ಶಸ್ತ್ರಚಿಕಿತ್ಸೆಗೂ ಮುನ್ನ ಮತದಾನದ ಹಕ್ಕು ಚಲಾಯಿಸಿ ಮಾದರಿ

ಬೆಂಗಳೂರು,ಏ.೨೬-ಲೋಕಸಭೆ ಚುನಾವಣೆಯ ರಾಜ್ಯದ ಮೊದಲ ಹಂತದ ಮತದಾನದಲ್ಲಿ ಪಾಲ್ಗೊಂಡ ಉತ್ಸಾಹಿ ಮತದಾರರೊಬ್ಬರು ಶಸ್ತ್ರಚಿಕಿತ್ಸೆಗೂ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಶಸ್ತ್ರಚಿಕಿತ್ಸೆಗೂ ಮುನ್ನ ಮುರಳಿಧರ್ ಅವರು ತಮ್ಮ ಹಕ್ಕು ಚಲಾಯಿಸಿ ಇತರರಿಗೂ ಮಾದರಿ ಆಗಿದೆ. ೩೯ ವರ್ಷದ ಎಚ್.ಎನ್ ಮುರಳಿಧರ್ ಇಂದು ಮಧ್ಯಾಹ್ನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅನಾರೋಗ್ಯದ ನಡುವೆಯೂ ನೋವಿನಲ್ಲೂ ಮತಕೇಂದ್ರಕ್ಕೆ ಬಂದು ಮತವನ್ನು ಚಲಾಯಿಸಿದ್ದಾರೆ.
ಮನಿಪಾಲ್ ಆಸ್ಪತ್ರೆ ವೈಟ್‌ಫೀಲ್ಡ್‌ನ ಯೂರೋಲಾಜಿ, ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮುರಳಿಧರ್‌ಗೆ ಮೂತ್ರದ್ವಾರದಲ್ಲಿ ೬ ಎಂಎಂ ಕಲ್ಲಿದೆ. ಹೀಗಾಗಿ ಮಧ್ಯಾಹ್ನ ಡಿಜೆ ಸ್ಟೆಂಟಿಂಗ್ ಸರ್ಜರಿ ಮಾಡಬೇಕಿದೆ. ಸರ್ಜರಿಗೂ ಮುನ್ನ ಖುದ್ದು ಆಂಬ್ಯುಲೆನ್ಸ್ ಮೂಲಕ ಬಂದ ಮುರಳಿಧರ್ ಅವರು ಮತದಾನ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದರೂ, ಡೋಂಟ್ ಕೇರ್ ಮಾಡದ ಮುರಳಿಧರ್ ಶಸ್ತ್ರಚಿಕಿತ್ಸೆಗೂ ಮುನ್ನ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.