ಶಹಾಪುರ ಕಾಂಗ್ರೆಸ್ ಮಡಿಲಿಗೆ 20 ಗ್ರಾ.ಪಂ. ಆಡಳಿತ ಸಾಧ್ಯತೆ ?

ಶಹಾಪುರ:ಡಿ.31:ತಾಲುಕಿನ 24 ಗ್ರಾಮ ಪಂಚಾಯತಗಳ 531 ಸದಸ್ಯ ಸ್ಥಾನಗಳಿಗಾಗಿ ಚುನಾವಣೆ ಘೋಷಣೆಗೊಂಡಿತ್ತು ತಾಲೂಕಿನ ಗೋಗಿಪೇಠ ಗ್ರಾ.ಪಂ. ಮೀಸಲಾತಿ ಗೊಂದಲದಿಂದ ಚುನಾವಣೆ ಭಹಿಷ್ಕಾರ ಮಾಡಲಾದ ಹಿನ್ನಲೆಯಲ್ಲಿ ಮತದಾನ ನಡೆಯಲಿಲ್ಲ. ಶಿರವಾಳ ಗ್ರಾ.ಪಂ. 17 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಗೊಳಿಸಲಾಯಿತು. ಇನ್ನೂಳಿದ 22 ಗ್ರಾ.ಪಂ.ಗಳಿಗೆ ಡಿ.22 ರಂದು ಚುನಾವಣೆ ಜರುಗಿತು. ಒಟ್ಟು 495 ಸದಸ್ಯ ಸ್ಥಾನಗಳಿಗೆ ನಿಗದಿಯಾದ ಚುನಾವಣೆಯಲಿ.್ಲ ತಾಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ಒಟ್ಟು 87 ಜನ ಅವರೋಧ ಆಯ್ಕೆಗೊಂಡಿದ್ದಾರೆ. ಇನ್ನೂ ಬಾಕಿ ಉಳಿದ 389 ಸದಸ್ಯ ಸ್ಥಾನಗಳಿಗೆ 1008 ಕಣದಲ್ಲಿದ್ದರು. ಒಟ್ಟು ತಾಲುಕಿನ 160316 ಮತದಾರರಲ್ಲಿ 100501 ಜನ ಮತದಾರರು ಮತ ಚಲಾವಣೆ ಮಾಡಿದ್ದರು. ಶೇ.74.95 ರಷ್ಟು ಮತದಾನವಾಗಿತ್ತು. ಇಲ್ಲಿನ ಡಿಗ್ರಿ ಕಾಲೇಜಿನಲ್ಲಿ ನೆಡೆದ ಮತ ಏಣಿಕೆ ಕಾರ್ಯದಲ್ಲಿ 69 ಟೆಬಲ್ ಗಳಲ್ಲಿ 11 ಕೊಣೆಗಳಲ್ಲಿ ಮತ ಏಣಿಕೆ ನೆಡೆಯಿತು. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳೆ ಅತ್ಯಂತ ಅಧಿಕ ಸಂಖ್ಯೆಯಲ್ಲಿ ವಿಜೇತರಾಗಿದ್ದು. ಕಾಂಗ್ರೆಸ್ ಗ್ರಾ.ಪಂ. ಗದ್ದುಗೆಯತ್ತ ಸಾಗುತ್ತಿದೆ. ತಾಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ಕುಟುಂಬದಲ್ಲಿ ಪ್ರತಿಸ್ಪರ್ಧಿಗಳಿದ್ದು ಅತ್ಯಂತ ತುರುಸಿನ ಸ್ಪರ್ಧೆ ನಡೆದಿತ್ತು. ಶಹಾಪುರ ಮತಕ್ಷೇತ್ರದಲ್ಲಿ ಅತ್ಯಂತ ಪ್ರಭಾವ ಶಕ್ತಿಯಾಗಿ ಕಾಂಗ್ರೆಸ್ ಹೊರಹೊಮ್ಮಿದ್ದು. ಅನೇಕ ಗ್ರಾ.ಪಂ.ಗಳಲ್ಲಿ ಅಧಿಕಾರದ ಗದ್ದುಗೆಯತ್ತ ಮುನ್ನಡೆಯುತ್ತಿದೆ.

