
ಕಲಬುರಗಿ,ಆ 27: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪಾ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹೊಂದಿಕೊಂಡಿರುವ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಅತ್ಯಾಧುನಿಕ ಮತ್ತು ಸುಸಜ್ಜಿತ ಮಾಡ್ಯುಲರ್ ಶಸ್ತ್ರಕ್ರಿಯಾ ಮಂದಿರದ ಉದ್ಘಾಟಣೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅವರು ನೆರವೇರಿಸಿದರು.
ಹೈದಾಬಾದ ಕರ್ನಾಟಕ ಭಾಗದ ಎಲ್ಲ ಬಡ ಜನರಿಗೆ ಕಡಿಮೆ ದರದಲ್ಲಿ ಉನ್ನ ತ ಹೆಚ್ಚಿನ ಸೇವೆ ದೊರಕಲಿ ಎಂಬ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ಮಹದಾಸೆ ಮೇರೆಗೆ ಅತ್ಯಾಧುನಿಕ ಮತ್ತು ಸುಸಜ್ಜಿತ ಹೆಚ್ಚಿನ ಮಾಡ್ಯುಲ್ ಶಸ್ತ್ರಕ್ರಿಯಾ ಮಂದಿರವನ್ನು ಬಸವೇಶ್ವರ, ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗಿದೆ.
ಉದ್ಘಾಟನೆಯ ಸಮಾರಂಭದಲ್ಲಿ, ಹೈ ಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ. ಶರಣಬಸಪ್ಪಾ, ಆರ್. ಪರವಾಳ, ಕಾರ್ಯದರ್ಶಿ ಡಾ. ಜಗನ್ನಾಥ ಬಿಜಾಪುರ, ಸಹಕಾರ್ಯದರ್ಶಿ ಡಾ. ಮಹಾದೇವಪ್ಪ ರಾಂಪುರೆ, ಆಸ್ಪತ್ರೆ ಸಂಚಾಲಕ ಮತ್ತು ಆಡಳಿತ ಮಂಡಳಿಯ ಸದಸ್ಯ ಡಾ.ಎಸ್.ಬಿ. ಕಾಮರೆಡ್ಡಿ ಮತ್ತು ಎಲ್ಲ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಹೀಗೆಯೇ ಮಹಾದೇವಪ್ಪಾ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎಂ. ಪಾಟೀಲ, ಬಸವೇಶ್ವರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಬಸವರಾಜ ಪಾಟೀಲ ರಾಯಕೊಡ ಮತ್ತು ಎಲ್ಲ ವಿಭಾಗದ ಪ್ರಾಧ್ಯಾಪಕರು ಮುಖ್ಯಸ್ಥರು, ಎಲ್ಲ ವೈದ್ಯ ವೃಂದ ಮತ್ತು ವೈದ್ಯೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.