ಶರ್ಮಿಳಾ ಟಾಗೋರ್ ಹುಟ್ಟುಹಬ್ಬ: ಮನ್ಸೂರ್ ಅಲಿ ಖಾನ್ ಶರ್ಮಿಳಾರನ್ನು ನೋಡಿದ ದಿನವೇ ಹೃದಯದಲ್ಲಿ ಇರಿಸಿದ್ದರು. ಬಿಕಿನಿ ತೊಟ್ಟ ಮೊದಲ ಭಾರತೀಯ ನಟಿ!

ಬಾಲಿವುಡ್ ಇಂಡಸ್ಟ್ರಿಯ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರಾದ ಶರ್ಮಿಳಾ ಟಾಗೋರ್ ನಿನ್ನೆ ತಮ್ಮ ೭೭ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಕಾಲದಲ್ಲಿ ಬಾಲಿವುಡ್ ನಲ್ಲಿ ತುಂಬಾ ಸುಂದರ ನಟಿಯರ ದೊಡ್ಡ ಪಟ್ಟಿಯೇ ಇತ್ತು.
ಶರ್ಮಿಳಾ ಟಾಗೋರ್ ಅವರು ೮ ಡಿಸೆಂಬರ್ ೧೯೪೪ ರಂದು ಜನಿಸಿದವರು. ಅವರು ಬಾಲಿವುಡ್‌ಗೆ ಅನೇಕ ಸ್ಮರಣೀಯ ಫಿಲ್ಮ್ ಗಳನ್ನು ನೀಡಿದ್ದಾರೆ. ನಟಿ ತನ್ನ ವೃತ್ತಿಜೀವನವನ್ನು ಪ್ರಸಿದ್ಧ ಫಿಲ್ಮ್ ನಿರ್ಮಾಪಕ ಸತ್ಯಜಿತ್ ರೇ ಅವರ ಬಂಗಾಳಿ ಫಿಲ್ಮ್ ’ಅಪುರ್ ಸನ್ಸಾರ್’ ನೊಂದಿಗೆ ಪ್ರಾರಂಭಿಸಿದ್ದರು.
ಮೂರು ವರ್ಷಗಳ ಕಾಲ ಬಂಗಾಳಿ ಚಲನಚಿತ್ರಗಳಲ್ಲಿ ತನ್ನ ನಟನಾ ಕೌಶಲ್ಯವನ್ನು ಬಿಂಬಿಸಿದ ನಂತರ ಶರ್ಮಿಳಾ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಹಿಂದಿ ಫಿಲ್ಮ್ ’ಕಾಶ್ಮೀರ್ ಕಿ ಕಲಿ’
೧೯೬೪ ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಅವರು ಶಮ್ಮಿ ಕಪೂರ್ ಅವರೊಂದಿಗೆ ಸಶಕ್ತ ಅಭಿನಯವನ್ನು ಹಂಚಿಕೊಂಡಿದ್ದಾರೆ.
ಶರ್ಮಿಳಾ ಅವರು ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಹಿಂದೂ ಬಂಗಾಳಿ ಕುಟುಂಬದಲ್ಲಿ ಜನಿಸಿದ್ದರು. ಶರ್ಮಿಳಾ ಅವರ ತಂದೆ ಗಿತೀಂದ್ರನಾಥ ಟಾಗೋರ್ ಅವರು ಎಲ್ಜಿನ್ ಮಿಲ್ಸ್‌ನ ಬ್ರಿಟಿಷ್ ಇಂಡಿಯಾ ಕಂಪನಿಯ ಮಾಲೀಕ ಮತ್ತು ಜನರಲ್ ಮ್ಯಾನೇಜರ್ ಆಗಿದ್ದರು.
ನಟಿ ಶರ್ಮಿಳಾ ರ ಲವ್ ಜೀವನದ ಬಗ್ಗೆ ಮಾತನಾಡಿದರೆ, ಅವರು ಭಾರತೀಯ ಕ್ರಿಕೆಟಿಗ ಮತ್ತು ಪಟೌಡಿ ಕುಟುಂಬದ ನವಾಬ್ ಮನ್ಸೂರ್ ಅಲಿ ಖಾನ್ ಅವರನ್ನು ವಿವಾಹವಾದರು. ಅರ್ಥಾತ್ ಶರ್ಮಿಳಾ ಟಾಗೋರ್ ಭೋಪಾಲ್ ನವಾಬನ ಬೇಗಂ ಆದರು.