ಕೈಚೆಲ್ಲಿದ ಬಿಜೆಪಿ”

ಶಹಾಪುರ ತಾಲೂಕಿನಲ್ಲಿ ಅನೇಕ ಗ್ರಾ.ಪಂ.ಗಳಲ್ಲಿ ರಾಜ್ಯಾಡಳಿತ ಸರ್ಕಾರದ ಬಿಜೆಪಿ ಪ್ರಭಾವ ಬೀರಬಹುದೆನ್ನುವ ಲೆಕ್ಕಾಚಾರ ತೆಲೆಕೆಳೆಗಾಗಿದೆ. ಶಹಾಪುರ ಮತ ಕ್ಷೇತ್ರದಲ್ಲಿ ಅನೇಕ ಗ್ರಾ.ಪಂ.ಗಳಲ್ಲಿ ಅಲ್ಲಲ್ಲಿ ವಾರ್ಡಗಳಲ್ಲಿ ಬೆರಳಣಿಕೆಯಷ್ಟೆ ಸದಸ್ಯರು ವಿಜೆತರಾಗಿದ್ದು ತಾಲೂಕಿನಲ್ಲಿ ಶಿರವಾಳ ಗ್ರಾ.ಪಂ. ಏಕೈಕ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಯುವದು ಖಚಿತಗೊಂಡಿದೆ. ಕಾಂಗ್ರೆಸ್ 22 ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎನ್ನವದು ಖಚಿತವಾದಂತಾಗಿದೆ.ಕನ್ಯಾಕೊಳೂರ, ವನದುರ್ಗಾ, ನಾಗನಟಗಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಸದಸ್ಯರ ಅರ್ಧಪಾಲುದಾರರಾಗಿ ಹೊರಹೊಮ್ಮಿದ್ದು ಬಿಜೆಪಿ ಪ್ರಭಾವ ಉಳಿಸಿಕೊಳ್ಳಲು ಈ ಗ್ರಾ.ಪಂ.ಗಳಲ್ಲಿ ಅಸ್ಥಿತ್ವಕ್ಕೆ ಬೇರೂರಿದೆ.

