ಶಹಾಪುರದಲ್ಲಿ ಸಂಭ್ರಮದ ಬಕ್ರೀದ್

ಶಹಾಪುರ:ಇಸ್ಲಾಂ ಬಾಂದವರ ಭಾವೈಕ್ಯತೆಯ ಭಕ್ರೀದ್ ಹಬ್ಬವನ್ನು, ಶಹಾಪುರ ನಗರದ್ಯಾಂತ, ಸಡಗರ ಸಂಭ್ರಮಗಳಿಂದ ಆಚರಣೆ ಮಾಡಲಾಯಿತು, ಮಸೀದಿಗಳಲ್ಲಿ ಸರ್ಕಾರದ ನೀತಿ ನೀಯಮಗಳ ಅನ್ವಯ ಸಾಮಾಜಿಕ ಅಂತರ ಕಾಯ್ದಿರಿಸಿಕೊಂಡು ಪ್ರಾರ್ಥನೆ ಸಲ್ಲಿಸಿದರು,ಸಾಲಾಗಿ ನಿಂತು ಮಸೀದಿಗಳಲ್ಲಿ ನಮಾಜ್ ನೇರವೇರಿಸಿದರು, ನಗರದಲ್ಲಿರುವ ನಾನಾ ಮಸೀದಿಗಳಲ್ಲಿ, ಹಿರಿಯ ಮುಖಂಡರು, ಯುವ ಮುಖಂಡರು, ಸಂಘ ಸಂಸ್ಥೆಗಳ, ಪ್ರತಿನಿಧಿಗಳು,ಮಕ್ಕಳು ಯುವಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು,ನಗರಸಭೆ ಪೌರಾಯುಕ್ತರಾದ ರಮೇಶ ಗುತ್ತೆದರವರು ,ಆಯಾ ಮಸೀದಿಗಳಲ್ಲಿ ಪ್ರಾರ್ಥನೆಗೆ ಅಧಿಕಾರಿಗಳನ್ನು ಜಾಗ್ರತದಾರನ್ನಾಗಿ ನೇಮಿಸಿದ್ದರು. ಆಯಾ ನಗರಸಭೆ ಅಧಿಕಾರಿಗಳು ಸಂಭಂಧಿಸಿದ ಮಸೀದಿಗಳಲ್ಲಿ ಸ್ವಚ್ಚತೆ, ಕೊರಾನ್ ನಿತಿಯನ್ನು ಅನುಸರಿಸುವಂತೆ ಮಾಸ್ಕ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವರಿಕೆ ಮಾಡಿದರು, ನಗರ ಠಾಣಾ ಪಿ,ಐ, ಹನುಮರಡ್ಡೆಪ್ಪನವರು ನೇತೃತ್ವದಲ್ಲಿ ಪಿ,ಎಸ್,ಐ, ಚಂದ್ರಕಾಂತ ಮೆಕಾಲ್ ,ಸಿದ್ದೆಶ್ವರರವರು ಸೂಕ್ತ ಪೋಲಿಸ್ ಬಂದೋಬಸ್ತ ವ್ಯವಸ್ಥೆಯಲ್ಲಿ ಭಕ್ರೀದ್ ಹಬ್ಬದ ಆಚರಣೆಗೆ ಅನೂಕೂಲ ಮಾಡಿಕೊಡಲಾಯಿತು,