ಶಹಪುರದಲ್ಲಿ ಭಾರಿ ಮಳೆ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದ ನೀರು: ಶಾಸಕ ದರ್ಶನಾಪುರ ವಿಕ್ಷಣೆ

ಶಹಾಪುರ :ಆ.3:ಕುಂಭದ್ರೊಣ ಧಾರಾಕಾರವಾಗಿ ಸುರಿದ ಮಹಾಮಳೆಗೆ ಶಹಾಪೂರ ನಗರ ಸೇರಿದಂತೆ ಅನೇಕ ಗ್ರಾಮಗಳ ಮನೆಗಳಿಗೆ ಅಂಗಡಿಗಳಿಗೆ ನೀರು ನುಗ್ಗಿದ್ದು ಅಲ್ಲದೆ ರಸ್ತೆಗಳು ಚರಂಡಿಗಳು ಕೊಚ್ಚಿಕೊಂಡು ಹೋಗಿವೆ.
ನಗರದಲ್ಲಿ ಬೆಳಗಿನ ಜಾವದಿಂದಲೆ ಸುರಿದ ಮಾಹಾ ಮಳೆ ಅವಾಂತರ ಸೃಷ್ಟಿ ಮಾಡಿದ್ದು ಬಸವೇಶ್ವರ ವೃತ್ತ ಮೊಚಿಗಡ್ಡ ಮಾರುಕಟ್ಟೆ ಮತ್ತು ವಾರ್ಡ್ ನಂ.14 ಸೇರಿದಂತೆ ಅನೇಕ ಗಲ್ಲಿಗಳಲ್ಲಿ ಚರಂಡಿಗಳು ತುಂಬಿಕೊಂಡು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ತೇಲಿ ನಿಂತಿವೆ. ನಾಗರ ಪಂಚಮಿ ಹಬ್ಬಕೆಂದು ತಂದಿಟ್ಟಿದ ಆಹಾರ ಪದಾರ್ಥಗಳು ಬೇಳೆ ಕಾಳುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಈ ಕುರಿತು ಅವೈಜ್ಞಾನಿಕ ರಸ್ತೆಗಳು ಚರಂಡಿಗಳು ಕಾರಣವಾಗಿವೆ ಎಂದು ಸ್ಥಳೀಯ ನಾಗರಿಕರ
ಆರೋಪವಾಗಿದೆ.
ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಶರಣಬಸಪ್ಪ ಗೌಡ ದರ್ಶನಾಪುರ ನಗರದಲ್ಲಿನ ಮಳೆ ನೀರಿನ ಅವಾಂತರ ಕುರಿತು ಖುದ್ದಾಗಿ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು ಚರಂಡಿ ರಸ್ತೆಗಳ ಮೇಲೆ ಬರುವ ಮಳೆಯ ನೀರನ್ನು ಸಾಗಿಸಲು ಮುಂದಿನ ಕ್ರಮ ಕೈಗೊಳ್ಳುವದಾಗಿ ಅವರು ತಿಳಿಸಿದರು ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಅಧಿಕಾರಿಗಳು ಹಾಜರಿದ್ದರು.