ಜೆಡಿಎಸ್ ಮರಿಚಿಕೆ

ತಾಲೂಕಿನ್ಯಾದ್ಯಾಂತ ಅತ್ಯಂತ ಪ್ರತಿಸ್ಪರ್ಧಿಯಾಗಿ ತಿವೃ ಪೈಪೊಟಿ ಹೊಡ್ಡಿದ ಜೆಡಿಎಸ್ ಸಗರ, ಹಾರಣಗೇರಾ ಸೇರಿದಂತೆ ಇತರೆ ವಾರ್ಡಗಳಲ್ಲಿ ತನ್ನ ಖಾತೆಗಳನ್ನು ತೆರೆದುಕೊಂಡಿದೆ. ಯಾವು ಗ್ರಾ.ಪಂ.ಯಲ್ಲೂ ಅಧಿಕಾರದಿಂದ ದೂರ ಉಳಿದ ಜೆಡಿಎಸ್ ಮೂರನೇಯ ಸ್ಥಾನಕ್ಕೆದತ್ತ ಮುನ್ನಡೆದಿರುವದು. ಶೋಚನೀಯ ಸಂಗತಿಯಾಗಿದೆ. ಗೋಗಿ ಸಗರ ಗಳಲ್ಲಿ ಅತ್ಯಂತ ತುರುಸಿನ ಪೈಪೊಟಿ ಹೊಂದಿದ. ಜೆಡಿಎಸ್ ಗೋಗಿ (ಕೆ) ಗ್ರಾ.ಪಂ.ಯಲ್ಲಿ ಕಾಂಗ್ರೆಸ್ ತನ್ನ ಪ್ರಭಾವ ಉಳಿಸಿಕೊಂಡು. ಸಗರದಲ್ಲಿ ವಿರೋಧಪಕ್ಷದಲ್ಲಿ ಮಿಂಚಲ್ಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ತಾಲೂಕಿನಲ್ಲಿ ಹಲವಾರು ಹಳ್ಳಿ ಗ್ರಾಮಗಳಿಂದ ಬೆಳಗಿನಿಂದಲೆ ಬಂದು ಸೇರಿದ್ದ ಜನರು ಅಭ್ಯರ್ಥಿಗಳು. ತಮ್ಮ ಉಮೆದುವಾರನ್ನನ್ನು ಗೆಲ್ಲಿಸಲು ಅವಿರತ ಶ್ರಮ ವಹಿಸಿದ್ದರು. ಜಯಸಾಧಸಿಕೊಂಡು ಗುಲಾಲ ಹಾಕಿಕೊಂಡು ಕುಣಿದಾಡಿದರು. ಖಷಿಯಿಂದ ಕೇಕೇ ಹಾಕಿದ್ದರು. ದಾರಿಯೂದ್ದಕೂ ಮೇರವಣಿಗೆ ಮಾಡುತ್ತಾ ಸಾಗುತ್ತಿದ್ದ ದೃಶ್ಯ ವಿಶೇಷವಾಗಿತ್ತು. ವಿಜೇತರಿಗಾಗಿ ಬಣ್ಣ ಹಾಕಲು ಗುಲಾಲ ಅಂಗಡಿಗಳು ದ್ವಿಚಕ್ರವಾಹನಗಳಲ್ಲಿ ಚೀಲಗಟ್ಟೆಲೆ ತಂದು ಮಾರಾಟ ಮಾಡುತ್ತಿದ್ದು ಅಲ್ಲದೆ, ಆಹಾರಗಳನ್ನು ಹಾದಿಯೂದ್ದಕ್ಕೂ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು.

ಏಣಿಕೆ ಕೇಂದ್ರಕ್ಕೆ ಎಸ್ಪಿ, ಸಿಇಓ ಬೇಟಿ.

ಶಹಾಪುರ ಮತ ಏಣಿಕೆ ಕೇಂದ್ರಕ್ಕೆ ಯಾದಗಿರಿ ಎಸ್ಪಿ ಋಷಿಕೇಶ ಭಗವಾನ ಸೊನೆವಾಲೆ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾ ಶರ್ಮಾ, ಅಫರ ಜಿಲ್ಲಾಧಿಕಾರಿಗಳಾದ ಪ್ರಕಾಶ ರಜಪೂತ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಬೇಟಿ ನೀಡಿ ಪರೀಶೀಲನೆ ಮಾಡಿದರು. ತಹಸಿಲ್ದಾರ ಮಹಿಬೂಬಿ ಮಡಂನರವರು ಹಾಜರಿದ್ದರು. ಈ ಸಂಧರ್ಭದಲ್ಲಿ ಏಣಿಕೆ ಕೇಂದ್ರಕ್ಕೆ ಸೂಕ್ತ ಪೋಲಿಸ್ ಬಂದೋಬಸ್ತ ನೀಡಿದ್ದ, ಸಿಪಿಐ ಶ್ರೀನಿವಾಸ ಅಲ್ಲಾಪೂರೆ. ಮತ್ತು ಚೆನ್ನಯ್ಯ ಹೀರೆಮಠ. ಪಿ.ಎಸ್.ಐ ಚಂದ್ರಕಾಂತ ಮಕಾಲೆ, ಶುಶೀಲಕುಮಾರ, ಸೊಮಲಿಂಗ ಒಡೆಯರ್ ರವರು ಸಿಬ್ಬಂದಿಯವರು ಹಾಜರಿದ್ದರು.

