ಶಹಾಪುರ ಕರವೇಯಿಂದ ಶ್ರದ್ದಾಂಜಲಿ

ಶಹಾಪುರ:ಅ.30:ಕನ್ನಡದ ಹೃದಯವಂತ, ಕರಣಾಮಹಿ, ನಚ್ಚಿನ ನಟರಾದ ಪುನೀತ್ ರಾಜಕುಮಾರ ನಿಧನವಾದ ನಿಮಿತ್ಯ ಪುನೀತ್ ರಾಜಕುಮಾರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಗರದ ಬಸವೇಶ್ವರ ವೃತ್ತದಲ್ಲಿ ಶಹಾಪುರ ಕರವೇ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಭೀಮಣ್ಣ ಶಖಾಪುರ ಮಾತನಾಡಿ, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ಕನ್ನಡಿಗರ ಧ್ವನಿಯಾದ ಪುನೀತ್ ರಾಜಕುಮಾರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಮತ್ತು ನಾಡಿಗೆ ತುಂಬಲಾರಷ್ಟು ನಷ್ಟವಾಗಿದೆ. ಅವರು ಅಭಿನಯಿಸಿರುವ ಹಲವಾರು ಚಿತ್ರಗಳು ಜನರ ಜೀವನ ಬದಲಾಯಿಸಿವೆ ಎಂದರು.

ಇದೆ ಸಮಯದಲ್ಲಿ ಕನ್ನಡಪರ ಸಂಘಟನೆಯ ಹಲವರು ಸೇರಿದಂತೆ ಪುನೀತ್ ಅಭಿಮಾನಿಗಳು ಉಪಸ್ಥಿತರಿದ್ದರು.