ಶಹಬಜಾರ ಜಗದಂಬಾ ಮಂದಿರದಲ್ಲಿನವರಾತ್ರಿ : ದೀಪ ಬೆಳಗಿಸಿದ ಲಿಂಗರಾಜಪ್ಪ ಅಪ್ಪ

ಕಲಬುರಗಿ ಅ 18 : ನಗರದ ಶಹಾಬಜಾರ್ ಜಗದಂಬಾ ಮಂದಿರದಲ್ಲಿ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜವತಿಯಿಂದ ಆಯೋಜಿಸಿದ ನವರಾತ್ರಿ ಉತ್ಸವದ ಮೂರನೆಯ ದಿನದ ಅಂಗವಾಗಿ ಮಂಗಳವಾರ ಶ್ರೀತ್ರಿದೇವಿ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.
ಸಂಜೆ 7 ಗಂಟೆಗೆ ಲಿಂಗರಾಜಪ್ಪ ಅಪ್ಪ ಅವರಿಂದ ದೀಪ ಬೆಳಗಿಸುವ ಕಾರ್ಯಕ್ರಮ ಜರುಗಿತು.ನಂತರ ಮಕ್ಕಳಿಂದ ದಾಂಡಿಯಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಶ್ರೀರಾಮ ಪವಾರ,ಉಪಾಧ್ಯಕ್ಷ ಡಾ.ಸುಭಾಷ ಕಮಲಾಪುರೆ, ಕಾರ್ಯದರ್ಶಿ ವಿಷ್ಣುಸಾ ಬಾರಾಡ, ಸಹಕಾರ್ಯದರ್ಶಿ ಡಾ.ಯಶವಂತರಾವ ಮೇಂಗಜಿ,ಖಜಾಂಚಿ ರಾಜೇಂದ್ರ ಹಬೀಬ, ನಾರಾಯಣರಾವ ಹಬೀಬ,ನರಸಿಂಗಸಾ ಪವಾರ, ರಮಾಕಾಂತ ಚವ್ಹಾಣ,ಕಿಶೋರ ಆರಾಧಿ,ಅಂಬಾದಾಸ ಮಿಸ್ಕಿನ್,ರಾಧೇಶಾಮ ಚವ್ಹಾಣ,ನರಸಿಂಗ ಮೇಂಗಜಿ,ನಾರಾಯಣರಾವ ಪವಾರ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ರವೀಂದ್ರ ಮೇಂಗಜಿ ಅವರು ತಿಳಿಸಿದ್ದಾರೆ.