ಶರ್ಮಿಳಾ ಮತ್ತು ಮನ್ಸೂರ್ ಅಲಿ ಖಾನ್ ಮೊದಲು ಭೇಟಿಯಾದದ್ದು ಪಾರ್ಟಿಯಲ್ಲಿ. ಅವರ ಕೆಲವು ಸ್ನೇಹಿತರು ಇವರಿಬ್ಬರನ್ನು ಭೇಟಿಯಾಗುವಂತೆ ಮಾಡಿದ್ದರು. ಮೊದಲ ಭೇಟಿಯಲ್ಲೇ ಮನ್ಸೂರ್ ಶರ್ಮಿಳಾರಿಗೆ ಮನಸೋತಿದ್ದರು.
ಮದುವೆಯ ನಂತರ ಶರ್ಮಿಳಾ ಅವರ ಸಿನಿಮಾ ಕರಿಯರ್ ಕೊನೆಗೊಳ್ಳುತ್ತದೆ, ಅವರು ಮದುವೆಯೇ ಆಗುವುದಿಲ್ಲ …..ಎಂದೆಲ್ಲ ಕೆಲವರು ಶರ್ಮಿಳಾರ ಬಗ್ಗೆ ಅದಕ್ಕಿಂತ ಮೊದಲು ಹೇಳುತ್ತಿದ್ದರು. ಆದರೆ ಈ ವಿಷಯಗಳು ನಟಿಯ ಮೇಲೆ ಯಾವ ಪರಿಣಾಮವೂ ಬೀರಲಿಲ್ಲ, ಶರ್ಮಿಳಾ ತನ್ನ ಮದುವೆಯನ್ನು ಉತ್ತಮವಾಗಿ ನಿರ್ವಹಿಸಿದ್ದಲ್ಲದೆ ಮದುವೆಯ ನಂತರ ಅನೇಕ ಸೂಪರ್ ಹಿಟ್ ಫಿಲ್ಮ್ ಗಳನ್ನು ನೀಡಿದ್ದರು.
ಶರ್ಮಿಳಾ ಟಾಗೋರ್ ತಮ್ಮ ಕಾಲದ ಎಲ್ಲಾ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಪ್ರೇಕ್ಷಕರು ರಾಜೇಶ್ ಖನ್ನಾ ಅವರ ಜೋಡಿಯನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಶರ್ಮಿಳಾ-ರಾಜೇಶ್ ಜೋಡಿಯು ಮೊದಲು ಕಾಣಿಸಿಕೊಂಡಿದ್ದು ೧೯೬೯ ರಲ್ಲಿ ಶಕ್ತಿ ಸಾಮಂತಾ ನಿರ್ದೇಶನದ ’ಆರಾಧನಾ’ ಫಿಲ್ಮ್ ನಲ್ಲಿ. ಈ ಫಿಲ್ಮ್ ಸೂಪರ್‌ಹಿಟ್ ಎಂದು ಸಾಬೀತಾಯಿತು ಮತ್ತು ನಂತರ ’ಅಮರ್ ಪ್ರೇಮ್’, ’ಸಫರ್’, ’ದಾಗ್’, ’ಮಾಲಿಕ್’, ’ಛೋಟಿ ಬಹು’, ’ದಾಗ್’, ’ರಾಜಾ ರಾಣಿ’ ಮುಂತಾದ ಫಿಲ್ಮ್ ಗಳಲ್ಲಿ ಜೋಡಿ ಪ್ರಸಿದ್ಧಿ ಪಡೆದಿತ್ತು.’ಆವಿಷ್ಕರ್’ನಲ್ಲೂ ಒಟ್ಟಿಗೆ ಕಾಣಿಸಿಕೊಂಡರು.
