ಶಹಾಪುರ ಅಘೋಷಿತ ಲಾಕ್ ಮಾರ್ಗಸೂಚಿ ಉಲ್ಲಂಘಿಸಿದ ಅಂಗಡಿ ಮುಗ್ಗಟ್ಟು ಮತ್ತು ಸಾರ್ವಜನಿಕರ ಮೇಲೆ ಒಟ್ಟು 69 ಸಾವಿರ ದಂಡ

ಶಹಾಪುರ:ಎ.23:ಕೊರಾನ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಿವೃ ಆತಂಕದ ಉಂಟಾಗಿದ್ದು. ಜನರ ಆರೋಗ್ಯದ ದೃಷ್ಟಿಯಿಂದ 21 ಏಪ್ರೀಲ್ 2021 ರಂದು ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿಗಳ ನಡವಳಿಕೆ ಪ್ರಕಾರ ಮೇ 4ರವರೆಗೆ ವಿಧಿಸಲಾದ ಕಪ್ರ್ಯೂ ತಾಲೂಕು ಆಡಳಿತ, ನಗರಸಭೆ, ಪೋಲಿಸ್ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ ಮಾರುಕಟ್ಟೆಗಳ ಮತ್ತು ಅಂಗಡಿಮುಗ್ಗಟ್ಟುಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕಾಗಿ ಪ್ರದಕ್ಷಣೆ ಹಾಕಿದರು.

ಮಾರ್ಗಸೂಚಿ ಉಲ್ಲಂಘನೆ ಮಾಡಿದ ಅಂಗಡಿಗಳ ಮೇಲೆ 60 ಸಾವಿರ ಹಾಗೂ ಮಾಸ್ಕ ಧರಿಸಿದವರಿಗೆ 9 ಸಾವಿರ ರೂ ಗಳ ದಂಡ ವಸೂಲಿ ಮಾಡಿದ್ದಾರೆ.

ತಹಸಿಲ್ದಾರ ಜಗನಾಥರಡ್ಡಿ, ಪೌರಾಯುಕ್ತರಾದ ರಮೇಶ ಪಟ್ಟೆದಾರ. ಸಿ.ಪಿ.ಐ. ಚೆನ್ನಯ್ಯ ಹೀರೆಮಠ. ಪಿ.ಎಸ್.ಐ ಚಂದ್ರಕಾಂತ ಮಾಕಲೆಯವರು ನಗರ ಪ್ರದಕ್ಷಣೆಯಲ್ಲಿ ಪಾಲ್ಗೊಂಡು ಕೊರಾನ್ ನಿಯಂತ್ರಣಕ್ಕಾಗಿ ಜನ ಸಾಮಾನ್ಯರಿಗೆ ಮನವರಿಕೆ ಮಾಡಿ ಅನಾವಶ್ಯಕವಾಗಿ ರಸ್ತೆಯಲ್ಲಿ ಸುತ್ತಾಡುವದನ್ನು ನಿಷೇಧಸಿಲಾಗುತ್ತದೆ. ಸರ್ಕಾರದ ನೀತಿ ನೀಯಮಗಳನ್ನು ಪಾಲನೆ ಮಾಡಬೇಕು ಎಂದು ಅಧಿಕಾರಿಗಳು ಸಾರ್ವತ್ರಿಕವಾಗಿ ತಿಳಿಸಿದರು.

ಮಾರುಕಟ್ಟೆ ಯಥಾಸ್ಥಿತಿ

ನಗರದ ತರಕಾರಿ ಮಾರುಕಟ್ಟೆ ವ್ಯಾಪಾರ ವೈವಾಟು ಯಥಾಸ್ಥಿತಿ ಮುಂದುವರೆದಿದ್ದು. ಗ್ರಾಹಕರು ಎಂದಿನಿಂತೆ ತರಕಾರಿ ಮತ್ತು ಇತರೆ ಸಾಮಾನುಗಳ ಖರೀದಿಯಲ್ಲಿ ತಲ್ಲೀನರಾಗಿದ್ದರು. ತರಕಾರಿ ವ್ಯಾಪರಸ್ಥರಿಗೂ ಕೊವಿಡ್ ಜಾಗ್ರತಿ ಮೂಡಿಸಿದ್ದಲ್ಲಿ ಅನೂಕೂಲವಾಗುತ್ತದೆ ಎಂದು ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ಸರ್ವರು ಕೊವಿಡ್ ಪರೀಕ್ಷೆಗೊಳ್ಳಪಡಬೇಕು ಮತ್ತು ವ್ಯಾಕ್ಷಿನ ಹಾಕಿಸಕೊಳ್ಳಬೇಕು ಎಂದು ಪೌರಾಯುಕ್ತರಾದ ರಮೇಶ ಪಟ್ಟೆದಾರ ತಿಳಿಸಿದರು.