ಶಹಾಪುರ ಆದರ್ಶ ವಿದ್ಯಾಲಯದಲ್ಲಿ ವಿಜ್ಞಾನ ದಿನ ಆಚರಣೆ

ಕಲಬುರಗಿ,ಫೆ 29: ಕಲಬುರಗಿಯ ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿ ಪ್ರಾದೇಶಿಕ ಕೇಂದ್ರದ ವತಿಯಿಂದ ಶಹಾಪುರದ ಆದರ್ಶ ವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಅತಿಥಿಯಾಗಿ, ಕಾಳಗಿ ಸರ್ಕಾರಿ ಪಾಲಿಟೆಕ್ನಿಕ್‍ಆಯ್ಕೆ ಶ್ರೇಣಿ ಉಪನ್ಯಾಸಕ ಹಾಗೂ ಕೆ ಎಸ್‍ಸಿಎಸ್‍ಟಿ ಸಲಹಾ ಸಮಿತಿ ಸದಸ್ಯ ಡಾ. ಪ್ರಭುದೇವ್ ಎಂ.ಎಸ್ ಆಗಮಿಸಿ ಮಾತನಾಡಿ, ಸರ್ ಸಿವಿ ರಾಮನ್, ರಾಮನ್ ಪರಿಣಾಮ, ವಿಜ್ಞಾನದ ಮಹತ್ವ ,ವಿಜ್ಞಾನಿಗಳ ಬಗ್ಗೆ,ವಿಕಸಿತ ಭಾರತಕ್ಕಾಗಿಸ್ಥಳೀಯ ತಂತ್ರಜ್ಞಾನಗಳು ಹಾಗೂ ವೈಜ್ಞಾನಿಕ ಮನೋವೃತ್ತಿ ಬೆಳೆಸುವುದು ಏಕೆ?ಹೇಗೆ?ಪ್ರತಿಯೊಬ್ಬ ವಿದ್ಯಾರ್ಥಿಯು, ನಾಗರಿಕರು ಪ್ರಶ್ನೆ ಮಾಡುವ ಗುಣ ಮೈಗೂಡಿಸಿಕೊಂಡು ದಿನನಿತ್ಯದ ಜೀವನದಲ್ಲಿ ಯಾವುದೇ ವಿಷಯದಲ್ಲೂ, ಸನ್ನಿವೇಶಗಳಲ್ಲೂ ವೈಜ್ಞಾನಿಕ ವಿಧಾನಗಳಿಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ ಹಾಗೂ ಸೂಕ್ತ ನಿರ್ಧಾರ ತಳೆಯಬಹುದುಎಂದು ತಿಳಿಸಿ ವಿಸ್ತಾರವಾಗಿ ಉಪನ್ಯಾಸ ನೀಡಿದರು. ಕೆಎಸ್‍ಸಿಎಸ್‍ಟಿ ಯೋಜನಾ ಅಭಿಯಂತರಡಾ. ಸೈಯದ್ ಸಮೀರ್ ಅವರು ಈ ಸಂದರ್ಭದಲ್ಲಿ ವಿಜ್ಞಾನದ ಕುರಿತು ಮತ್ತು ಕೆಎಸ್‍ಸಿಎಸ್‍ಟಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಗುರುಗಳಾದ ಹೆಚ್ ಎಸ್ ಸೋಮಾಪುರ ಅಧ್ಯಕ್ಷೀಯ ಭಾಷಣ ಮಾಡಿದರು ಬ್ಲಾಕ್ ಸಂಪನ್ಮೂಲ ವ್ಯಕ್ತಿ ರಾಜಶೇಖರ್ ಪತ್ತಾರ್ (ಬಿಆರ್ ಪಿ)ವಿದ್ಯಾರ್ಥಿಗಳಿಗೆ, ಶಾಲೆಗೆ ಪ್ರೇರೇಪಣೆ ನೀಡಿ ಅತಿಥಿಗಳಾಗಿ ಆಗಮಿಸಿದ್ದರು.ಕೆಎಸ್‍ಸಿಎಸ್‍ಟಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನದ ಜೊತೆ ಪ್ರಮಾಣ ಪತ್ರ ಬಹುಮಾನಗಳನ್ನು ವಿತರಿಸಲಾಯಿತು, ರಮೇಶ ಗಾಮ್ನೆ ಸ್ವಾಗತಿಸಿದರು, ಶರಣು ಗೋಗಿ ವಂದನಾರ್ಪಣೆ ಮಾಡಿದರು.ಸಹಾಯಕ ಶಿಕ್ಷಕ, ರವಿಚಂದ್ರ ನಿರೂಪಣೆ ಮಾಡಿದರು. ಕೆಎಸ್‍ಸಿಎಸ್‍ಟಿತಾಂತ್ರಿಕ ಸಹಾಯಕಅನಿಲ್‍ಕುಮಾರ್ ಭಸ್ಮೆ, ಶಭನ್, ಎಟಿ, ಕರಣ, ಎಟಿ, ಓಮಕಾರೇಶ್ವರಿ, ಎಟಿ, ನಾಗಮಾ, ಎಟಿ, ಪ್ರದೀಪ್, ಎಟಿ, ಶಿಕ್ಷಕರೆಲ್ಲರೂ ಹಾಗೂ ವಿದ್ಯಾರ್ಥಿಗಳು ಹಾಜರಾಗಿದ್ದರು.ವೈಜ್ಞಾನಿಕ ಮನೋವೃತ್ತಿಮತ್ತು ವಿಜ್ಞಾನ ದಿನಾಚರಣೆ ಕುರಿತುಎಲ್ಲರೂಪ್ರತಿಜ್ಞಾವಿಧಿ ಸ್ವೀಕರಿಸಿದರು.