ರಾಜೇಶ್ ಖನ್ನಾ ಅವರನ್ನು ಹೊರತುಪಡಿಸಿ, ಅವರು ಶಶಿ ಕಪೂರ್ ಅವರೊಂದಿಗೂ ಹೆಚ್ಚು ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ. ಶರ್ಮಿಳಾ ಶಶಿ ಕಪೂರ್ ಅವರೊಂದಿಗೆ ಸುಮಾರು ೧೨ ಫಿಲ್ಮ್ ಗಳನ್ನು ಮಾಡಿದ್ದರು, ಅದರಲ್ಲಿ ೬ ಫಿಲ್ಮ್ ಗಳು ಸೂಪರ್ ಹಿಟ್ ಆಗಿದ್ದವು ಮತ್ತು ೬ ಫಿಲ್ಮ್ ಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಇದಲ್ಲದೇ ಧರ್ಮೇಂದ್ರ ಅವರ ಜೊತೆ ಹಲವು ಹಿಟ್ ಫಿಲ್ಮ್ ಗಳನ್ನೂ ನೀಡಿದ್ದಾರೆ. ಬಿಕಿನಿ ತೊಟ್ಟ ಮೊದಲ ಭಾರತೀಯ ನಟಿ ಶರ್ಮಿಳಾ ಟಾಗೋರ್ ಎಂದು ಕೂಡ ಹೇಳಲಾಗುತ್ತದೆ. ೧೯೬೭ರಲ್ಲಿ ತೆರೆಕಂಡ ‘ಆನ್ ಈವ್ನಿಂಗ್ ಇನ್ ಪ್ಯಾರಿಸ್’ ಫಿಲ್ಮ್ ನಲ್ಲಿ ಶರ್ಮಿಳಾ ಟಾಗೋರ್ ಈಜುಡುಗೆ ಧರಿಸಿದ್ದರು. ಅಂತಹ ಸಾಧನೆ ಮಾಡಿದ ಮೊದಲ ಭಾರತೀಯ ನಟಿ.! ಈ ಹಿಂದೆ ಫಿಲ್ಮ್‌ಫೇರ್ ಮ್ಯಾಗಜಿನ್‌ಗಾಗಿ ಟು ಪೀಸ್ ಬಿಕಿನಿ ತೊಟ್ಟಿದ್ದರು. ಆಗ ಈಕೆಯ ಈ ಬಿಕಿನಿ ಲುಕ್ ಬಗ್ಗೆ ಜನರಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಮದುವೆಗೂ ಮುನ್ನವೇ ಅಂಕಿತಾ ಲೋಖಂಡೆ ಆರೋಗ್ಯ ಹದಗೆಟ್ಟಿದ್ದು, ನಟಿ ಆಸ್ಪತ್ರೆಗೆ ದಾಖಲು

ಬಾಲಿವುಡ್ ಮತ್ತು ಕಿರುತೆರೆ ನಟಿ ಅಂಕಿತಾ ಲೋಖಂಡೆ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ. ವಾಸ್ತವವಾಗಿ, ನಟಿ ಮದುವೆಗೆ ಮುಂಚೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ’ಪವಿತ್ರಾ ರಿಶ್ತಾ’ ನಟಿಯನ್ನು ಮಂಗಳವಾರ ರಾತ್ರಿ ಮುಂಬೈನ ಸಬರ್ಬನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು


ವರದಿಗಳ ಪ್ರಕಾರ, ಅಂಕಿತಾ ಲೋಖಂಡೆ ಅವರಿಗೆ ಕಾಲಿನ ಉಳುಕು ಇತ್ತು, ನಂತರ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಂಕಿತಾಗೆ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಭಿಮಾನಿಗಳಿಗೆ ಸಮಾಧಾನದ ಸುದ್ದಿ ಏನೆಂದರೆ ಅಂಕಿತಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ದಿನಗಳಲ್ಲಿ ನಟಿ ಅಂಕಿತಾ ಲೋಖಂಡೆ ಅವರ ಮನೆಯಲ್ಲಿ ಮದುವೆಯ ಆಚರಣೆಗಳು ಪ್ರಾರಂಭವಾಗಿವೆ . ಅಂಕಿತಾ ಲೋಖಂಡೆ ಇದೇ ಡಿ. ೧೪ ರಂದು ತನ್ನ ಗೆಳೆಯ ವಿಕ್ಕಿ ಜೈನ್ ಅವರನ್ನು ವರಿಸಲಿದ್ದಾರೆ. ಇತ್ತೀಚೆಗೆ, ನಟಿ ತನ್ನ ಸ್ನೇಹಿತರಿಗೆ ಮದುವೆ ಕಾರ್ಡ್ ನೀಡಿದ್ದರು, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿವೆ. ಅಂಕಿತಾ ಮತ್ತು ವಿಕ್ಕಿಯ ನಿಶ್ಚಿತಾರ್ಥ ಮತ್ತು ಮೆಹಂದಿ ಸಮಾರಂಭವು ೧೨ ಡಿಸೆಂಬರ್ ಗೆ ನಡೆಯಲಿದೆ. ಅವರ ಮದುವೆಯ ಸ್ಥಳ ’ಗ್ರ್ಯಾಂಡ್ ಹಯಾತ್ ಹೋಟೆಲ್ ಮುಂಬೈ’. ಅಂಕಿತಾ ಮತ್ತು ವಿಕ್ಕಿ ಅವರ ಆಪ್ತ ಮೂಲಗಳ ಪ್ರಕಾರ, ದಂಪತಿ ಡಿಸೆಂಬರ್ ೧೪ ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ವಿವಾಹ ಕಾರ್ಯಕ್ರಮಗಳು ಡಿಸೆಂಬರ್ ೧೨ ರಿಂದ ೧೪ ರವರೆಗೆ ಮೂರು ದಿನಗಳ ಕಾಲ ನಡೆಯಲಿವೆ.

ವಿಕ್ಕಿ ಕೌಶಲ್ ರಿಗಿಂತ ಮೊದಲು ಕತ್ರಿನಾ ಕೈಫ್ ಸೂಪರ್‌ಹಿಟ್ ನಟರೊಂದಿಗೆ ಸುದ್ದಿ ಮಾಡಿದ್ದಾರೆ, ಅವರು ಯಾರೆಂದು ಗೊತ್ತೇ!

ಬಾಲಿವುಡ್‌ನ ’ಬಾರ್ಬಿ ಡಾಲ್’ ಕತ್ರಿನಾ ಕೈಫ್ ಕೊನೆಗೂ ತನ್ನ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಇಂದು ಕತ್ರಿನಾ ಅವರು ನಟ ವಿಕ್ಕಿ ಕೌಶಲ್ ಜೊತೆ ವಿವಾಹ ಬಂಧನದಲ್ಲಿ ಸಿಲುಕಲಿದ್ದಾರೆ. ಈ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ಎರಡು ದಿನಗಳ ಹಿಂದೆಯೇ ಶುರುವಾಗಿವೆ. ಇಂದು ಡಿಸೆಂಬರ್ ೯ ರಂದು ವಿಕ್ಕಿ ಕತ್ರಿನಾ ಶಾಶ್ವತವಾಗಿ ಜೋಡಿಯಾಗಲಿದ್ದಾರೆ.


ಕತ್ರಿನಾ ಕೈಫ್ ಅವರ ಹೆಸರು ಉದ್ಯಮದ ಅತ್ಯಂತ ಸುಂದರ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರೆಂದು ಸೇರಿಸಲಾಗಿದೆ. ಹಾಂಕಾಂಗ್‌ನಲ್ಲಿ ಹುಟ್ಟಿ ಲಂಡನ್‌ನಲ್ಲಿ ಬೆಳೆದ ಕತ್ರಿನಾ ಮುಂಬೈಗೆ ಬಂದಿದ್ದರು.ಅವರು ಪ್ರತಿಯೊಂದು ಕನಸನ್ನು ತನ್ನ ಕಣ್ಣುಗಳಲ್ಲಿ ತುಂಬಿಕೊಂಡು ನನಸಾಗಿಸಿಕೊಂಡಿದ್ದಾರೆ.
