ಶಹಾಪುರಕ್ಕೆ ಸಹಾಯಕ ಆಯುಕ್ತರ ಭೇಟಿ : ದಿನವಿಡಿ ಠಿಕಾಣಿ

ಶಹಾಪುರ ಮೇ 1: ನಿನ್ನೆ ಸಂಜೆವಾಣಿಯಲ್ಲಿ ಪ್ರಕಟವಾದ ವರದಿ ಬೆನ್ನಲ್ಲೇ ಧಿಡೀರ್ ಶಹಾಪುರ ನಗರಕ್ಕೆ ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ , ಜಗನ್ನಾಥ್ ರೆಡ್ಡಿ, ಪಿ.ಐ ಚನ್ನಯ್ಯ ಹಿರೇಮಠ್, ಪೌರಾಯುಕ್ತ ರಮೇಶ್ ಪಟ್ಟೆದಾರ, ಪಿ.ಎಸ್. ಐ ಶಾಮ್ ಸುಂದರ್ ನಾಯ್ಕ್, ಪಿ.ಎಸ್.ಐ. ಚಂದ್ರಕಾಂತ್ ಮಕಾಲೇ ಭೇಟಿ ನೀಡಿದ್ದಾರೆ.
ಇದೆ ಸಮಯದಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮಾತನಾಡಿ ದಿನ ಪೂರ್ತಿ ಶಹಾಪುರ ನಗರದಲ್ಲೇ ಇರುವೆ ಯಾವುದೇ ಕದ್ದು ಮುಚ್ಚಿ ವ್ಯಾಪಾರ ಕಂಡುಬಂದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಪೊಲೀಸ್ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.