ಏಣಿಕೆ ಕೇಂದ್ರಕ್ಕೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ

ಮತ ಏಣಿಕೆ ಕೇಂದ್ರದಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ತಾಲೂಕು ಆರೋಗ್ಯ ಇಲಾಖೆ ಆಶ್ರೆಯದಲ್ಲಿ ತುರ್ತು ಚಿಕಿತ್ಸೆಗೆಂದು ಆರೋಗ್ಯ ಅಧಿಕಾರಿಗಳಾದ ಸಂಗಣ್ಣ ನುಚ್ಚಿನ ವರು ಸೇರಿದಂತೆ ಸಕಲ ಚಿಕಿತ್ಸೆ ಮತ್ತು ಸೆನಟ್ರೀ ವ್ಯವಸ್ಥೆಗೊಳಿಸಲಾಗಿತ್ತು.

ಪತಿ ಪತ್ನಿ ಕೈಗೆ ಗ್ರಾಮಾಧಿಕಾರ

ಶಹಾಪುರ ತಾಲುಕಿನ ಉಕ್ಕಿನಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಹಾರಣಗೇರಾ ಗ್ರಾಮದಲ್ಲಿ ಜೆಡಿಎಸ್ ಖಾತೆ ತೆರೆದಿದ್ದು ಪತಿ ಪತ್ನಿ ಇಬ್ಬರು ಕೈಗೆ ಗ್ರಾಮಾಧಿಕಾರ ನೀಡಿದ್ದಾರೆ. ಶಾಂತಪ್ಪ ಸಾಲಿಮನಿಯವರು ವಾರ್ಡ ನಂ 5ರಲ್ಲಿ ಸ್ಪರ್ಧಿಸಿದ್ದರು ಅವರು ಹೆಚ್ಚು ಮತಗಳ ಅಂತರಿದಿಂದ ವಿಜೆತಗೊಂಡಿದ್ದಾರೆ. ಈಗಾಗಲೆ ಅವರ ಪತ್ನಿ ಗೌರಮ್ಮ ಶಾಂತಪ್ಪ ಸಾಲಿಮನಿಯವರು ಅವಿರೋಧಗೊಂಡಿದ್ದರು. ಹೀಗಾಗಿ ಪತಿ ಮತ್ತು ಪತ್ನಿ ಇಬ್ಬರು ಗ್ರಾ.ಪಂ. ಅಧಿಕಾರ ಪಡೆದಿದ್ದಾರೆ. ಚೆಟ್ನಳ್ಳಿ ಗ್ರಾಮದಲ್ಲೂ ಪತಿ ವಜಯಕುಮಾರ ಅವರ ಪತ್ನಿ ಇಬ್ಬರು ವಿಜೇತಗೊಂಡಿದ್ದಾರೆ. ಸತಿಪತಿಗಳ ಕೈಗೆ ಗ್ರಾಮಾಧಿಕಾರ ದೊರೆಯುತ್ತಿದ್ದು ಭಾಗ್ಯವೆ ಸರಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ ಏಣಿಕೆಗೆ ತಂದ ನಿಂಬೆಕಾಯಿ ವಶ

ಮತ ಏಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು ಮತಗಳ ಏಜೆಂಟರು ದೇವರು ಮೊರೆ ಹೊಗಿಕೊಂಡು ನಿಂಬೆಕಾಯಿಗಳನ್ನು ಮಗ್ಗಲಲಗಲಿ ಹೊತ್ತು ತಂದಿದ್ದಾರೆ ಪೋಲಿಸ್ ಅಧಿಕಾರಿಗಳು ತಪಾಷಣೆ ವೇಳೆಯಲ್ಲಿ ಅವುಗಳ ವಶಕ್ಕೆ ಪಡೆದುಕೊಳ್ಳಲಾಯಿತು.