೩೮ ನೇ ವಯಸ್ಸಿನಲ್ಲಿ, ಕತ್ರಿನಾ ಇಂದು ತನ್ನ ಮನೆಯಲ್ಲಿ ನೆಲೆಸಲಿದ್ದಾರೆ ಕತ್ರಿನಾ ಕೈಫ್ ಗೆ ತಾನು ವಧು ಆಗುವ ಕನಸು ಈಗ ನನಸಾಗಲಿದೆ.
ವಿಕ್ಕಿ ಕೌಶಲ್ ರಿಗಿಂತ ಮೊದಲು ನಟಿಯ ಜೀವನದಲ್ಲಿ ಅನೇಕ ಸ್ಟಾರ್‌ಗಳು ಬಂದಿದ್ದರು. ಆದರೆ ಕತ್ರಿನಾ ತಮ್ಮ ಜೀವನ ಸಂಗಾತಿಯಾಗಿ ವಿಕ್ಕಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕತ್ರಿನಾ ಯಾವೆಲ್ಲ ನಟರ ಜೊತೆ ಬಹಿರಂಗವಾಗಿ ಲವ್ ಮಾಡಿದ್ದಾರೆ ನೋಡೋಣ.
ಕತ್ರಿನಾ ಕೈಫ್ ಜೀವನದಲ್ಲಿ ಪ್ರೀತಿಯ ಮೊದಲ ವಸಂತವನ್ನು ಸಲ್ಮಾನ್ ಖಾನ್ ತಂದವರು. ಕತ್ರೀನಾ ಇಂದು ಕುಳಿತಿರುವ ಸ್ಥಾನವನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಸಲ್ಮಾನ್ ಖಾನ್ ರ ಪಾತ್ರ ಬಹುದೊಡ್ಡದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೈನೆ ಪ್ಯಾರ್ ಕ್ಯೋಂ ಕಿಯಾ ಫಿಲ್ಮ್ ನ ಶೂಟಿಂಗ್ ವೇಳೆ ಸಲ್ಲು ಮಿಯಾಂ ಸುಂದರಿ ಕತ್ರಿನಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಸಲ್ಮಾನ್ ಖಾನ್ ಅವರು ಕತ್ರಿನಾ ಬಗ್ಗೆ ಎಷ್ಟು ಗಂಭೀರವಾಗಿದ್ದರು ಎಂದರೆ ಅವರು ಕತ್ರಿನಾರನ್ನು ’ಮಿಸೆಸ್ ಖಾನ್’ ಆಗಿ ಮಾಡಿಕೊಳ್ಳಲು ಒಪ್ಪಿಕೊಂಡರು. ವಿಷಾದದ ಸಂಗತಿಯೆಂದರೆ, ಸಲ್ಮಾನ್ ರ ಈ ಆಸೆ ಮತ್ತು ಅವರ ಕನಸು ಎರಡೂ ಈಡೇರಲಿಲ್ಲ.
ಸಲ್ಮಾನ್ ಖಾನ್ ರ ಹೃದಯ ಮುರಿದ ನಂತರ, ಕತ್ರಿನಾ ಕೈಫ್ ಚಾಕೊಲೇಟ್ ಬಾಯ್ ರಣಬೀರ್ ಕಪೂರ್‌ಗೆ ಹೃದಯ ನೀಡಿದರು. ’ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಸಿನಿಮಾದ ಸಮಯದಲ್ಲಿ ರಣಬೀರ್ ಮತ್ತು ಕತ್ರಿನಾ ಹತ್ತಿರವಾಗಿದ್ದರು. ಕೆಲವೇ ದಿನಗಳಲ್ಲಿ, ಕತ್ರಿನಾ ರಣಬೀರ್ ರೊಂದಿಗೆ ಪ್ರೀತಿಯಲ್ಲಿ ಬಿದ್ದರು.
ಯಾವಾಗ ಇವರಿಬ್ಬರ ಪ್ರೀತಿಯ ವಿಷಯ ತಿಳಿಯುತ್ತದೆಯೋ ಆಗ ಅವರೂ ಸಹ ಬಹಿರಂಗವಾಗಿಯೇ ಪ್ರೀತಿಸತೊಡಗಿದರು. ಡೇಟಿಂಗ್ ಮಾಡಿದ ಸ್ವಲ್ಪ ಸಮಯದ ನಂತರ, ರಣಬೀರ್ ತನ್ನ ಮನೆಯನ್ನು ತೊರೆದು ಕತ್ರಿನಾ ಜೊತೆ ಲಿವ್-ಇನ್‌ಗೆ ತೆರಳಿದರು. ಕತ್ರಿನಾ ಶ್ರೀಮತಿ ಕಪೂರ್ ಆಗಲು ಬಯಸಿದ್ದರು .ಆದರೆ ರಿಷಿ ಮತ್ತು ನೀತು ಕಪೂರ್ ಮಗನ ಆಯ್ಕೆಯನ್ನು ಇಷ್ಟಪಡಲಿಲ್ಲ.
೭ ವರ್ಷಗಳ ಡೇಟಿಂಗ್ ನಂತರ, ರಣಬೀರ್ ಆಲಿಯಾ ಭಟ್ಟ್ ಅವರಿಗೆ ಕತ್ರಿನಾರ ಸ್ಥಾನವನ್ನು ನೀಡುತ್ತಾರೆ.
ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅವರ ಲವ್ ಸ್ಟೋರಿಯ ನಂತರ ಹೃತಿಕ್ ರೋಷನ್ ಹೆಸರು ಕೂಡ ಒಂದು ಟ್ವಿಸ್ಟ್ ಅನ್ನು ಹೊಂದಿತ್ತು.
ಹೌದು, ರಣಬೀರ್ ಜೊತೆ ಕತ್ರಿನಾ ಡೇಟಿಂಗ್ ಮಾಡುತ್ತಿದ್ದ ದಿನಗಳು. ‘ಬ್ಯಾಂಗ್-ಬ್ಯಾಂಗ್’ ಸಿನಿಮಾದ ಶೂಟಿಂಗ್ ವೇಳೆ ಹೃತಿಕ್ ಜೊತೆಗಿನ ಆಪ್ತತೆಯೂ ಹೆಚ್ಚಿತ್ತು. ಕಂಗನಾ ರಣಾವತ್ ಕೂಡ ಇಬ್ಬರ ನಡುವೆ ಪ್ರೇಮದ ಕಿಚಡಿ ಕುದಿಯುತ್ತಿರುವುದನ್ನು ಬಹಿರಂಗಪಡಿಸಿದ್ದರು. ಹೃತಿಕ್ ಅವರೊಂದಿಗಿನ ವಿವಾದದಲ್ಲಿ, ಕಂಗನಾ ಹೇಳಿದ್ದರು-
”ಅವರು ನಾಯಕಿಯೊಂದಿಗೆ ಮನಾಲಿಯಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ” ಎಂದು. ಕಂಗನಾ ಹೆಸರು ಹೇಳದೆ ಕತ್ರಿನಾ ಮತ್ತು ಹೃತಿಕ್ ಅವರ ಸಂಬಂಧವನ್ನು ತೋರಿಸಿದ್ದರು.ಈ ಸಂಬಂಧದ ಸುದ್ದಿಯಿಂದ ರಣಬೀರ್ ಕಪೂರ್ ಕೂಡ ಅಭದ್ರತೆಗೆ ಒಳಗಾಗಿದ್ದರು ಎನ್ನಲಾಗಿದೆ.ಆ ದಿನಗಳಲ್ಲಿ ಸಲ್ಮಾನ್ ಕೂಡ ಹೃತಿಕ್ ಗೆ ಕತ್ರಿನಾರಿಂದ ದೂರ ಇರುವಂತೆ ಸೂಚನೆ ನೀಡಿದ್ದರು.
ಸಿದ್ಧಾರ್ಥ್ ಮಲ್ಹೋತ್ರಾ:”ಬಾರ್ ಬಾರ್ ದೇಖೋ” ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕತ್ರೀನಾ ಕೈಫ್ ಅವರ ಹೆಸರು ಸುಂದರ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೂ ಸಹ ಕೇಳಿಬಂತು. ಇಬ್ಬರ ಆಪ್ತತೆ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಶೀಘ್ರದಲ್ಲೇ ಅವರ ಮಾರ್ಗಗಳು ಬೇರ್ಪಟ್ಟವು.