ಸೆ ಪಡೆಯವ ರೋಗಿಗಳಿಗೆ ಈ ಕೋಣೆ ಅವಶ್ಯಕವಾಗಿದೆ. ಸಾರ್ವತ್ರಿಕ ರೋಗಿಗಳು ಈ ವಿಶೇಷ ಐಸಿಯೂ ಕೋಣೆ ಸದುಪಯೋಗಪಡಿಸಕೊಳ್ಳಬೇಕು ಇದರಲ್ಲಿ ಉಸುರಾಟಕ್ಕಾಗಿ ವಿವಿಧ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ.

           ಡಾ. ಮಲ್ಲಪ್ಪ ಕಣಜಿಗಿಕರ್

     ಆಡಳಿತ ವ್ಯದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಶಹಾಪುರ