ಶಹಾಪುರದಲ್ಲಿ ಅದ್ದೂರಿ ಕೃಷ್ಣ ಜಯಂತಿ

ಶಹಾಪುರ :ಸೆ.7: ಶ್ರೀ ಕೃಷ್ಣ ಕೇವಲ ಅವತಾರವಲ್ಲ ನಮ್ಮ ಪರಂಪರೆಯ ಪ್ರತ್ಯೇಕ ಎಲ್ಲಾ ಮೌಲ್ಯಗಳ ಸಾರರೂಪ ಆತನಲ್ಲಿ ದ್ವಂದ್ವ ಹತಾಶೇ ನಿಷ್ಕೀಯತೆಗಳಿಗೆ ಜಾಗವಿಲ್ಲಾ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.ನಗರದ ನಗರಸಭೆ ಆವರಣದಲ್ಲಿ ತಾಲ್ಲೂಕ ಆಡಳಿತ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು ತನ್ನ ಕಾಲಕ್ಕೆ ಶೌರ್ಯ ಸಾಹಸ ಬುದ್ಧಿಮತ್ತೆ ನಾಯಕತ್ವ ಸಂಯಮ ಇತ್ಯಾದಿ ಗುಣಗಳಲ್ಲಿ ಯುವರಾಜ ಬಲರಾಮನಿಗಿಂತಲೂ ಕೃಷ್ಣ ಜನಪ್ರಿಯನಾಗಿದ್ದ ವ್ಯಕ್ತಿತ್ವದಲ್ಲಂತೂ ಸಾರ್ವಕಾಲಿಕ ಆಕರ್ಷಣೆ ಕೃಷ್ಣನದ್ದು ಎಂದು ಕೃಷ್ಣನ ಕುರಿತು ಬಣ್ಣಿಸಿದರು. ಸಂಶೋಧಕರು ಹಾಗೂ ಸಹಾಯಕ ಖಜಾನೆ ಅಧಿಕಾರಿಗಳಾದ ಶ್ರೀ ಡಾ ಎಮ್.ಎಸ್.ಶಿರವಾಳ ಮಾತನಾಡಿ ಶ್ರೀ ರಾಮ ಮತ್ತು ಶ್ರೀ ಕೃಷ್ಣ ಭಾರತಿಯ ಹಿಂದು ಸಂಸ್ಕøತಿಯ ಎರಡು ಕಣ್ಣುಗಳಿದ್ದಂತೆ ಶ್ರೀರಾಮ ಆದರ್ಶಮಯ ಬದುಕುನ್ನು ನಡೆಸಿದ ಶ್ರೀ ಕೃಷ್ಣ ಉಂಡು ಉಪವಾಸಿ ಬಳಸಿಯೂ ಬ್ರಹ್ಮಚಾರಿ ಮಾನವ ಸಂಸ್ಕೃತಿಯ ಎಲ್ಲಾ ಪಾತ್ರಗಳಾಗಿ ಬಾಳಿದ ಮತ್ತು ಆದರ್ಶ ಜೀವನದ ಬಗ್ಗೆ ಬದುಕು ಕಲೆಯ ಬಗ್ಗೆ ಬೋಧಿಸಿದ ಕೃಷ್ಣನನ್ನು ಆತನ ಪ್ರಭಾವ ಬರೀ ಧಾರ್ಮಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯ ಕಾಲ ಪ್ರಪಂಚವನ್ನು ದಾರ್ಶನಿಕತೆಯನ್ನು ಶ್ರೀಮಂತ ಗೊಳಿಸಿದೆ ಎಂದು ಕೃಷ್ಣನ ಕುರಿತು ಉಪನ್ಯಾಸ ನೀಡಿದರು ಪುರುಷಯದುಕುಲನಂದ ಶ್ರೀ ಕೃಷ್ಣಾ ಪರಮಾತ್ಮನ ಜಯಂತಿಯ ಅಂಗವಾಗಿ ಶಹಾಪೂರದಲ್ಲಿ ತಾಲೂಕ ಆಡಳಿತ ವತಿಯಿಂದ ನಡೆದ ಜಯಂತಿಯನ್ನು ಶ್ರೀ ಕೃಷ್ಣಾ ಪರಮಾತ್ಮನ ಭಾವಚಿತ್ರಕ್ಕೆ ಪೂಜೆಸಲ್ಲಿಸಿದ ಕನ್ನಡದ ಕಟ್ಟಾಳು ನಾಡುನುಡಿಯ ಹೋರಾಟಗಾರ ಶ್ರೀ ಶರಣು ಗದ್ದುಗೆಯವರು ಮತ್ತು ಮಾಜಿ ಜಿಲ್ಲಾ ಪಂಚಾಯತ ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀ ಹನುಮೇಗೌಡ ಮರಕಲ್ಲ್ ರವರವರು ನಮ್ಮೊಂದಿಗೆ ಜನಪದ ಮೇರು ವಾದ್ಯವಾದ ಡೊಳ್ಳುನ್ನು ಬಾರಿಸಿಸುವ ಮೂಲಕ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು,ನಂತರ ನಗರಸಭೆಯ ಆವರಣದಲ್ಲಿ ತಾಲೂಕ ದಂಡಾಧಿಕಾರಿಗಳು ಕೃಷ್ಣನ ಭಾವಚಿತ್ರಕ್ಕೆ ಪುಸ್ಪಾರ್ಚೆಯ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಜಯಂತಿಯನ್ನು ಯಶಸ್ವಿಗೊಳಿಸಿದ ತಾಲೂಕ ಆಡಳಿತಕ್ಕೂ ಮತ್ತು ಶ್ರೀ ಕೃಷ್ಣಾ ಅನುಯಾಯಿ ಅಭಿಮಾನಿಗಳಿಗೆಲ್ಲರಿಗೂ ಅನಂತ ಅನಂತ ಧನ್ಯವಾದಗಳು.
ಈ ಸಂದರ್ಭದಲ್ಲಿ – ಶ್ರೀ ಸಾಯಬಣ್ಣ ಪುರ್ಲೆ ,ಶ್ರೀ ಪ್ರದೀಪ್ ಪುರ್ಲೆ,ಶ್ರೀ ಲಕ್ಷ್ಮಣ ಯಾದವ ,ಹಾಗೂ ತಾಲೂಕ ಯಾದವ ಸಮಾಜ ಅಪಾರ ಪ್ರಮಾಣದ ಜನರು ಸೇರಿದರು