ಶಹಾಪುರ ಒಟ್ಟು ಶೇಕಡವಾರು 61.08 ರಷ್ಟು ಮತದಾನ

ಯಾದಗಿರಿ : ಮೇ 08: ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನವು ಜಿಲ್ಲೆಯಾದ್ಯಂತ ಮೇ 7 ರಂದು ಮಂಗಳವಾರ ಬಿರುಸಿನಿಂದ ನಡೆದಿದ್ದು ಶಹಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇಕಡವಾರು 61.08 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

 ಶಹಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 247138 ಮತದಾರರು ಇದ್ದಾರೆ. ಇದರಲ್ಲಿ ಒಟ್ಟು ಪುರುಷ ಮತದಾರರು 76990, ಮಹಿಳಾ ಮತದಾರರು 73954, ಇತರೆ 1 ಸೇರಿದಂತೆ ಒಟ್ಟು 150945 ಮತಗಳು ಚಲಾವಣೆಯಾಗಿದ್ದು, ಶೇಕಡವಾರು 61.08 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.